Sunday, March 20, 2011

ನಾಡು ಮರೆತ ನಾಯಕರು-ಭಾಗ 2


ಆ ದಿನಗಳೇ ಹಾಗಿದ್ದವು. ಅವರ ತಲೆಯಲ್ಲಿದ್ದ ವಿಚಾರಗಳೆಂದರೆ ಕೇವಲ ಭಾರತ ಮಾತೆಯ ಬಂಧನ ಮುಕ್ತಿ. ಅದಕ್ಕಾಗಿ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ಬ್ರಿಟಿಷರ ಗುಂಡಿಗೆ ಗುಂಡಿಗೆಯನ್ನೊಡ್ಡಿ ಹುತಾತ್ಮರಾದರು. ಕೇವಲ ಶಾಂತಿಯ ಮಂತ್ರವನ್ನು ಜಪಿಸುತ್ತ, ಬ್ರಿಟಿಷರ ಬೂಟಿನೇಟು ಸಹಿಸುತ್ತ ಬದುಕದೆ, ಸಿಡಿದೆದ್ದರು. ಪರಿಣಾಮ ಬೆತ್ತಲೆ ಸಮಾಜದಲ್ಲಿ ಬಟ್ಟೆ ಹಾಕಿಕೊಳ್ಳುವವನನ್ನು ಮೂರ್ಖ ಎನಿಸಿಕೊಳ್ಳುತ್ತಾನೆ. ಅಂತೆಯೇ ಬ್ರಿಟಿಷರಲ್ಲಿ ಶಾಂತಿಯಿಂದ ತಲೆತಗ್ಗಿಸಿ ಸ್ವಾತಂತ್ರ್ಯದ ಭಿಕ್ಷೆ ಕೇಳುತ್ತಿದ್ದವರು ಇತಿಹಾಸದಲ್ಲಿ ಹಿರೋಗಳಾಗಿ ಮಿಂಚಿದರೆ, ಇದ್ಯಾವುದಕ್ಕೂ ಜಗ್ಗದ ಕ್ರಾಂತಿಕಾರಿಗಳು ಅದೇ ಇತಿಹಾಸದ ಪುಟದಲ್ಲಿಂದು ಖಳನಾಯಕರೆಂದು ಬಿಂಬಿತರಾಗಿ ಕಳೆದು ಹೋಗಿದ್ದಾರೆ. ಕಳೆದು ಹೋದ ಕ್ರಾಂತಿಯ ಕಿಡಿಗಳನ್ನು ಮರಳಿತೋರಿಸುವ ಪ್ರಯತ್ನ ಈ ಲೇಖನದ್ದಾಗಿದೆ.
ಸ್ವತಂತ್ರ್ಯ ಬಾನಿನಲ್ಲಿ ಮಿನುಗಬೇಕಾಗಿದ್ದ ಧೃವತಾರೆಗಳು ಇಂದು ಇತಿಹಾಸದ ಯಾವುದೋ ಮೂಲೆಯಲ್ಲಿ ಮಂಕಾಗಿ ಬಿಟ್ಟಿವೆ. ಅಂತಹ ಪ್ರಜ್ವಲ ತಾರೆಗಳ ಪರಿಚಯ ಈ ಕೆಳಗಿನಂತಿದೆ.
ಸರ್ದಾರ್ ಅಜೀತ್ ಸಿಂಗ್
ಅಪ್ರತಿಮ ದೇಶಭಕ್ತನಾಗಿ ಅತಿ ಚಿಕ್ಕ ವಯಸ್ಸಿನಲ್ಲಿ ನಗುನಗುತ ನೇಣುಗಂಬ ಏರಿದ ಕ್ರಾಂತಿಕಾರಿ ಭಗತ್ಸಿಂಗನ ಚಿಕ್ಕಪ್ಪನೇ ಈ ಸರದಾರ ಅಜಿತ್ಸಿಂಗ್. ಬ್ರಿಟಿಷ್ ಗುಲಾಮಗಿರಿ ವಿರುದ್ಧ ತಿರುಗಿ ಬಿದ್ದ ಧೈರ್ಯವಂತ ವ್ಯಕ್ತಿ. ಲಾಲಾ ಲಜಪತರಾಯರ ನಿಕಟವತರ್ಿಯಾಗಿದ್ದ ಇವರು ಪಂಜಾಬಿನ ಮುಂಚೂಣಿಯ ರೈತ ಹೋರಾಟಗಾರರ ಚಳುವಳಿಗೆ ಮಾರ್ಗದರ್ಶಕರಾಗಿದ್ದರು.
ಪಂಜಾಬಿನ ರೈತರನ್ನು ಬ್ರಿಟಿಷ್ ಸಕರ್ಾರವು ಅತ್ಯಂತ ಹೀನಾಯವಾಗಿ ನಡೆಸಿ ಕೊಳ್ಳುತ್ತಿತ್ತು. ಅದರಲ್ಲೂ ರಾವಿ ಮತ್ತು ಚಿನಾಬ್ ನದಿಗಳ ಮಧ್ಯಪ್ರದೇಶದಲ್ಲಿದ್ದ ನಾಲೆಗಳ ವಲಸೆ ನಗರಗಳಲ್ಲಿ ಮತ್ತು ಲೈಲ್ಪುರದಲ್ಲಿ ನೆಲೆಸಿರುವ ರೈತರಿಗೆ ವಿಧಿಸಿದ್ದ ಅಸಹ್ಯಕರ ಕಾನೂನುಗಳು ಮತ್ತು ಅಧಿಕವಾದ ಕಂದಾಯದಿಂದಾಗಿ ರೋಸಿ ಹೋಗಿದ್ದರು. ಇದರಿಂದ ಲಾಲಾಲಜಪತರಾಯರ ಜೊತೆ ಸೇರಿ ಸದರ್ಾರ ಅಜಿತ್ಸಿಂಗ್ ರೈತ ಚಳುವಳಿ ಆರಂಭಿಸಿದರು.
`ಪಗಡೀ ಸಂಭಾಲ ಜತ್ತ (ಹೇ ಜತ ರೈತನೇ ಎಚ್ಚೆತ್ತು ನಿನ್ನ ರುಮಾಲು ಸಂಬಾಳಿಸಿಕೊ) ಅಂದರೆ ಸಿಖ್ಖರ ನಾಡು. ಸಿಖ್ರಿಗೆ ಪಗಡಿ ಎಂಬುದು ಗೌರವ ತರುವ ಕುರುಹು. ಹೀಗಾಗಿ ಬ್ರಿಟಿಷರಿಗೆ ತಲೆ ಬಾಗಬೇಡಿ ಎನ್ನುವ ಸಂದೇಶ ಗೀತೆಯನ್ನು ರಚಿಸಿ ಹಾಡಿ ರೈತರಲ್ಲಿದ್ದ ರೋಷವನ್ನು ಬಡಿದೆಬ್ಬಿಸಿದರು. ಇವರ ಮಾತಿಗೆ ಪ್ರತಿಕ್ರಿಯಿಸಿದ ರೈತರು ತಕ್ಷಣ ಬ್ರಿಟಿಷರಿಗೆ ತಿರುಗಿ ಬಿದ್ದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಲಾಲಾ ಲಜಪತರಾಯ ಮತ್ತು ಅಜಿತ್ಸಿಂಗ್ರನ್ನು ಬಂಧಿಸಿ ಮ್ಯಾಂಡ್ಲೆ ಜೈಲಿಗೆ ತಳ್ಳಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು. ಅನಿವಾರ್ಯವಾಗಿ ಬ್ರಿಟಿಷರು ಬಿಡುಗಡೆ ಮಾಡಿ ಇವರನ್ನು ಗಡಿಪಾರು ಮಾಡಿದರು.
ನಂತರ ಅಜಿತ್ಸಿಂಗ್ ಅಪಘಾನಿಸ್ತಾನ ಮತ್ತು ಇರಾನಿನಲ್ಲಿ ವಾಸವಿದ್ದ ಭಾರತೀಯರಿಗೆ ದೇಶಭಕ್ತಿಯ ಕಿಚ್ಚು ಹಚ್ಚಿ ಭಾರತ ಸ್ವಾತಂತ್ರ್ಯದ ಹುಚ್ಚು ಹಿಡಿಸುವ ಕಾರ್ಯ ಮಾಡತೊಡಗಿದರು. ಅಷ್ಟೇ ಅಲ್ಲದೆ ದೇಶದಲ್ಲಿ ಹೋರಾಟ ಮಾಡುತ್ತಿರುವ ಹೋರಾಟಗಾರರಿಗೆಲ್ಲ ಸಹಕಾರ ಪ್ರೋತ್ಸಾಹ ನೀಡಬೇಕಾದವರು ನೀವೇ ಅಲ್ಲವೇ ಎಂದು ಹೇಳಿ ಸಹಾಯ ಮಾಡಲು ಪ್ರೇರಣೆ ನೀಡಿದರು. ಎರಡನೆಯ ಮಹಾಯುದ್ಧ ಮುಗಿದ ನಂತರ ಭಾರತಕ್ಕೆ ಹಿಂದಿರುಗಿದ ಅವರು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವೇ ಡಾಲ್ಹೌಸಿಯಲ್ಲಿ ನಿಧನ ಹೊಂದಿದರು. ನಂತರ ಕ್ರಾಂತಿಕಾರಿ ಎಂಬ ಕಾರಣಕ್ಕೆ ಇತಿಹಾಸದಲ್ಲಿಯೂ ಮರೆತು ಹೋದರು.
ಅಗ್ನಿಶಖೆಯ ಹರಿಕಾರ ಖುದಿರಾಂ ಬೋಸ್ ಮತ್ತು ಪ್ರಫುಲ್ಲಾ ಚಾಕಿ
1889ನೇಯ ಡಿಸೆಂಬರ್ನಲ್ಲಿ ಜನ್ಮತಾಳಿದ ಖುದಿರಾಂ ಬೋಸ್ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡನು. ಅವನ ಅಕ್ಕ ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸನು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡು ಬಿಟ್ಟನು. ಬಕೀಂಚಂದ್ರ ಚಟಜರ್ಿ ಬರೆದ ಆನಂದ ಮಠ ಮತ್ತು ಆನಂದದಾತ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದವು. `ವಂದೇ ಮಾತರಂ ಅಂತೂ ಇವರಲ್ಲಿ ದೇಶಭಕ್ತಿಯೇ ಮನತುಂಬಿ ಹರಿದಾಡುವಂತೆ ಮಾಡಿತು. ಹೀಗಾಗಿ ಸುಮಾರು ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡ. ಅಲ್ಲದೇ ಅರ ಕಾರ್ಯವಾಗಿ ಕರಪತ್ರಗಳನ್ನು ಹಂಚಿ ಸಿಕ್ಕಿಬಿದ್ದು ಬಿಡುಗಡೆಯಾದನು.
ಆಗ ತಾನೇ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆದ್ದಿತು. ಇದಕ್ಕೆ ಹಲವಾರು ಪತ್ರಿಕೆಗಳು ಕೂಡ ಸಹಕಾರ ನೀಡುತ್ತಿದ್ದರು. ಹೀಗಾಗಿ ಬ್ರಿಟಿಷರಿಗೆ ವಿರುದ್ಧವಾಗಿ ಬರೆದ ಪತ್ರಿಕೆಗಳ ಮೇಲೆ ಮೊಕದ್ದಮೆ ಹೂಡಲಾಗುತ್ತಿತ್ತು. ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ವಂದೇ ಮಾತರಂ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದನು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿಮೆರೆದನು.
ಸುಶೀಲ್ ಕುಮಾರನೇನೋ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದ. ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದನು. ಇದನ್ನು ಸಹಿಸದ ಕೆಲವು ಕ್ರಾಂತಿಕಾರಿಗಳು ಕಿಂಗ್ಸ್ಪೋಡರ್್ನನ್ನು ಕೊಲ್ಲಲು ತೀಮರ್ಾನಿಸಿದರು. ಇದು ಹೇಗೋ ಸಕರ್ಾರಕ್ಕೆ ತಿಳಿದು ಅವನನ್ನು ಮುಜಾಪರಪುರಕ್ಕೆ ವರ್ಗ ಮಾಡಿದರು.
ಹೇಗಾದರಾಗಲಿ ಕಿಂಗ್ಸ್ಫೋಡರ್್ನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿಧರ್ಾರದಿಂದ ಈ ಕಾರ್ಯವನ್ನು `ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್ರು ಖುದಿರಾಂ ಮತ್ತುಆತನ ಸಹ ಕ್ರಾಂತಿಕಾರಿ ಪ್ರಫುಲ್ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ಫೋಡರ್್ನ ಚಲನವಲನಗಳನ್ನು ಗಮನಿಸತೊಡಗಿದರು.
ತಪ್ಪಿದ ಬೇಟೆ
ಕಿಂಗ್ಸ್ಫೋಡರ್್ನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲು ನಿರ್ಧರಿಸಲಾಗಿತ್ತು. ಎಂದಿನಂತೆ ಕಾರು ಹೊರಟು ಬಂದಿತು. ಅದರೊಳಗೆ ಯಾರಿದ್ದಾರೆಂದು ಗಮನಿಸದೆ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ಫೋಡರ್್ ಬದಲಾಗಿ ಅದರಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು. ಇತ್ತ ಕಿಂಗ್ಸ್ಫೋಡರ್್ನನ್ನು ಕೊಂದೆವೆಂದುಕೊಂಡ ಇವರು ಒಂದೊಂದು ದಿಕ್ಕಿಗೊಬ್ಬರು ಓಡಿದರು. ಈ ಘಟನೆ ನಡೆದದ್ದು 1908ನೆ ಏಪ್ರಿಲ್ 30ರಂದು.
ಆರಂಭವಾದ ಅಗ್ನಿಶಖೆ
ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ಫೋಡರ್್ನನ್ನು ಕೊಲ್ಲಲಿಲ್ಲ ನಿಜ. ಆದರೆ ಇಡಿ ಬ್ರಿಟಿಷ್ ಸಾಮ್ರಾಜ್ಯದಲ್ಲಿಯೇ ಮೊದಲ ನಡುಕ ಹುಟ್ಟಿಸಿತು. ತಣ್ಣಗಿದ್ದ ಬ್ರಿಟಿಷರ ನೆಮ್ಮದಿಗೆ ಬೆಂಕಿ ಇಟ್ಟು ಅಗ್ನಿಶಖೆಯನ್ನು ಆರಂಭಿಸಿ ಬಿಟ್ಟಿತು. ಇವರೆಸೆದ ಬಾಂಬು ಕೇವಲ ಕಿಂಗ್ಸ್ಫೋಡರ್್ನ ಗಾಡಿ ಚೂರು ಚೂರು ಮಾಡಿತಲ್ಲದೆ ಬ್ರಿಟಿಷ್ ಸಾಮ್ರಾಜ್ಯವಾದದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿ ಹಾಕಿತು.
ಸಿಕ್ಕಿಬಿದ್ದಸಿಂಹ ಮತ್ತು ಅಮರವಾದ ಹುಲಿ:
ಮುಜಾಫುರದಿಂದ ಸುಮಾರು, 25 ಮೈಲುಗಳಾಚೆ ಖುದಿರಾಂ ಬೋಸ್ನನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. 1908ರ ಆಗಸ್ಟ್ 11ರಂದು ಗಲ್ಲಿಗೇರಿಸಲಾಯಿತು.
ಇತ್ತ ಪ್ರಫುಲ್ಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ರಿವಾಲ್ವರ್ನಿಂದ ತಾನೇ ಸುಟ್ಟುಕೊಂಡು ಅಮರನಾದನು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಗ್ನಿಯುಗಕ್ಕೆ ಮುನ್ನುಡಿ ಬರೆದಂತಹ ಇಂಥ ಮಹಾನ್ ಚೇತನಗಳು ಜನರಿಗೆ ಅಸ್ಪಷ್ಟವಾದ ಪ್ರತಿಬಿಂಬದಂತಾಗಿರುವುದು ಖೇದಕರವಾಗಿದೆ.
ರಾಶ್ ಬಿಹಾರಿ ಬೋಸ್
ಭಾರತ ಸ್ವತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿಗಳ ಪಾತ್ರ ಎಷ್ಟು ಮಹತ್ವದ್ದಾಗಿದೆಯೋ, ಕ್ರಾಂತಿಕಾರಿ ಹೋರಾಟದಲ್ಲಿ ರಾಶ್ ಬಿಹಾರಿ ಬೋಸ್ರ ಪಾತ್ರವು ಅಷ್ಟೇ ಮಹತ್ವದ್ದಾಗಿದೆ. ರಾಶ್ ಬಿಹಾರಿ ಬೋಸ್ರವರು ಕ್ರಾಂತಿಕಾರಿಗಳಲ್ಲಿನ ಅನಘ್ರ್ಯ ರತ್ನ ಎಂದು ಹೇಳಬಹುದು.
1910ರಿಂದ 1915ರವರೆಗಿನ ಭಾರತದೊಳಗಿನ ಕ್ರಾಂತಿಕಾರಿ ಚಟುವಟಿಕೆಯಲ್ಲಿನ ಅವರ ಪಾತ್ರ ಮತ್ತು ಅವರ ಆಗ್ನೇಯ ಏಷ್ಯಾದ ಎರಡು ದಶಲಕ್ಷ ಭಾರತೀಯರ ನಡುವೆ ನಡೆಸಿದ ಕ್ರಾಂತಿಕಾರ ಚಟುವಟಿಕೆಗಳು ಸುಭಾಷಚಂದ್ರ ಬೋಸ್ರು ಐ.ಎನ್.ಎ ಕಟ್ಟಲು ಬೇಕಾಗಿದ್ದ ಸೂಕ್ತವಾದಂತಹ ಆಧಾರವನ್ನು ಒದಗಿಸಿಕೊಟ್ಟವು. ಇದರಿಂದಾಗಿಯೇ ಅವರಹೆಸರು ಚಿರಸ್ಥಾಯಿಯಾಗಿ ಉಳಿಯಿತು.
1886ರಲ್ಲಿ ಬಂಗಾಳದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಾಶ್ ಬಿಹಾರಿ ಬೋಸರು ಪದವಿ ಪಡೆದಿದ್ದು ಫೋಟರ್್ ವಿಲಿಯಂ ಕಾಲೇಜಿನಿಂದ. 1912ರ ಹಾಡರ್ಿಂಗ್ ಬಾಂಬ್ಸ್ಫೋಟದಲ್ಲಿ ಭಾಗಿಯಾಗುವುದರೊಂದಿಗೆ ಕ್ರಾಂತಿಕಾರಕ ಚಟುವಟಿಕೆಗೆ ಪದಾರ್ಪಣೆ ಮಾಡಿದರು. ಲಾಡರ್್ ಹಾಡರ್ಿಂಗ್ ವೈಸರಾಯ ಆಗಿ ದೆಹಲಿಯಚಾಂದಿನಿ ಚೌಕ್ಗೆ ಬರುತ್ತಿದ್ದಾಗ ಬೋಸರು ಅವರ ಮೇಲೊಂದು ಬಾಂಬ್ ಎಸೆದರು. 1914ರ ಹಾಗೂ 1915ರ ಲಾಹೋರ್ ಮತ್ತು ಬನಾರಸ್ ಪಿತೂರಿಯಲ್ಲಿಯೂ ಅವರ ಪಾತ್ರ ಸಕ್ರಿಯವಾಗೇ ಇತ್ತು.
ಇದೆಲ್ಲವನ್ನು ಗಮನಿಸಿದ ಬ್ರಿಟಿಷರು ಅವರನ್ನು ಸೆರೆ ಹಿಡಿಯಲು ಬಹಳ ಪ್ರಯತ್ನಿಸಿದರು. 1915ರಲ್ಲಿ ತಲೆತಪ್ಪಿಸಿಕೊಂಡು ಜಪಾನ್ ಸೇರಿದರು. ಆಗ ಜಪಾನಿನ ಸಕರ್ಾರದ ಮನ ಒಲಿಸಿ ರಾಶ್ ಬಿಹಾರಿ ಬೋಸರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಬೇಕೆಂದು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಅವರನ್ನು ಜಪಾನಿನ ಬ್ರೆಡ್ ವ್ಯಾಪಾರಿ ದಂಪತಿಗಳು 7 ವರ್ಷಗಳ ಕಾಲ ಸಾಕಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ಜಪಾನಿನ ನಾಗರಿಕತೆ ದೊರಕಿಸಿಕೊಟ್ಟರು. ಒಬ್ಬ ಕ್ರಾಂತಿಕಾರಿಗೆ ಅವರು ಮಾಡಿದ ಸಹಾಯವನ್ನು ಇಡೀ ಭಾರತೀಯರು ನೆನಪಿಸಿಕೊಳ್ಳಲೇಬೇಕು.
ಜಪಾನಿ ಪೌರತ್ವ ಬಂದ ನಂತರ ಬಹಿರಂಗವಾಗಿ ಕಾರ್ಯಗತರಾದರು. ಭಾರತೀಯ ವಲಸಿಗರನ್ನು ಪ್ರೇರೆಪಿಸುತ್ತ ಅವರಲ್ಲಿ ಸ್ವತಂತ್ರ್ಯದ ಕಿಚ್ಚು ಹಚ್ಚತೊಡಗಿದರು. 1924ರಲ್ಲಿ ಅವರು ಟೋಕಿಯೋದಲ್ಲಿ `ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಪ್ರಾರಂಭಿಸಿದರು. ಅದೇ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡ ಅವರು ಬ್ರಿಟಿಷರಿಂದ ನರಳುತ್ತಿದ್ದ ಎಲ್ಲಾ ದೇಶದ ಜನರಲ್ಲಿ ಐಕ್ಯತಾ ಭಾವನೆ ಮೂಡಿಸಲು `ಪ್ಯಾನ್ ಏಷ್ಯನ್ ಲೀಗ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಲೀಗ್ನ ವಾಷರ್ಿಕ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ 20 ಕೋಟಿ ಭಾರತೀಯರನ್ನು ಬಡಿದೆಬ್ಬಿಸಿತು.
`ಒಂದು ಅವ್ಯಕ್ತ ರಾಷ್ಟ್ರ. ಇಂಡಿಯಾ, ಒಬ್ಬ ಶತೃ-ಇಂಗ್ಲೆಂಡ್. ಮತ್ತು ಒಂದು ಗುರಿ-ಪೂರ್ಣ ಸ್ವತಂತ್ರ್ಯ, ಈ ಮೂರೂ ಇವೆಯೆಂದು ನಾವೆಲ್ಲರೂ ಸದಾ ನೆನಪಿನಲ್ಲಿಟ್ಟುಕೊಂಡಿರಬೇಕುಎಂದು ಹೇಳುತ್ತಾ ದೇಶಭಕ್ತಿಯ ಜ್ಯೋತಿ ಬೆಳಗಿಸಿದರು.
`ಇಂಡಿಯನ್ ನ್ಯಾಷನಲ್ ಆಮರ್ಿಯಲ್ಲಿ ಸೇರಲು ಜಪಾನ್ನಲ್ಲಿ ಸೆರೆಹಿಡಿದವರನ್ನು, ಸೇನಾ ಸೇವೆಯನ್ನು ತೊರೆದ ಅಧಿಕಾರಿಗಳನ್ನು ಮತ್ತು ಯೋಧರನ್ನು ಪ್ರೇರೇಪಿಸಲು ಮುಖ್ಯ ಕಾರಣರಾದವರೆ ರಾಶ್ಬಿಹಾರಿ ಬೋಸರು.ಹೀಗೆ ಭಾರತ ಮಾತೆಯ ಬಂಧನ ಮುಕ್ತಿಗಾಗಿ ಅವಿರತವಾಗಿ ಶ್ರಮಿಸಿದ ರಾಶ ಬಿಹಾರಿ ಬೋಸರನ್ನು ಕುರಿತು ಸುಭಾಷಚಂದ್ರ ಬೋಸರು `ರಾಶ್ ಬಿಹಾರಿ ಅವರು ಗ್ರೇಟರ್ ಈಸ್ಟ್ ಏಷ್ಯಾ ವಾರ್ ಪ್ರಾರಂಭವಾದಾಗಿನಿಂದ ಪೂರ್ವ ಏಷ್ಯಾದ ಭಾರತೀಯ ಸ್ವರಾಜ್ಯದ ಚಳುವಳಿಗೆ ತಂದೆಯಂತಿದ್ದಾರೆ ಎಂದು ಹೇಳಿದರು.
ಬಿಡುವಿಲ್ಲದ ಪ್ರಯಾಣದಿಂದ ಮತ್ತು ಕ್ರಾಂತಿಕಾರಿಗಳ ಚಟುವಟಿಕೆಗಳಿಂದ ಅವರ ಆರೋಗ್ಯ ಹದಗೆಟ್ಟು 1945ರಲ್ಲಿ ಮೃತರಾದರು.
ಭಾರತದ ಕ್ರಾಂತಿಕಾರಿಗಳಿಗೆಲ್ಲ ಅನಘ್ರ್ಯ ರತ್ನದಂತಿರುವ ರಾಶ್ ಬಿಹಾರಿ ಬೋಸ್ ಸ್ವತಂತ್ರ ಗಂಗೆಯ ತೊರೆಗೆ ಧುಮುಕಿ ದಡ ಸೇರುವ ಮೊದಲೇ ಅಸುನೀಗಿದ್ದು ದುರದೃಷ್ಟವೇ ಸರಿ. ಇಂತಹ ಮಹಾನ್ ಚೇತನ ನಮಗೆ ತಿಳಿಯದಂತೆ ಹೋಗಿರುವುದು ನಮ್ಮಲ್ಲಿನ ಹಾಳು ವ್ಯವಸ್ಥೆಯ ಪ್ರತಿರೂಪವಾಗಿದೆ.
ಚೇತನ ಉದ್ಧಾಮ್ ಸಿಂಗ್
ಅದು 1919 ನೇ ಇಸ್ವಿ ಪಂಜಾಬಿನ ಒಂದು ತೋಟ. ಅದರ ಹೆಸರು ಜಲಿಯನ್ ವಾಲಾಭಾಗ್. ಅಲ್ಲಿ ಸಾವಿರಾರು ಜನರು ಸೇರಿ ಸ್ವತಂತ್ರ್ಯ ಸಂಗ್ರಾಮದ ರೂಪುರೇಷೆಗಳ ಬಗ್ಗೆ ಚಚರ್ಿಸುತಿದ್ದರು. ಆ ತೋಟದ ಸುತ್ತಲೂ ಅಳೆತ್ತರದ ಗೋಡೆ ಇದ್ದು ಒಂದೇ ಗೇಟಿನಿಂದ ಸಂಚಾರ ಕಲ್ಪಿಸಲಾಗಿತ್ತು. ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಯಾವುದೇ ಸುಳಿವನ್ನ ನೀಡ ದೆಯೇ ನಿಶ್ಯಸ್ತ್ರದಾರಿಯಾಗಿದ್ದ ಶಾಂತಿಪ್ರಿಯ ಸಭಿಕರ ಮೇಲೆ ಗುಂಡಿನ ಮಳೆಗರಿಸಿದ. ಇದರಿಂದ ಕ್ಷಣ ಮಾತ್ರದಲ್ಲಿ ರಾಶಿ ರಾಶಿ ಹೆಣಗಳು ಉರುಳಿ ದವು. ಇದನ್ನು ನೋಡುತ್ತಿದ್ದ ಯುವಕ ಇದಕ್ಕೆ ಕಾರಣನಾದ ಜನರಲ್ ಡಯರ್ನನ್ನು ಕೊಲ್ಲಲ್ಲೇ ಬೇಕು ಎನ್ನುವಂತ ಹಠಕ್ಕೆ ಬಿದ್ದ. ಆ ಧೀರ ಕ್ರಾಂತಿಕಾರಿಯೇ ಉದ್ಧಾಮ ಸಿಂಗ್.
ಈ ಗುರಿಯನ್ನು ಹೊತ್ತು ಕೊಂಡು ಮುನ್ನಡೆದ ಉದ್ಧಾಮ ಸಿಂಗ್ ಇಂಗ್ಲೆಂಡ್ಗೆ ತೆರಳಿ ಅಲ್ಲಿನ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡ. ಹೆಸರಿಗೆ ಮಾತ್ರ ಕಾಲೇಜು ಸೇರಿಕೊಂಡ. ಇವನ ಗುರಿ ಮತ್ರ ಜನರಲ್ ಡಯರ್ನ ಹತ್ಯೆ ಮಾಡುವುದಾಗಿತ್ತು. ಬೆಳಿಗ್ಗೆ ಕಾಲೇಜು ಸಂಜೆಯಾಗುತ್ತಲೇ ಜನರಲ್ ಡಯರ್ನ ಹುಡಕಾಟ ಮಾಡುತಿದ್ದನು. ಹೀಗೆಯೇ ಹಲವಾರು ದಿನಗಳು ನಡೆದು ಹೋದವು. ಯಾವಾಗಲೂ ಒಂದು ರಿವಾಲ್ವರ್ನನ್ನು ಜೊತೆಯಲ್ಲಿಟ್ಟುಕೊಂಡೇ ತಿರುಗಾಡುತ್ತಿದ್ದನು.
ಶಪಥ ಪೂರೈಸಿದ ಶೂರ
ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದು ಆಗಲೇ 21 ವರ್ಷಗಳ ಗತಿಸಿದ್ದವು. ಉದ್ಧಾಮಸಿಂಗ್ರವರು ಹುಡುಕಾಟಕ್ಕೂ ಒಂದು ದಿನ ಕಾಲ ಕೂಡಿ ಬಂದಿತು. 1940ರ ಮಾಚರ್್ 13ರಂದು ಲಂಡನ್ನ ಕಾಕ್ಸಟಲ್ ಹಾಲಿನಲ್ಲಿ ಡಯರ್ನನ್ನು ಗುಂಡಿಟ್ಟು ಕೊಂದನು. ನೂರಾರು ಜನ ಸಭಿಕರು ಸೇರಿದ್ದ ಹಾಲ್ನಲ್ಲಿ ನಡೆದು ಬಂದ ಉದ್ಧಾಮಸಿಂಗ್ ನೇರವಾಗಿ ಹಣೆಗೆ ಗುಂಡಿಟ್ಟು ಕೊಂದನು. ಅವನ ಮುಖದಲ್ಲಿ ಉಗ್ರಸ್ವರೂಪವನ್ನು ನೋಡಿದರೆ ಯಾವುದೇ ಪೊಲೀಸರು ಕೂಡ ಅವನನ್ನು ಬಂಧಿಸಲು ಹೆದರಿದರು. ಆದರೆ ಶಪಥ ಪೂರೈಸಿಕೊಂಡ ತೃಪ್ತಿಯಲ್ಲಿ ಉದ್ಧಾಮಸಿಂಗ್ ತಾವೇ ಶರಣಾಗತರಾದರು.
ನಂತರ ವಿಚಾರಣೆ ಎಂಬ ನಾಟಕವಾಡಿ ಮಹಾನ್ ಚೇತನ ಉದ್ಧಾಮಸಿಂಗ್ರನ್ನು ಮರಣದಂಡನೆಗೆ ಗುರಿಪಡಿಸಿದರು. 1919ರಲ್ಲಿ ಬ್ರಿಟಿಷ್ ಸಕರ್ಾರ ಬುದ್ಧಿಯಿಲ್ಲದೆ ನಡೆಸಿದ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಂಡ ಸಂತೃಪ್ತಿಯಿಂದ ಉದ್ಧಾಮಸಿಂಗ್ ಅಮರರಾದರು.
ಈ ರೀತಿಯಲ್ಲಿ ನಮ್ಮವರನ್ನುಕೊಂದ ವ್ಯಕ್ತಿಯನ್ನು ಕೊಲ್ಲಲು ಸತತ 21 ವರ್ಷಗಳವರೆಗೆ ಹಸಿದ ಸಿಂಹದಂತೆ ಕಾದು ಕುಳಿತು ಶಪಥ ಪೂರೈಸಿಕೊಂಡ ಪಂಜಾಬಿನ ಈ ಸಿಂಹ ಕೇವಲ ಬೆರಳೆಣಿಕೆಯವರಿಗೆ ಮಾತ್ರ ಗೊತ್ತು. ಇತಿಹಾಸದಲ್ಲಿ ಇವರು ಕೂಡ ಮರೆಯಾಗಿರುವುದು ನಮ್ಮ ದುರ್ಭಾಗ್ಯವೆ ತಾನೇ ?

No comments:

Post a Comment