Saturday, March 19, 2011

ನಾಡು ಮರೆತ ನಾಯಕರು

ಸ್ವತಂತ್ರ್ಯ ಗಂಗೆಗೆ ಸಾವಿರ ತೊರೆಗಳಿವೆ. ಕೇವಲ ಶಾಂತಿ ಮೂಲದಿಂದ ಮಾತ್ರ ಸ್ವ ತಂತ್ರ್ಯ ಲಭಿಸಿದೆ ಎಂಬ ಕಲ್ಪನೆಯಲ್ಲಿರುವ ನಾವುಗಳು ಅದರ ಜೊತೆಯಲ್ಲಿ ಸ್ವತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಕ್ರಾಂತಿಕಾರಿ ಚೇತನಗಳ ಬಗ್ಗೆ ತಿಳಿದು-ಕೊಳ್ಳುವುದು ಅಗತ್ಯವಾಗಿದೆ. ಶಾಂತಿದೂತರನೆಲ್ಲ ಪಠ್ಯಪುಸ್ತಕದಲ್ಲಿ ಅಳವಡಿಸಿ ಅವರೇ ಸ್ವತಂತ್ರ್ಯ ಹೋರಾಟದ ಸೇನಾನಿಗಳು ಆವರಿಂದಲೇ ಭಾರತಕ್ಕೆ ಸ್ವತಂತ್ರ್ಯ ಸಿಕ್ಕಿದ್ದು, ಎಂದು ಬಿಂಬಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿದ ಕರಿನೀರಿನ ಶಿಕ್ಷೆಗೆ ಗುರಿಯಾದ ಕ್ರಾಂತಿಕಾರಿಗಳನ್ನೆಲ್ಲ ಇತಿಹಾಸದ ಪುಟಗಳಿಂದ ಅಳಿಸಿ ಹಾಕುವ ಪ್ರಯತ್ನ ನಡೆದಿದೆ.
ಸ್ವಾತಂತ್ರ್ಯ ಹೋರಾಟ-ದಲ್ಲಿ ಪ್ರಮುಖವಾಗಿ ಎರಡು ಗುಂಪುಗಳಿದ್ದವು. ಒಂದು ಶಾಂತಿಪ್ರಿಯ ಹೋರಾಟ ಗಾರರು ಮತ್ತೊಂದು ಕ್ರಾಂತಿ ಕಾರಿಗಳ ಪಡೆ. ಎರಡು ಪಂಥಗಳ ದಾರಿ ಬೇರೆಯಾಗಿದ್ದೇನೋ ನಿಜ, ಆದರೆ ಅಂತಿಮ ಗುರಿ ಒಂದೇ ಆಗಿತ್ತು. ಅದು ಭಾರತ ಮಾತೆಯ ಬಂಧನ ಮುಕ್ತಿ. ಆದರೆ ಸ್ವತಂತ್ರ್ಯ ಸಿಕ್ಕಿದ್ದು ಕೇವಲ ಶಾಂತಿಪ್ರಿಯರಿಂದಲೇ ಎಂದು ಹೇಳುತ್ತಾ ಕ್ರಾಂತಿಕಾರಿ ಹೋರಾಟ ಗಾರರನ್ನು ಉಗ್ರಗಾಮಿ-ಗಳೆಂದು ಪರಿಗಣಿಸಿ ಅವರ ತ್ಯಾಗ ಬಲಿದಾನಗಳನ್ನು ಲೆಕ್ಕಿಸದೆ ಇತಿಹಾಸದಲ್ಲಿ ತೆರೆಮರೆಗೆ ಸರಿಸಲಾಗಿದೆ.
ಇತಿಹಾಸದಲ್ಲಿ ತೆರೆಮರೆಯಾಗಿರುವ ಕ್ರಾಂತಿಕಾರಿಗಳ ಕುರಿತಾದ ಸಂಕ್ಷಿಪ್ತ ವಿವರ ಈ ಕೆಳಗೆ ಕೊಡಲಾಗಿದೆ.
ಕ್ರಾಂತಿಗೆ ಮುನ್ನುಡಿ ಬರೆದ
ಛಾಪೇಕರ್ ಸಹೋದರರು
ನಮ್ಮ ಯುವಪೀಳಿಗೆಗೇನು ಗೊತ್ತು ಇತಿಹಾಸ ತೋರಿದ್ದನ್ನು ಸುಮ್ಮನೆ ನಂಬಿಕೊಂಡು ನಡೆದು ಬಿಡುತ್ತಾರೆ. ಆದರೆ ತೆರೆಮರೆಗೆ ಸರಿದ ಮಹತ್ಮರೆಷ್ಟೋ ಜನ ಗೊತ್ತೇ ಇಲ್ಲದೆ ಹೋಗಿದ್ದಾರೆ. ಅಂತಹವರಲ್ಲಿ ಈ ಛಾಪೇಕರ ಸಹೋರರು ಕೂಡ ಇದ್ಧಾರೆ.
ಶ್ರೀ ಹರಿ ಛಾಪೇಕರ ಅವರ ಮೂವರು ಮಕ್ಕಳಾದಂತಹ ಧಾಮೋದರ, ಬಾಲಕ್ರಿಷ್ಣನ್ ಮತ್ತು ವಾಸುದೇವ ಅವರು ಹುಟ್ಟಿದ್ದು ಮಹರಾಷ್ಟ್ರದ ಛರುಷ್ವಾರ್ ಎಂಬ ಹಳ್ಳಿಯಲ್ಲಿ ವಿದ್ಯಾವಂತರಾಗಿದ್ದ ಈ ಸಹೋದರರು ಕ್ರಾಂತಿಕಾರಿ ಮನೋಭಾವದವರಾಗಿದ್ದರು. ವ್ಯಾಯಾಮ ಯೋಗ ಮಾಡಿಕೊಂಡು ಕಟ್ಟು ಮಸ್ತಾಗಿದ್ಧವರು.
ಮರಾಠಿ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಬಾಲಗಂಗಾಧರ ತಿಲಕರ `ಕೇಸರಿ' ಪತ್ರಿಕೆಯನ್ನು ಓದುವುದರೊಂದಿಗೆ ಪ್ರಭಾವಿತರಾಗಿದ್ದರು. ಹೀಗಾಗಿ ಅವರನ್ನು ಸಹಜವಾಗಿಯೇ ಕ್ರಾಂತಿಕಾರಕ ಭಾವನೆ ಮೈಗೂಡಿ ಬಿಟ್ಟಿದ್ದವು. ಅದೇ ಸಮಯಕ್ಕೆ ಸರಿಯಾಗಿ ಅಂದರೆ 1897ರಲ್ಲಿ ಪುಣೆ ನಗರ ಸಂಪೂರ್ಣ ಪ್ಲೇಗಿನಿಂದ ನರಳುತ್ತಿತ್ತು. ಜನರ ಸಾವು, ಅಕ್ರಂದನ ಮುಗಿಲು ಮುಟ್ಟಿತ್ತು. ಆದರೆ ಬ್ರಿಟಿಷ್ ಸರ್ಕಾರ ಯಾವುದೇ ರೀತಿಯ ಕಾರ್ಯವನ್ನು ಮಾಡದೇ ಹೋಯಿತು. ಆದರೆ ಬ್ರಿಟನ್ ರಾಣಿ ವಿಕ್ಟೋರಿಯಾಳು ಸಿಂಹಾಸನ ಏರುವ ಕಾರ್ಯಕ್ರಮವನ್ನು ವಿಜೃಂಬಣೆಯಿಂದ ನಡೆಸುವು-ದಕ್ಕೆ ಬ್ರಿಟಿಷ್ ಸಕರ್ಾರ ತೀಮರ್ಾಣಿಸಿತು. ಪ್ಲೇಗ್ ಕಮೀಷನರ್ ಆಗಿ ನೇಮಕಗೊಂಡಿದ್ದ ಬ್ರಿಟಿಷ್ ಅಕಾರಿ ಮಿ.ರಾಂಡ್ ಪ್ಲೇಗ ನೀರ್ಮುಲನೆ ಬದಲು ರಾಣಿ ಪಟ್ಟಾಕಾರದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದು, ಮತ್ತು ಅವನ ದುರ್ನಡತೆ ಛಾಪೇಕರ್ ಸಹೋದರರನ್ನು ಕೆರಳಿಸಿದವು. ಹೀಗಾಗಿ ಛಾಪೇಕರ್ ಸಹೋದರರು ರಾಂಢನನ್ನು ಗುಂಡಿಟ್ಟು ಕೊಂದು ಕ್ರಾಂತಿಕಾರಕ ಹೋರಾಟಕ್ಕೆ ಭಾಷ್ಯ: ಬರೆದರು. 1905 ಭಂಗಾಳ ವಿಭಜನೆ-ಯಾದಾಗ ದೇಶದ ಇತರ ಭಾಗಗಳಲ್ಲಿಯೂ ಸಹ ಕ್ರಾಂತಿಯ ವಾತಾವರಣೆ ಸೃಷ್ಟಿಸಿದರು. ಅವರನ್ನು ಸೆರೆಹಿಡಿದ ಬ್ರಿಟಿಷ್ ಸಕರ್ಾರ ಮೂರು ಸಹೋದರರನ್ನು ಕ್ರಮವಾಗಿ 1898 ರ ಏಪ್ರೀಲ್ 8, 1899ರ ಮೇ 8, 1899 ಮೇ ಹತ್ತರಂದು ನೇಣುಗಂಬಕ್ಕೇರಿಸಿದರು. ಕ್ರಾಂತಿಗೆ ನಾಂದಿ ಹಾಡಿದ ಈ ವೀರ ಸಹೋದರರು ಇಂದು ಎಷ್ಟೋ ಜನರಿಗೆ ಗೊತ್ತೇ ಇಲ್ಲದ್ದು ನಮ್ಮ ದುರದೃಷ್ಟವಲ್ಲದೆ ಮತ್ತೇನು?
ಅಪ್ರತಿಮ ದೇಶಭಕ್ತ
ವಿನಾಯಕ ದಾಮೋದರ ಸಾವರ್ಕರ್
ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಸೆರೆಮನೆಗೆ ಸೇರಿದವರು ಲಕ್ಷೋಪಾದಿಯಲ್ಲಿದ್ದಾರೆ. ಆದರೆ ಸ್ವತಂತ್ರ್ಯ ಗಂಗೆಯ ಒಡಲಿಗೆ ಧುಮುಕಿ `ಕರಿನೀರಿನ' (ಕಾಲಾಪಾನಿ) ಶಿಕ್ಷೆ ಅನುಭವಿಸಿದ ಅಪ್ರತಿಮ ಹೋರಾಟಗರ ಎಂದರೆ ವಿನಾಯಕ ದಾಮೋದರ್ ಸಾವರಕರ್ (ವೀರ ಸಾವರ್ಕರ್)
ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲದೆ, ಕ್ರಾಂತಿಕಾರರು, ಕವಿ, ಚಿತ್ರಕಾರ, ಸಮಾಜ ಸುಧಾರಕರಾಗಿ ಜನರ ಮನಸ್ಸಿನಲ್ಲಿ ಅಳಿಸಲಗದ ಮುದ್ರೆ ಒತ್ತಿದ್ದಾರೆ.
1883 ರ ಮೇ 28 ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಾಗ್ರು ಎಂಬ ಹಳ್ಳಿಯಲ್ಲಿ ಸಾವರ್ಕರರು ಜನಿಸಿದರು. ಶಾಲಾ ದಿನಗಳಿಂದಲೆ ದೇಶಭಕ್ತಿಯನ್ನು ಮೈಗೂಡಿಸಿಕೊಂಡರು. ಪುಣೆಯ ಪಗ್ಯರ್ುಸನ್ ಕಾಲೇಜಿನಲ್ಲಿ ಪದವಿ ಮಗುಸಿದ ಇವರು ಮುಂಬೈ ಲಾ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿದರು. ಕಲಿಕೆಯ ಸಮಯದಲ್ಲಿಯೇ ಸ್ವಾತಂತ್ರ್ಯದ ಹುಚ್ಚು ಹಿಡಿಸಿಕೊಂಡ ಅವರು `ಅಭಿನವ ಭಾರತ' ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಕಟ್ಟಿದರು.
ಬ್ಯಾರಿಸ್ಟರ್ ಆಗಬೇಕಿದ್ದವರು ಬಂಧನವಾದರು
1906 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದ ಸಾವರ್ಕರ್ರವರು ಅಲ್ಲಿಯೂ ತಮ್ಮ ಕ್ರಾಂತಿಕಾರಕ ನಿಲುವುಗಳಿಂದ ಹಿಂದೆ ಸರಿಯಲಿಲ್ಲ.
ಇಟಲಿಯ ಒಬ್ಬ ಶ್ರೇಷ್ಠ ದೇಶಭಕ್ತನ ಕುರಿತಾಗಿ ಒಂದು ಪುಸ್ತಕವನ್ನು ರಚಿಸಿದರು. ಇದನ್ನು ಭಾರತಕ್ಕೆ ತಂದು ತಜರ್ುಮೆಮಾಡಿ ಪ್ರಕಟಿಸಿದ ತಪ್ಪಿಗೆ ಸಾವರ್ಕರ್ ಅಣ್ಣ ಗಣೇಶ್ರವರು ಜೈಲುಪಾಲಾದರು. 1857 ರ ಮಹಾದಂಗೆಯ ಕ್ರಾಂತಿಕಾರಿ ಹೋರಾಟಗಾರನೊಬ್ಬನ ಕುರಿತು ``ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್" ಎಂಬ ಪುಸ್ತಕ ರಚಿಸಿದರು. ಇದನ್ನು ಸಕರ್ಾರ ತಕ್ಷಣ ನಿಷೇಸಿತು.
ಹೀಗೆಯೇ ಕ್ರಾಂತಿಕಾರಿ ಮನೋಭಾವದೊಂದಿಗೆ ಅಭಿನವ ಭಾರತದ ಒಂದು ಶಾಖೆಯನ್ನು ಇಂಗ್ಲೆಂಡಿನಲ್ಲಿ ಆರಂಭಿಸಿ ಬ್ರಿಟೀಷರ ಕೆಂಗಣ್ಣಿಗೆ ಗುರಿಯಾದರು. ಕರ್ಜನ್ ವೈಟ್ನ ಮರಣದ ಕಾರಣದಿಂದ ದಸ್ತಗಿರಿಯಾದ ಸಾವರ್ಕರ್ ವಿಚಾರಣೆಗಾಗಿ ಭಾರತಕ್ಕೆ ಬಂದರು. ಬ್ಯಾರಿಸ್ಟರ್ ಆಗಿ ಸೂಟು ಬೂಟು ಧರಿಸಿಕೊಂಡ ಭಾರತಕ್ಕೆ ಬರಬೇಕಿದ್ದ ಮಹಾತ್ಮ ಬಂಯಾಗಿ ಬಂದಿದ್ದರು.
ಕನಿ ನೀರಿನ ಶಿಕ್ಷೆಗೆ ಗುರಿಯಾಗಿ ಅಂಡಮಾನಿನ ನರಕಸದೃಷವಾದ ಸೈಲ್ಯೂಲರ್ ಜೈಲು ಸೇರಿದರು. ಅಲ್ಲಿಯೂ ಪಟ್ಟು ಬಿಡದ ಅವರು ಸುಧಾರಣಾ ಕಾರ್ಯ ಮುಂದುವರೆಸಿದರು. ತಾವಿದ್ದ ಜೈಲಿನ ಕೊಠಡಿಗಳ ಗೋಡೆಗಳ ಮೇಲೆ ಹತ್ತುಸಾವಿರ ದೇಶ ಭಕ್ತಿಯ ಸಾಲುಗಳನ್ನು ಮಳೆಯಿಂದ ಕೆತ್ತಿ ಸ್ವತಂತ್ರ್ಯದ ಸಂದೇಶ ಸಾರುತ್ತಿದ್ದರು. ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರ ಕೃತ್ಯಗಳನ್ನು ಖಂಡಿಸಿದರು. 23 ವರ್ಷಗಳ ಸುರ್ಘ ಕಷ್ಟದ ಹಾದಿಯನ್ನು ಸವೆಸಿ ಬಂದ ಸಾವರ್ಕರಿಗೆ ಗಾಂಜಿ ನೇತೃತ್ವದ ಕಾಂಗ್ರೇಸ್ನ ಮೇಲೆ ನಂಬಿಕೆ ಇರಲಿಲ್ಲ. ಹೀಗಾಗಿ ಹಿಂದೂ ಮಹಾಸಭೆ ಸೇರಿ ಅವರ ಅಧ್ಯಕ್ಷರಾದರು. (ಒಂದು ವೇಳೆ ಕಾಂಗ್ರೇಸ್ಸೇರಿದ್ದರೆ ಆವರು ಉಚ್ಛ ಶ್ರೇಣಿ ನಾಯಕರಾಗಿರುತ್ತಿದ್ದರೇನೋ?)
1940 ರಲ್ಲಿ ಬ್ರಿಟಿಷರದಿಂದ ತಪ್ಪಿಸಿಕೊಂಡು ಭಾರತದಿಂದ ಹೋಗುವ ಮೊದಲು ಸುಭಾಷ ಚಂದ್ರ ಭೊಸರು ಸಾವರ್ಕರ್ರನ್ನು ಭೇಟಿ ಮಾಡಿದ್ದರು. ಅವರ (ಐ್ಞಛಜಿಚ್ಞ ಘೆಚಠಿಜಿಟ್ಞಚ್ಝ ಅ್ಟಞಢ)ಗೆ ಸಹಾಯಕವಾಗಲೆಂದು ಸೈನ್ಯಕ್ಕೆ ಸೇರಲು ಯುವಕರಿಗೆ ಕರೆನೀಡುತ್ತಿದ್ಧರು. ``ಇಂಡಿಯಾದ ರಾಜಕೀಯವನ್ನು ಭಾರತೀಯಗೊಳಿಸಿ, ಮತ್ತು, ಹಿಂದುತ್ವವನ್ನು ಮಿಲಿಟರಿಗೊಳಿಸಿ" ಎಂದು ಸಂದೇಶವಿತ್ತರು.
ಇಂತಹ ಅಪ್ರತಿಮ ದೇಶ ಪ್ರೇಮಿಯನ್ನು ಗಾಂಜಿ ಮರಣದ ನಂತರ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಈ ಮಹಾನ್ ಸೇನಾನಿ, ದೇಸಭಕ್ತನನ್ನು ಇತಿಹಾಸದ ಪುಟದಲ್ಲಿ ಖಳನಾಯಕನಂತೆ ಗುರುತಿಸಲು ಹೋರಟಿರುವುದು ದುರುದೃಷ್ಟವೇ ಸರಿ.
ನನ್ನ ದೇಹವನ್ನು ಛಿದ್ರಮಾಡಿ ಎಂದ ರ ಸುಶಿಲ್ ಸೇನ್
ಹದಿನೈದರ ಹರೆಯ ಎಂದರೆ ಸಧ್ಯ ನಾವು ಇನ್ನೂ ಚಿಕ್ಕವರು ಬುದ್ದಿ ಕಡಿಮೆ ಇರುವವರು ಎಂದು ಅಲಕ್ಷ್ಯ ತೋರುತ್ತೇವೆ. ಆದರೆ 15 ನೇ ವಯಸ್ಸಿನಲ್ಲಿಯೇ ಕ್ರಾಂತಿಕಾರಕ ನಿಲುವು ತೋರುವುದರೊಂದಿಗೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ ದೀಮಂತ ನಾಯಕ ಸುಶೀಲ್ ಸೇನ್.
1907 ರ ಅಗಸ್ಟ್ 26 ರಂದು ಕಲ್ಕತ್ತಾದ ಲಾಲ್ kOTಅನತ್ತ ಯುವಕರ ಗುಂಪೊಂದು ಘೋಷಣೆ ಕೂಗುತ್ತ ಹೊರಟಿತ್ತು. ಇದನ್ನು ಸಹಿಸದ ಬ್ರಿಟಿಷ ಸಕರ್ಾರದ ಗುಲಾಮಿ ಪೊಲೀಸರು ಇವರ ಮೇಲೆ ಲಾಠಿ ಪ್ರಹಾರ ಆರಂಭಿಸಿತು. ಹೊಡೆದಷ್ಟು ಜೋರಾಗಿ `ವಂದೇ ಮಾತರಂ' ಕೂಗೂ ಮಾರ್ಧನಿಸುತ್ತಿತ್ತು. ರೊಚ್ಚಿಗೆದ್ದ ಪೊಲೀಸರ ಲಾಠಿಚಾಜರ್್ ದಾರಿ ಹೋಕರ ಮೇಲೂ ಬಂದಿತು. ಆಗ ಅದನ್ನು ಸಹಿಸದ 15 ರ ಹರೆಯದ ಬಾಲಕ ಪೊಲೀಸರ ಕೈಲಿದ್ದ ಲಾಠಿ ಕಿತ್ತುಕೊಂಡು `ನಿನ್ನ ಲಾಠಿಯ ರುಚಿ ನೀನು ಸ್ವಲ್ಪ ನೋಡು' ಎಂದವನೇ ದಪ್ಪವಾದ ವ್ಯಕ್ತಿಯನ್ನು ಮನಸೋ ಇಚ್ಛೆ ಥಳಿಸಿದನು. ಇವನು ಹೊಡೆದ ವೇಗ ಎಷ್ಟಿತ್ತೆಂದರೆ ಇವನನ್ನು ಹಿಡಿಯಲು ಪೊಲೀಸರು ಹರಸಾಹಸ ಪಟ್ಟರು. ಆ ರ ಯುವಕ ಬೇರಾರು ಅಲ್ಲ. ಸುಶಿಲ್ ಸೇನ್.
ಕಲ್ಕತ್ತಾದ `ಒಂದೇ ಮಾತರಂ` ಪತ್ರಿಕೆಯ ಸಂಪಾದಕ ಅರವಿಂದರು, `ಭಯವನ್ನು ಬಿಟ್ಟು ಬಿಡು' ಎನ್ನುವ ಘೋಷಣೆ ಈ ಯುವಕನ ಎದೆಯಲ್ಲಿ ಹೊಕ್ಕು ಬಿಟ್ಟಿತ್ತು.
ಹುಡುಗನನ್ನು ಮ್ಯಾಜಿಸ್ಟ್ರೇಟರ್ ಮುಂದೆ ನಿಲ್ಲಿಸಲಾಯಿತು. ಆಗ ಹುಡುಗನಿಗೆ ಹದಿನೈದು ಛಡಿ ಏಟಿನ ಶಿಕ್ಷೆಯನ್ನು ನೀಡಿದರು. ಪ್ರತಿ ಹೊಡೆತಕ್ಕೂ ಅವನ ಬಾಯಿಯಿಂದ ಬರುತ್ತಿದ್ಧ ಒಂದೇ ಮಾತರಂ ಧ್ವನಿ ಅವನಲ್ಲಿದ್ದ ಅಪ್ರತೀಮ ದೇಶ ಪ್ರೇಮಕ್ಕೆ ಸಾಕ್ಷ್ಯ ನೀಡುತ್ತಿತ್ತು.
ಈ ಅಮಾನವೀಯ ಕೃತ್ಯವನ್ನು ಎಲ್ಲ ಪತ್ರಿಕೆಗಳು ಖಂಡಿಸಿದವು. ಸುಶಿಲ್ ಗೌರವಾರ್ಥ ಕಲ್ಕತ್ತಾದ ನ್ಯಾಷನಲ್ ಕಾಲೇಜನ್ನು ಒಂದು ದಿನ ಮುಚ್ಚಲಾ-ಯಿತು. 1907 ರ ಆಗಸ್ಟ್ 8 ರಂದು ಆ ಹುಡುಗನಿಗೆ ಸುರೇಂದ್ರನಾಥ ಬ್ಯಾನಜರ್ಿಯವರು ಕಳುಹಿಸಿದ ಸ್ವರ್ಣಪದಕ ನೀಡಿ ಸನ್ಮಾನಿಸಲಾಯಿತು.
ಸುಶೀಲ್ ಸೇನ್ ತನ್ನ ಯೌವ್ವನದಲ್ಲಿಯೇ ಭಾರತಾಂಬೆಯ ಮುಕ್ತಿಗೆ ಪಣತೊಟ್ಟು ಕ್ರಾಂತಿಕಾರಿ ಗುಂಪಿಗೆ ಸೇರಿಕೊಂಡು ಚಟುವಟಿಕೆ ಆರಂಭಿಸಿದನು. ನಂತರ ದಿನಗಳಲ್ಲಿ ಅಂದರೆ 15 ಮೇ 1908 ರಲ್ಲಿ ಅಲಿಪುರ ಕೇಸಿನಲ್ಲಿ ಅರವಿಂದರ ಜೊತೆಗೆ ಬಂಸಲಾಯಿತು. 7 ವರ್ಷಗಳ ಶಿಕ್ಷೆಯೂ ಆಯಿತು. ನಂತರದ ವಿಚಾರಣೆಯಲ್ಲಿ ಖುಲಾಸೆಯಾಗಿ ಹೊರಬಂದ ಸುಶೀಲ್ ಸೇನ್ ಮತ್ತೆ ತನ್ನ ಕ್ರಾಂತಿಕಾರಕ್ಕೆ ನಿಲುವುಗಳನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋರಾಟಕ್ಕೆ ಅಣಿಯಾದನು. ಇದು ಸ್ವತಂತ್ರ ಹೋರಾಟದ ಸಂದರ್ಭ, ಅದಕ್ಕಾಗಿ ಹಣಕಾಸಿನ ಅಗತ್ಯವಿದ್ದುದರಿಂದ ಕ್ರಾಂತಿಕಾರಿಗಳು ಶ್ರೀಮಂತರ ಮನೆಗಳನ್ನು ಮತ್ತು ಸಕರ್ಾರಿ ಇಲಾಖೆಗಳನ್ನು ಲೂಟಿ ಮಾಡುತ್ತಿದುದು ಸಾಮಾನ್ಯವಾಗಿತ್ತು. 1915 ರಲ್ಲಿ ನದಿಯಾ ಜಿಲ್ಲೆಯ ಪ್ರಾಗಪುರದಲ್ಲಿ ಡಕಾಯಿತಿ ಮಾಡಿಕೊಂಡು ದೋಣಿಯಲ್ಲಿ ತಪ್ಪಿಸಿಕೊಳ್ಳುತ್ತಿದ್ದವರನ್ನು ಪೊಲೀಸರ್ರು ಬೆನ್ನಟ್ಟಿದರು. ಆ ಪೊಲೀಸರಿಗೂ ದೋಣಿ ವಿಹಾರಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸುಶೀಲ್ ಸೇನ್ ಗಂಭೀರವಾಗಿ ಗಾಯಗೊಂಡರು. ಸಾಯುವ ಮೊದಲು ಇತರ ಕ್ರಾಂತಿಕಾರಿಗಳಿಗೆ ``ನನ್ನ ರುಂಡವನ್ನು ಮುಂಡದಿಂದ ಬೇರ್ಪಡಿಸಿ ಎಸೆಯಿರಿ ಎಂದು ಹೇಳಿದರು. ಇದರಿಂದ ಗುರುತಿಸಲಾಗದೆ ವಿಚಾರಣೆ ಬಂಧನ ನಿಲ್ಲುತ್ತವೆ. ಎಂಬುದು ಅವರ ನಿಲುವಾಗಿತ್ತು.
ಸಾಯುವಾಗಲೂ ಕೂಡ ತನ್ನ ಕ್ರಾಂತಿಕಾರಿ ನಿಲುವುಗಳಿಂದ ಹೊರಬರದ ಸುಶಿಲ್ ಸೇನ್ ಅಸಾಮಾನ್ಯವಾದ ಗುರಿ ಮುಟ್ಟುವುದಕ್ಕಾಗಿ ಎಡೆಬಿಡದೆ ಉತ್ಸಾಹ ಮತ್ತು ಹೋರಾಟದ ನಿಲುವನ್ನು ಹೊಂದಿದ್ದ. ಆದರೆ ನಾಡಿಗಾಗಿ ಪ್ರಾಣ ನೀಡಿದ ಈ ಮುಕುಟ ಮಣಿ ಇತಿಹಾಸದ ಎಲ್ಲೋ ಒಂದು ಮೂಲೆಯಲ್ಲಿ ಮರೆಯಾಗಿ ಬಿಟ್ಟಿದೆ.
ಸತ್ತು ಬದುಕುವೆನೆಂದು ಕಾತರ್ಾರ್ ಸಿಂಗ್ ಸೊರಬಾ
ಅವರಿಗೆ ಬರೀ ಹತ್ತೊಂಬತ್ತು ವರ್ಷ ವಯಸ್ಸು, ಕೋಟರ್ಿನ ಕಟಕಟೆಯಲ್ಲಿ ಎದೆ ಗುಂದದೆ ನಿಂತಿದ್ದರು. ನ್ಯಾಯಾಶರು ಮರಣದಂಡನೆಯ ತೀಪರ್ು ನೀಡಿದರು. ಆದರೆ ಒಂದು ಅವಕಾಶ ಎನ್ನುವಂತೆ `ಮರಣ ದಂಡನೆಗೆ ಬದಲಾಗಿ ಜೀವಾವ ಶಿಕ್ಷೆಗಾಗಿ ಬೇಡಿಕೊ" ಎಂದು ಉಪದೇಶ ನೀಡಿದರು. ಆದರೆ ಆ ಹುಡುಗನ ಮಾತು ಕೇಳಿದ ನ್ಯಾಯಾಶರೇ ಧಂಗಾಗಿ ಹೋದರು.
``ಜೈಲಿನಲ್ಲಿ ಕೊಳೆಯುವುದಕ್ಕೆ ಬದಲಾಗಿ, ಈಗ ಸತ್ತು ಪುನರ್ಜನ್ಮ ಪಡೆದು, ಮತ್ತೊಮ್ಮೆ ಮಾತೃ-ಭೂಮಿಯ ಸ್ವಾತಂತ್ರ್ಯಕ್ಕೆ ಹೋರಾ ಡುತ್ತೇನೆ." ಹೀಗೆ ಹೇಳಿದ ಆ ಯುವಕನೇ ಕತರ್ಾರ್ ಸಿಂಗ್ ಸೊರಬಾ.
ಪಂಜಾಬಿನ ಲೂಯಾನ ಪ್ರಾಂಥದ ಸೊರಬಾ ಎಂಬಲ್ಲಿ 1896 ರಲ್ಲಿ ಜನಿಸಿದ ಕತರ್ಾರ ಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಅಮೇರಿಕಾದಲ್ಲಿದ್ದ ಗದರ ಪಕ್ಷವನ್ನು ಸೇರಿದ್ಧರು. ಮೊದಲೇ ಕ್ರಾಂತಿಕಾರಿ ಮನೋಭಾವ ಹೊಂದಿದ್ದ ಅವರು 1913 ರಲ್ಲಿ ಭಾರತಕ್ಕೆ ಹಿಂತಿರುಗಿದ ಕೂಡಲೇ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತೊಡಗಿದರು.
ಮಿಲಿಟರಿ ಬಗ್ಗೆ ತಿಳಿದುಕೊಂಡಿದ್ದ ಕತರ್ಾರ್ ಸಿಂಗ್ ಸೈನಿಕರನ್ನು ಸ್ವತಂತ್ರ್ಯ ಹೋರಾಟಕ್ಕೆ ಸಿದ್ಧಗೊಳಿಸುತ್ತಿದ್ದನು. ಹೀಗೆಯೇ ಮುಂದುವರೆದ ಸಂದರ್ಭದಲ್ಲಿ 1918 ರಲ್ಲಿ ಲಾಹೋರ ಪಿತೂರಿಯೂ ನಡೆಯಿತು. ಇದರಲ್ಲಿ ಇವರ ಕೈವಾಡವಿದೆ ಎಂದು ಬಂಸಿದ ಬ್ರಿಟಿಷ್ ಸಕರ್ಾರ ಅವರ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತಲ್ಲದೇ ಮರಣ ದಂಡನೆಯನ್ನು ವಿಸಿತು.
ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳಲ್ಲಿ ಒಬ್ಬನಾಗಿ ಬಂದ ಕತರ್ಾರ್ ಸಿಂಗ ಸೊರಬಾ ಇಂದು ಯುವಕರಿಗೆ ಆದರ್ಶ ವ್ಯಕ್ತಿಯಾಗಬೇಕಿತ್ತು. ಆದರೆ ಇಂದು ಅವರ ಹೆಸರು ಎಷ್ಟೋ ಜನರಿಗೆ ಗೊತ್ತೆ ಇಲ್ಲದಿರುವುದು ನಮ್ಮ ದೌಭರ್ಾಗ್ಯ.
ಕ್ರಾಂತಿಕಾರಿಯಾಗಿದ್ದರು ಶಾಂತಿಗೆ ತಲೆಬಾಗಿದ ಬಾಬಾ ಪೃಥ್ವಿಸಿಂಗ್ ಅಜಾದ್
ಪಂಜಾಬಿನ ಒಂದು ಪುಟ ಹಳ್ಳಿಯಲ್ಲಿ ಹುಟ್ಟಿದ ಬಾಬಾ ಪೃಥ್ವಿಸಿಂಗ್ ಶಾಲೆಯ ವಿದ್ಯಾಭ್ಯಾಸವಾದ ಕೆಲವೇ ವರ್ಷಗಲ ನಂತರ ರಾಜಕೀಯಕ್ಕೆ ಧುಮುಕಿದರು ಮುಂದುವರೆದು 1911 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಗದ್ದರ್ ಪಕ್ಷದ ಕಾರ್ಯ ಕರ್ತರಾಗಿ ಸೇರಿಕೊಂಡರು. ಜೊತೆ ಜೊತೆಗೆ ಕ್ರಾಂತಿಕಾರಕ ಚಟುವಟಿಕೆಗೆ ಚಾಲನೆ ನೀಡಿದರು.
ತರುವಾಯ 1914 -15 ರಲ್ಲಿ ನಡೆದಂತಹ ಲಾಹೋರ ಪಿತೂರಿಯ ಮೊಕದ್ಧಮೆಯಲ್ಲಿ ಬಂಸಿ ಆರುವರ್ಷಗಳ ಅಂಡ ಮಾನಿನ ಜೈಲಿಗೆ ಕಳುಹಿಸಲಾ ಯಿತು. 1921 ರಲ್ಲಿ ಪೊಲೀಸರು ಬಾಬಾರನ್ನು ಬಂಸಿ ರೈಲಿನಲ್ಲಿ ಕರೆದೊಯ್ಯು ತ್ತಿರುವಾಗ ಓಡುತ್ತಿದ್ದ ರೈಲಿನಿಂದಲೇ ಜಿಗಿದು ತಪ್ಪಿಸಿಕೊಂಡ ಅವರ ಧೈರ್ಯ ಪರಾಕ್ರಮ ಮೆಚ್ಚಲೇಬೇಕು. ಅಂಡಮಾನಿನಿಂದ ಭಾರತಕ್ಕೆ ಬರುತ್ತಿದ್ದ ಇವರು ಸುಮಾರು ವರ್ಷಗಳ ಕಾಲ ಭೂಗತರಾಗಿವುಳಿದರು.
ಕ್ರಾಂತಿಕಾರಿ ಮನೋಭಾವವನ್ನು ಹೊಂದಿದ್ದರು ಕೂಡ ಗಾಂ ಜಿಯವರ ಮಾತುಗಳಿಂದ ಪ್ರಭಾವಿತರಾಗಿದ್ದರು. ಹೀಗಾಗಿ ಅಹಿಂಸಾ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲದಿದ್ಧರೂ ಕೂಡ ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಭಾಗವಹಿಸಿದ್ದರು.
ಮಹಾತ್ಮಾ ಗಾಂಜಿಯವರ ಮಾತುಗಳಿಂದ ಪ್ರಭಾವಿತರಾದ ಬಾಬಾರವರು ತಮ್ಮನ್ನು ತಾವು ಸಕರ್ಾರಕ್ಕೆ ಒಪ್ಪಿಸಿಕೊಂಡರು. ಸ್ವತಂತ್ರ್ಯದ ಸಿಹಿವುಂಡ ಅದೃಷ್ಟವಂತ ಕ್ರಾಂತಿಕಾರಿಯಾದ ಬಾಬಾ ಪೃಥ್ವಿಸಿಂಗ್ ಆಜಾದ್-ರವರು ನಂತರದ ದಿನಗಳಲ್ಲಿ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಹೀಗೆ ಸ್ವತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿ ಕೊಂಡಿದ್ದ ದೇಶಭಕ್ತ ಬಾಬಾ ಪೃಥ್ವಿಸಿಂಗ ಎಂದರೆ ಯಾರು ಎಂದು ಕೇಳುವ ಮಟ್ಟದಲ್ಲಿ ಇತಿಹಾಸದಲ್ಲಿ ಕಾಣೆಯಾಗಿರುವುದು ವಿಪರ್ಯಾಸ . ಇಂತಹ ಮಹಾನ್ ನಾಯಕರು ನಮ್ಮಿಂದ ಮರೆಯಾಗಿರುವುದು ನಾನು ಕಂಡ ನತದೃಷ್ಟೆ ಭಾರತದ ನೋವಿನ ಕತೆಯಾಗಿದೆ.

No comments:

Post a Comment