ಬ್ರಿಟಿಷರಿಂದ ಸ್ವಾತಂತ್ರ್ಯದ ಭಿಕ್ಷೆ ಬೇಡುತ್ತಿದ್ದ ಶಾಂತಿಪ್ರಿಯರಿಗೆ ಯಾವುದೇ ಒಂದು ಸಣ್ಣದಾದ ಹಿಂಸೆಯನ್ನು ಬ್ರಿಟಿಷರು ನೀಡುತ್ತಿರಲಿಲ್ಲ. ಒಂದು ಕಿರು ಬೆರಳಿನಿಂದಲೂ ಹಿಡಿಯುತ್ತಿರಲಿಲ್ಲ. ಆದರೆ ನನ್ನ ದೇಶದ ಸ್ವಾತಂತ್ರ್ಯ ಪ್ರಾಣ ತೆಗೆದಾದರೂ ಇಲ್ಲೇ, ಪ್ರಾಣ ಕೊಟ್ಟಾದರೂ ನಾನು ಪಡೆದೆ ತೀರುತ್ತೆನೆಂಬ ಕೆಚ್ಚಿಟ್ಟುಕೊಂಡು ಸಶಸ್ತ ಹೋರಾಟಕ್ಕೆ ಅಣಿಯಾಗಿ ಬ್ರಿಟಿಷರ ಗುಂಪಿಗೆ ಗುಂಡಿಯನ್ನೊಡ್ಡಿ ಕೊರಳ ಉರುಳನ್ನೇ, ಕೊರಳ ಮಾಲೆಯಾಗಿಸಿಕೊಂಡ ಕ್ರಾಂತಿಕಾರಿಗಳು ಪಡೆದುಕೊಂಡಿದ್ದು ವೀರ ಮರಣವನ್ನೇ. ಅಂಥವರು ಮಾಡಿದ ಬಲಿದಾನದ ಫಲವೇ ಈ ದೇಶದ ಸ್ವಾತಂತ್ರ್ಯ.
ಸಾವು ಎದುರಿಗೆ ನಿಂತಾಗಲೂ ಅದನ್ನು ಸಂತೋಷದಿಂದ ಸ್ವೀಕರಿಸಿ ನಗುನಗುತ್ತಲೇ ಅವಕಾಶವಿದ್ದರೆ ಮತ್ತೊಮ್ಮೆ ಹುಟ್ಟಿ ಬಂದು ಭಾರತ ಮಾತೆಯ ಬಂಧನ ಮುಕ್ತಿಗಾಗಿ ಹೋರಾಡುತ್ತೇನೆ. ನನ್ನ ದೇಶವನ್ನು ಕಟ್ಟುತ್ತೇನೆ ಎಂದು ಭಾರತ ಮಾತೆಯ ಋಣ ತೀರಿಸಿ ಮರೆಯಾದ ಕ್ರಾಂತಿಯ ಕಿಡಿಗಳು ಇಂದಿಗೂ ಭಾರತೀಯರಿಗೆ ಆದರ್ಶವಾಗಬೇಕಿತ್ತು. ಆದರೆ ಕೆಲವು ಬಾಲಬಡುಕ ಸಮುದಾಯಗಳ ಪರಿಣಾಮವಾಗಿ ಇಂದು ಇತಿಹಾಸದಲ್ಲಿ ಮರೆಯಾಗಿದ್ದಾರೆ. ಮರೆಯಾದ ಮತ್ತಷ್ಟು ಮಹಾಚೇತನಗಳ ಕುರಿತ ವಿವರ ಈ ಕೆಳಗಿನಂತಿದೆ:
* ಅವಕಾಶ ಬಂದರೆ ಮತ್ತೆ ಸಿಡಿಯುತ್ತೇನೆಂದ ಕನೈಲಾಲ್ ದತ್ತ
ಬ್ರಿಟಿಷರ ಶೋಷಣೆಯಿಂದ ರೋಸಿ ಹೋಗಿದ್ದ ಭಾರತೀಯರಲ್ಲಿ ಹೋರಾಟದ ಕೆಚ್ಚು ಭುಗಿಲೆದ್ದು ಬಿಟ್ಟಿತ್ತು. ಸಶಸ್ತ್ರ ಹೋರಾಟಕ್ಕೂ ಸಹ ಸನ್ನದ್ಧರಾಗುವ ಮಟ್ಟಕ್ಕೆ ಜನ ಬಂದು ತಲುಪಿತು. ಪರಿಣಾಮವಾಗಿಯೇ ಹಲವಾರು ಕ್ರಾಂತಿಕಾರಿ ಸಂಘಟನೆಗಳು ಉದಯಿಸಿದವರು. ಈ ಸಂಘಟನೆಗಳ ಮೂಲಕ ಸ್ವತಂತ್ರ್ಯ ಗಂಗೆಯ ಒಡಲಿಗೆ ಧುಮಿಕಿ ಈಜಿ ಬಂದವರಿಗಿಂತ, ಅದರಲ್ಲಿ ದೇಶದ್ರೋಹಿ ಮೊಸಳೆಗಳ ಬಾಯಿಗೆ ಆಹಾರವಾದವರೇ ಹೆಚ್ಚು. ಇಂಥ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ ಇತಿಹಾಸದ ಪುಟದಲ್ಲಿ ಮಿಂಚಿ ಮರೆಯಾದ ಮಹಾನ್ ಕ್ರಾಂತಿಕಾರಿ ಚೇತನವೇ ಕನೈಲಾಲ್ ದತ್ತ.
1887 ಸೆಪ್ಟೆಂಬರ್ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಜನಿಸಿದ ಕನೈಲಾಲ್ ಚಿಕ್ಕ ವಯಸ್ಸಿನಲ್ಲಿಯೇ ಸ್ವತಂತ್ರ್ಯ ಹೋರಾಟದ ಹುಚ್ಚು ಹಿಡಿಸಿಕೊಂಡವರು.ಮನೆಯಲ್ಲಿನ ಬಡತನವನ್ನು ಲೆಕ್ಕಿಸದೆ ಅವರು ದಾಸ್ಯ ಸಂಕೋಲೆ ಮುರಿಯಲು ಮುಂದಾದರು. ಓದಿಗಾಗಿ ತಾಯಿಯಿಂದ ಅನುಮತಿ ಪಡೆದು ಕಲ್ಕತ್ತಾಗೆ ಬಂದ ಕನೈಲಾಲ್ ಸಂಪೂರ್ಣವಾಗಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿದರು. ಬ್ರಿಟಿಷ್ ಸಾಮ್ರಾಜ್ಯವನ್ನು ನಿನರ್ಾಮ ಮಾಡಬೇಕು ಎನ್ನುವ ದೇಶಪ್ರೇಮ ಅವರಲ್ಲಿ ಸ್ಪೋಟಗೊಳ್ಳುತ್ತಿತ್ತು.
*ಅಚಾತುರ್ಯ ನಡೆಯಿತು
ಆಲಿಪಪುರ ಎಂಬಲ್ಲಿ ಕ್ರಾಂತಿಕಾರಕ ಚಟುವಟಿಕೆಯಲ್ಲಿ ತೊಡಗಿದ್ದ ದಿನಗಳವು. ಇಂಥ ಸಂದರ್ಭದಲ್ಲಿ 1908 ರ ಏಪ್ರಿಲ್ 30 ರಂದು ಒಂದು ಆಚಾತುರ್ಯ ಸಂಭವಿಸಿತು ಕ್ರಾಂತಿಕಾರ್ಯಕ್ಕಾಗಿ ಮದ್ದುಗುಂಡುಗಳನ್ನು ತಯಾರಿಸುವ ಸಮಯದಲ್ಲಿ ಯಾವುದೋ ಕಾರಣಕ್ಕೆ ರಾಸಾಯನಿಕಗಳು ಸ್ಫೋಟಗೊಂಡ ಇಬ್ಬರು ಕ್ರಾಂತಿಕಾರಿಗಳು ಅಸುನೀಗಿದರು. ಇದರಿಂದ ಎಚ್ಚೆತ್ತುಕೊಂಡ ಬ್ರಿಟಿಷ್ ಸಕರ್ಾರ ಕ್ರಾಂತಿಕಾರಿಗಳನ್ನು
ಬಂಧಿಸಿ ಸೆರೆಮನೆಗೆ ಕಳುಹಿಸಿದರು. ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳ ಸಂಗಡಿಗರಲ್ಲಿ ಒಬ್ಬನಾಗಿದ್ದ ನರೆನ್ ಗೋಸಾಯ್ ಎಂಬುವನು ಕ್ರಾಂತಿಕಾರಿಗಳ ವಿರುದ್ಧ ಸಾಕ್ಷಿ ಹೇಳಲು ಸನ್ನದ್ಧನಾದನು.ಇದು ಇಡೀ ಕ್ರಾಂತಿಕಾರಿ ಸಂಘಟನೆಗಳನ್ನು ಬುಡಮೇಲು ಮಾಡುವ ಆತಂಕ ಸೃಷ್ಟಿಸಿತು. ಇಡೀ ದೇಶವನ್ನೇ ನಡುಗಿಸಿತು.
ಇತ್ತ ಬ್ರಿಟಿಷರ ಪರವಾಗಿ ಸಾಕ್ಷ್ಯ ನುಡಿಯಲು ಒಪ್ಪಿಕೊಂಡ ನರೆನ್ ರೋಸಾಯ್ನನ್ನು ಅನಾರೋಗ್ಯದ ನೆಪವೋಡ್ಡಿ ಆಸ್ಪತ್ರೆಗೆ ಸೇರಿಕೊಂಡು ಬ್ರಿತಿಷರ ಎಂಜಲು ಆತಿತ್ಯವನ್ನು ಪಡೆಯತೊಡಗಿದನು. ಈ ದೇಶದ್ರೋಹಿಯನ್ನು ಹೇಗಾದರು ಕೊಂದು ಕ್ರಾಂತಿಕಾರಿಗಳ ಸಂಘಟನೆಯನ್ನು ಉಳಿಸಲೇಬೇಕು ಎನ್ನುವ ನಿಧರ್ಾರಕ್ಕೆ ಕ್ರಾಂತಿಕಾರಿಗಳು ಬದ್ದರಾದರು. ಇನನ್ನು ಕೊಲ್ಲುವ ಕಾರ್ಯವನ್ನು ಕನೈಲಾಲ್ ಮತ್ತು ಸತ್ಯೇನ್ಗೆ ವಹಿಸಿಕೊಡಲಾಯಿತು. ಕ್ರಾಂತಿಕಾರಿಗಳ ಆದೇಶದನ್ವಯ ಇವರಿರ್ವರು ಆ ದೇಶದ್ರೋಹಿಯನ್ನು ಕೊಲ್ಲುವ ಉದ್ದೇಶದಿಂದ ಆನಾರೋಗ್ಯದ ನೆಪವೊಡ್ಡಿ ಆಸ್ಪತ್ರೆ ಸೇರಿಕೊಂಡರು.
*ಕೊನೆಗೂ ಕಾರ್ಯ ಪೂರೈಸಿದ ಶೂರರು
ಆಸ್ಪತ್ರಯಲ್ಲಿ ನಾಟಕವಾಡಿದ ಇವರು ನಾವುಕೋಡ ಕ್ರಾಂತಿಕಾರಿಗಳ ವಿರುದ್ಧ ಸಾಕ್ಷ್ಯನುಡಿಯುತ್ತೇವೆ ನಮ್ಮನ್ನು ನರೆನ್ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು. ನಂಬಿದ ಬ್ರಿಟಿಷರು 1908ರ ಆಗಷ್ಟ 31 ರಂದು ಅವಕಾಶ ಕಲ್ಪಿಸಿದರು. ಅವನಜೊತೆ ಮಾತನಾಡುತ್ತಲೆ ಸಿಕ್ಕ ಅವಾಕಾಶವನ್ನು ಸದುಪಯೋಗ ಪಡಿಸಿಕೊಂಡ ಕನೈಲಾಲ್ ದ್ರೋಹಿಯನ್ನು ಹೊಡೆದುರುಳಿಸಿದನು. ನಂತರ ತಪ್ಪಿಸಿಕೊಳ್ಳದೆ ಬಂಧನಕ್ಕೊಳಗಾದರು.ಆದರೆ ಚಿರಯೌವನದ ಚೇತನ ಚಿಲುಮೆಯಾಗಿದ್ದ ಕನೈಲಾಲ್ ನಗುತ್ತಲೇ ನೇಣುಗಂಬವೇರಿದನು. 1908ನವೆಂಬರ್10ನೇ ತಾರಿಖಿನಂದು ಇಡೀ ದೇಶವೇ ಕನೈಲಾಲ್ಗಾಗಿ ಕಣ್ಣಿರಿಟ್ಟಿತು.
*ಲೇಖನಿಯಿಂದ ಬೆಂಕಿ ಉಗುಳಿದ ರಾಮ್ ಪ್ರಸಾದ್ ಬಿಸ್ಮಿಲ್
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ,ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ ಎಂದರೆ ಶಿರವನಪರ್ಿಸುವ ಬಯಕೆ ಎನ್ನ ಮನದೊಳಿಹುದಿಂದು,ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು.
ಈ ಮೇಲಿನ ಸಾಲುಗಳು ಬರೀ ಸಾಲುಗಳಲ್ಲ ಕ್ರಾಂತಿಯ ಮಂತ್ರಗಳು. ಇ ಕವಿತೆಯೂ ಭಗತ್ಸಿಂಗ್ರಿಗೆ ಬಹಳ ಇಷ್ಟವಾದ ನುಡಿಗಳಾಗಿದ್ದವು. ಜಯಲಿನಲ್ಲಿ ಕುಳಿತಾಗಲು ಅವರು ನುಡಿದ ಏಕೈಕ ಗೀತೆಯಿದು.ಇಂಥ ಬೆಂಕಿಯಂಥ ಸಾಲುಗಳನ್ನು ರಚಿಸಿ ಬ್ರಿಟಿಷರ ಎದೆ ನಡುಗಿಸಿದ ಅಗ್ನಿಶಿಶುವೇ ರಾಮ್ಪ್ರಸಾದ್ ಬಿಸ್ಮಿಲ್.
1897 ರಲ್ಲಿ ಉತ್ತರ ಪ್ರದೇಶದ ಷಹಜಾನಪುರ ದಲ್ಲಿ ಜನಿಸಿದ ಬಿಸ್ಮಿಲ್ರು ಶಂತಿಯಿಂದ ಮಾಡುತ್ತಿರುವ ಸ್ವಾತಂತ್ರ ಹೋರಾಟವನ್ನು ಬ್ರಿಟಿಷರು ಹೇಗೆ ಕಾಲಿನಿಂದ ಹೊಸಕಿ ಹಾಕುತ್ತಿದ್ದರು ಎಂಬುದನ್ನು ಮನಗಂಡ ಅವರು ಕ್ರಾಂತಿಕಾರಿಯಾಗಿ ಸಶಸ್ತ್ರ ಹೋರಾಟದ ಕಡೆಗೆ ಒಲವು ತೋರಿದರು.ಆರ್ಯ ಸಮಾಜದ ಚಿಂತನೆಗೊಳತ್ತ ಒಲವಿಟ್ಟುಕೊಂಡಿದ್ದರೂ ಸಹ ನನ್ನಧರ್ಮ ಎಂದು ಅಂಟಿಕೊಂಡವರಲ್ಲ. ಎಲ್ಲರಲ್ಲಿಯೂ ಸಮಾನತೆ ತರಬೇಕು ಎಂಬುದೆ ಅವರ ಉದ್ದೇಶವಾಗಿತ್ತು.
*ಭಾವೈಕ್ಯತೆ ಮೆರೆದ ಬಿಸ್ಮಿಲ್
ರಾಮ್ ಪ್ರಸಾದರು ಹಿಂದೂ ಆಗಿದ್ದರು ಕೂಡ ಬಿಸ್ಮಿಲ್ ಎಂಬುದು ಅವರಿಗೆ ಸಿಕ್ಕ ಬಿರುದು. ಭಾವೈಕ್ಯತೆಯ ಪ್ರತೀಕವಾಗಿದ್ದ ಬಿಸ್ಮಿಲ್ರು ಅಶ್ಫಾಕುಲ್ಲಾರನ್ನು ದೇಶಸೇವೆಗೆ ಕರೆತಂದ ಮಹಾನ್ ನೇತಾರರಾಗಿದ್ದಾರೆ. ಬ್ರಿಟಿಷರು ಅಶ್ಫಾಕುಲ್ಲಾನನ್ನು ರಾಮ್ಪ್ರಸಾದರ ಬಲಗೈ ಎಂದು ಕರೆಯುತ್ತಿರುವಾಗ ಕ್ಷುಲ್ಲಕ ಕಾರಣಕ್ಕಾಗಿ ಧರ್ಮ ಧರ್ಮ ಎಂದು ಹೊಡೆದಾಡುವುದಕ್ಕಿಂತ ಮುಸ್ಲಿಂಮರೆಲ್ಲರ ಕೈ ಒಂದಾದರೆ ಇಡೀ ಬಿಟಿಷ್ ಸಕರ್ಾರದ ವಿನಾಶ ಶತಸಿದ್ಧ ಎಮದು ಹೇಳುತ್ತಿದ್ದರು.
ಹೀಗೆ ವಿವರ್ಿಧ ಜಾತಿ ಧರ್ಮ ಎನ್ನದೆ ಎಲ್ಲರನ್ನು ಒಂದು ಗೂಡಿಸಿ ಸ್ವತಂತ್ರ ಭಾರತವನ್ನು ನಿಮರ್ಾಣ ಮಾಡಲು ಫಣತೊಟ್ಟ ಮಹಾನ್ ನೇತಾರನಾಗಿದ್ದರು. ಲೇಖನಿಯನ್ನು ಹಿಡಿಯುವ ಕೈಯಲ್ಲಿಯೇ ಬಂದುಕನ್ನು ಹಿಡಿದು ಸಶಸ್ತ್ರ ಹೋರಾಟಕ್ಕೆ ಅಣಿಯಾದರು. ತಾವೇ ಬರೆದ ಕವನದಮತೆ ಒಂದು ಬಾರಿ ಬ್ರಿಟಿಷರ ತೋಳ್ಬಲವನ್ನು ಪರೀಕ್ಷಿಸಿಒಬಿಟ್ಟರು.
ಕಾಕೊರಿ ರೈಲು ದರೋಡೆ ಎಂಬ ಐತಿಹಾಸಿಕ ಘಟನೆಯ ರೂವಾರಿಯೇ ರಾಮ್ ಪ್ರಸಾದ ಬಿಸ್ಮಿಲ್ ರವರು. ಹಲವಾರು ರೀತಿಯ ವೇಷ ತೊಟ್ಟುಕೊಂಡುಹಲವಾರು ಹೆಸರು ಹೇಳಿಕೊಂಡು ಬಿಜ್ಪುರ್ ಡಕಾಯತಿ, ದ್ವಾರಕಪುರ್ ದರೋಡೆ ಮಾಡಿ ಬ್ರಿಟಿಷರಿಗೆ ತಲೆನೋವಾಗಿದ್ದರು.
*ನಗುನಗುತ್ತ ಸ್ವರ್ಗಕ್ಕೆ ನೆಗೆ ಸಿಂಹ
1925ರ ಆಗಷ್ಟ 9ರ ಸಂಜೆ ನಡೆದ ಕಾಕೊರಿ ರೈಲು ಧರೋಡೆ ಪ್ರಕರಣದಲ್ಲಿ ಬಂಧಿತರಾಗಿದ್ದ 25 ಮಂದಿ ಕ್ರಾಂತಿಕಾರಿಗಳಲ್ಲಿ ರಾಜೇಂದ್ರ ಲಾಹೀರಿ,ರೋಷನ್ಸಿಂಗ್, ರಾಮ್ಪ್ರಸಾದ್ ಬಿಸ್ಮಿಲ್, ಮತ್ತು ಅಶ್ಫಾಕುಲ್ಲಾರವರಿಗೆ ಗಲ್ಲುಶಿಕ್ಷೆಯಾಯಿತು.ಗಲ್ಲಿಗೇರುವ ದಿನ ಎಂದಿನಂತೆ ವ್ಯಾಯಾಮ ಅಂಗಸಾಧನೆ ಮಾಡಿ ಹಬ್ಬಕ್ಕೆ ಹೊರಟವರಂತೆತ ತಯಾರಾಗಿ ತಿರುಗಾಡುತ್ತಿದ್ದ ಕ್ರಾಂತಿಕಾರಿಗಳನ್ನು ನೋಡಿದಮ್ಯಾಜಿಸ್ಟ್ರೇಟರ್ ಧಿಗ್ಭ್ರಾಂತರಾಗಿ ಬಿಟ್ಟಿದ್ದರು.ನೊಂದ ಸಂಬಧಿಕರಿಗೆ ಸಮಾಧಾನ ಹೇಳಿ ಇದು ನೇಣು ಕುಣಿಕೆಯಲ್ಲಾ ನನ್ನ ಹೊರಾಟಕ್ಕೆ ಬ್ರಿಟಿಷ ಅಧಿಕಾರಿಗಳು ಮಾಡುತ್ತಿರುವ ಸನ್ಮಾನದ ಪ್ರತೀಕವಾದ ಹೂಮಾಲೆ ಎಂದು ಕುಣಿಕೆಯನ್ನು ಚುಂಬಿಸಿ ಕೊನೆಯಬಾರಿಗೆ ಬ್ರಿಟಿಷ ಸಾಮ್ರಾಜ್ಯದ ಗುಂಡಿಗೆ ನಡುಗುವಂತೆ ಒಂದೇ ಮಾತರಂ ಎಂದು ಕೂಗಿ ಕೊನೆ ಉಸಿರು ಎಳೆಯುತ್ತಿದ್ದರು.
1927ರ ಡಿಸೆಂಬರ್ 19 ರಂದು ರಾಮ್ಪ್ರಸಾದರನ್ನು
ಪಯಜಾಬಾದಿನಲ್ಲಿ ಗಲ್ಲುಗಂಬಕ್ಕೇರಿಸಲಾಯಿತು. ಭಾರತಾಂಬೆಯ ಬಿಡುಗಡೆಗಾಗಿ ಹೋರಾಡಿದ ಮತ್ತೊಂದು ಅಗ್ನಿಶಿಶು ಸ್ವತಂತ್ರ್ಯದ ಸಿಹಿ ತಿನ್ನುವ ಮೊದಲೆ ವೀರಮರಣವನ್ನಪ್ಪಿಕೊಂಡಿದ್ದು ನಮ್ಮ ದೌಭರ್ಾಗ್ಯವೇ ಸರಿ. ಆದರೆ ಇಂಥ ಭಾವೈಕ್ಯತೆಯ ಮೂತರ್ಿ ಬರೆದ ಕವಿತೆ ಚಲನಚಿತ್ರಗಿತೆಯಾಗಿ ಬಳಸಿಕೊಂಡಿದ್ದಾರೆ.ಆದರೆ ಅದನ್ನು ಬರೆದ ಮಹಾನ್ ವ್ಯಕ್ತಿಯ ಹೆಸರು ಮಾತ್ರಾ ಯಾರಿಗು ಗೊತ್ತಿಲ್ಲ ಇದು ಎಂತ ವಿಪಯರ್ಾಸವಲ್ಲವೆ.
*ಹೋರಾಟ ಮಾಡಿ ಹುಲಿ ಎನಿಸಿಕೊಂಡ ಜತಿಂದ್ರನಾಥ
ಒಂದು ಬಾರಿ ರಯಲಿನಲ್ಲಿ ಪ್ರಯಾಣಿಸುತ್ತಿರುವಾಗ ಕೆಲವು ಜನ ಆಂಗ್ಲ ಸೈನಿಕರು ಭಾರತೀಯ ಯುವತಿಯೋರ್ವಳೊಂದಿಗೆ ಅಸಭ್ಯವಾಗಿ ವತಿಸುತ್ತಿದ್ದರು.ಹುಡುಗಿಯ ತಮದೆ ಕೈ ಮುಗಿದು ಕೇಳಿಕೊಂಡರು ಅವರ ಉಪಟಳ ನಿಲ್ಲಲಿಲ್ಲ. ಈ ಘಟನೆಯನ್ನು ನೋಡುತ್ತಿದ್ದ ಹುಡುಗನೊಬ್ಬ ಎದ್ದು ಬಮದು ತಮ್ಮ ಮತ್ತು ಅವರ ಮಧ್ಯದಲ್ಲಿ ಇದ್ದ ಸರಳನ್ನು ಕಿತ್ತಿ ಬ್ರಿಟಿಷ್ ಸೈನಿಕರಿಗೆ ಮನಸೋ ಇಚ್ಚೆ ಥಳಿಸಿದನು. ಬ್ರಿಟಿಷ್ ಸೈನಿಕರಿಗೆ ಭಾರತಿಯನು ಹೊಡೆದನು ಎಂದು ಕೋಟರ್್ನಲ್ಲಿ ದಾವೆ ಹೂಡಲಾಯಿತು.ಆದರೆ ಒಬ್ಬ ಭಾರತಿಯ ಆರುಜನ ಬ್ರಿಟಿಷ್ ಸೈನಿಕರಿಗೆ ಥಳಿಸಿದನೆಂದು ಗೊತ್ತದರೆ ಬ್ರಿಟತಿಷ್ ಸಕರ್ಾರದ ಮಯರ್ಾದೆ ಹರಾಜಾಗುತ್ತದೆ ಎಣದು ಕೇಸನ್ನು ಕಯಬಿಡಲಾಯಿತು.
ಅದೇ ರೀತಿಯಲ್ಲಿ ಮತ್ತೋದು ಬಾರಿ ಸಾರೋಟನಲ್ಲಿದ್ದ ಭಾರತಿಯ ಮಹಿಳೆಯರ ಮೇಲೆ ಬ್ರಿಟಿಷ್ ಯುವಕರು ಅನುಚಿತವಾಗಿ ವತರ್ಿಸುತ್ತದ್ದರು. ಕೇಳಿದರೆ ಮೋಜಿಗಾಗಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಂತೆ ಒಬ್ಬ ಯುವಕ ಎದ್ದು ಬಂದು ನಾಲ್ಕು ಜನರನ್ನು ಕೇವಲ ಒಮದೆ ಕಯಯಿಂದಲೆ ಹೊಡೆದೋಡಿಸಿದನು. ಅಲ್ಲಿದ್ದ ಒಬ್ಬ ಹಿರಿಯ ನಲ್ಕು ಜನರನ್ನು ನೀನೊಬ್ಬ ಅದು ಒಂದೆ ಕೈಯಿಂದ ಹೊಡೆದೋಡಿಸಿದೆಯಲ್ಲ ಅದು ಹೇಗೆ ಸಾಧ್ಯ ಎಂದು ಕೇಳಿದನು.ಆಗ ಆ ಯುವಕ ನಾವೆಲ್ಲರು ಕಯ ಜೋಡಿಸಿದರೆ ಇಡಿ ಬ್ರಿಟಿಷ್ ಸಾಮ್ರಾಜ್ಯವೆ ನಿನರ್ಾಮವಾಗಿ ಹೊಗುತ್ತದೆ ಎಂದು ಹೇಳಿದನು.ಆ ಧಿರ ಯುಯವಕನೆ ಬಂಗಾಳದ ಹುಲಿ ಜತಿಂದ್ರನಾಥ ಮುಖಜರ್ಿ.
1879ರಲ್ಲಿ ಉಮೇಶಚಂದ್ರ ಮುಖಜರ್ಿಯವರ ಮಗನಾಗಿ ಜನಿಸಿದ ಜತಿಂದ್ರನಾಥ ಚಿಕ್ಕ ವಯಸ್ಸಿನಲ್ಲೆ ತಂದೆ ಕಳೆದು ಕೊಂಡು ತಾಯಿಯ ಆರೈಕೆಯಲ್ಲಿ ಬೆಳೆದನು. ತಾಯಿಯಿಂದ ಜೀವನದ ಪಾಠ ಕಲಿತನು. ಹದಿ ಹರೆಯದ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡನು. ಹೆತ್ತ ತಾಯಿಯನ್ನು ಕಳೆದುಕೊಂಡಮೇಲೆ ದೃತಿಗೆಡದ ಜತಿಂದ್ರನಾಥ ಹೊತ್ತ ತಾಯಿಯ ಬಂಧನ ಮುಕ್ತಿಗಾಗಿ ತಮ್ಮ ಪ್ರಾಣವನ್ನೆ ಫಣವಾಗಿಟ್ಟರು. ಮೆಟ್ರಿಕ್ಯಲೇಷನ್ ಮುಗಿಸಿ ತಮ್ಮ ಸಂಪೂರ್ಣ ಶಕ್ತಿ ಮತ್ತು ಸಮಯವನ್ನು ಕ್ರಾಂತಿಕಾರಕ ಚಟುವಟಿಕೆಗಳಿಗೆ ಮೀಸಲಿರಿಸುವ ಸಲುವಾಗಿ ತಮ್ಮ ವಿಧ್ಯಾಭ್ಯಾಸವನ್ನು ಕಯಬಿಟ್ಟು ಕ್ರಾಂತಿಕಾರಕ ಚಟುವಟಿಕೆಗಳಿಗೆ ಕಾಲಿಟ್ಟರು. ತದ ನಂತರ ಯುಗಾಂತರ ಎಂಬ ಭೂಗತ ಕ್ರಾಂತಿಕಾರಿ ಗುಂಪಿನೊಂದಿಗೆ ಸೇರಿಕೊಂಡು ವಿಲಿಞಂ ಪೋಟರ್್ ವಶಪಡಿಸಿಕೊಳ್ಳಲು ಞತ್ನಿಸಿ ವಿಫಲವಾದರು. ಆದರೆ 1910 ರಲ್ಲಿ ಅವರನ್ನು ಅಸ್ತಗಿರಿ ಮಾಡಲಾಞಿತು. ಅಲ್ಲಿಂದ ತಪ್ಪಿಸಿಕೊಂಡ ಜತಿಂದ್ರನಾಥರು ಬ್ರಿಟಿಷರನ್ನು ಸಂಪೂರ್ಣವಾಗಿ ನಿಣರ್ಾಮ ಮಾಡುವ ಉದ್ದೇಶದಿಂದ ಸಶಸ್ತ್ರ ಹೋರಾಟದೆಡೆಗೆ ಧಾಪುಗಾಲು ಹಾಕಿದರು.
ಶಸ್ತ್ರಸಜ್ಜಿತ ಹೋರಾಟದ ಸಫಲತೆ ಮಾಡುವುದಕ್ಕಾಗಿ ಜಪಾನಿನಿಂದ ಶಸ್ತ್ರಾಸ್ತ್ರಗಳನದನು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡರು. ಅವರು ಮತ್ತು ಸಂಗಡಿಗರು ಸೇರಿಕೊಂಡು ಸುಮಾರು 50 ಮೌಸರ್ ಪಿಸ್ತೊಲ್ಗಳನ್ನು ಮತ್ತು 46 ಸಾವಿರ ಗುಂಡಿನ ಸರಗಳನ್ನು ಸಂಗ್ರಹಿಸಿದರು. ಇವೆಲ್ಲ ಕಾರ್ಞಗಳಿಂದಾಗಿ ಬ್ರಿಟಿಷರ ಪಾಲಿಗೆ ಹುಲಿಆಗಿ ಕಾಡುತ್ತಿದ್ದರು. ಹೀಗಾಗಿ ಜನ ಇವರನ್ನು ಬಂಗಾಳಿ ಭಾಷೆಞಲ್ಲಿ ಭಾಗ ಎಂದು ಕರೆಞುತ್ತಿದ್ದರು. ಬಾಘ ಎಂದರೆ ಬಂಗಾಳಿ ಭಾಷೆಯಲ್ಲಿ ಹುಲಿ ಎಂದೇ ಅರ್ಥ.
ಹೋರಾಡಿ ಮಡಿದ ಹುಲಿ
ಜಿತೇಂದ್ರನಾಥ್ `ಮೋವರಿಕ ಎಂಬ ಹಡಗಿನ ಮೂಲಕವಾಗಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುವಂತಹ ಹವಣಿಕೆಯಲ್ಲಿದ್ದನು. ಇದು ರಾಜದ್ರೋಹಿಯೊಬ್ಬನಿಂದ ಬಹಿರಂಗವಾಗಿ ಬ್ರಿಟಿಷರಿಗೆ ತಲುಪಿತು. ಶಸ್ತ್ರಾಸ್ತ್ರಗಳನ್ನು ಓರಿಸ್ಸಾದ ಬಾಲಸೋರಿನಲ್ಲಿ ಇಳಿಸಬೇಕಿತ್ತು. ಆದರೆ ಅಲ್ಲಿ ಬ್ರಿಟಿಷರಿಗೂ ಮತ್ತು ಕ್ರಾಂತಿಕಾರಿಗಳ ಮದ್ಯದಲ್ಲಿ ತೀವ್ರ ಕಾಳಗ ನಡೆಯಿತು. ಇದರಿಂದ ಗುಂಡಿನ ಹೊಡೆತಗಳಿಂದ ತೀವ್ರ ಗಾಯಗೊಂಡಿದ್ದ ಕಾರಣ 1914ನೆಯ ಸೆಪ್ಟೆಂಬರ್ 9 ರಂದು ಬಾಲಸೋರ ಆಸ್ಪತ್ರೆಯಲ್ಲಿ ಮರಣಹೊಂದಿದರು.
ಜತೀಂದ್ರನಾಥ ಮುಖಜರ್ಿ ತಮ್ಮ ಅಪ್ರತಿಮ ಹೋರಾಟದ ಫಲವಾಗಿ ಬಾಘಾ ಜತಿನ್ ಎಂದು ಗುರುತಿಸಿಕೊಂಡರಷ್ಟೇ ಅಲ್ಲದೆ ಭಗತ್ಸಿಂಗ್, ಚಂದ್ರಶೇಖರ ಆಜಾದ್ರಂತೆ ಜತೀಂದ್ರರು ಕೂಡ ಚರಿತ್ರೆಯಲ್ಲಿ ಪ್ರಸಿದ್ಧರಾದರು.
ಆದರೆ ಇಡೀ ಭಾರತ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿ ಮಡಿದ ಹುಲಿ ಭಾಷಾ ಜತಿನ್ ಹೆಸರು ಯಾರಿಗೂ ತಿಳಿದಿಲ್ಲದಿರುವುದು ನಾಚಿಕೆ ತರುತ್ತದೆ.
ಸಾವಿಗೆ ಹೆದರುವುದಿಲ್ಲವೆಂದ ಅಶ್ಫಾಕುಲ್ಲಾ ಖಾನ್
ಹಿಂದೂಸ್ತಾನದ ಸಹೋದರರೇ ನೀವು ಯಾವುದೇ ಧರ್ಮದವರಾಗಿರಿ ಯಾವುದೇ ಮತದವರಾಗಿರಿ ಆದರೆ ದೇಶ ಸೇವೆಗೆ ಮೊದಲಾಗಿರಿ. ವ್ಯರ್ಥವಾಗಿ ನಮ್ಮೊಳಗೆ ನಾವು ಜಗಳವಾಡಿಕೊಳ್ಳುತ್ತ ಬೇರೆಯವರಿಗೆ ಅನುಕೂಲ ಮಾಡಿಕೊಡುವುದು ಬೇಡ. ದೇಶದ ಸ್ವಾತಂತ್ರ್ಯಕ್ಕಾಗಿ ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ. ನೀವು ನಮ್ಮೊಂದಿಗೆ ಸಹಕರಿಸಿ. ದೇಶವನ್ನು ಬಂಧಮುಕ್ತಗೊಳಿಸಿ. ದೇಶದ ಏಳುಕೋಟಿ ಮುಸಲ್ಮಾನರಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಗಲ್ಲಿಗೇರುತ್ತಿರುವವರಲ್ಲಿ ನಾನೇ ಮೊದಲಿಗ ಎಂಬುದನ್ನು ನೆನಪಿಸಿಕೊಂಡರೆ ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಕುಣಿಕೆಗೆ ತಲೆ ಕೊಡುವ ಮೊದಲು ಸಂದೇಶವಿತ್ತ ಮಹಾನ್ವ್ಯಕ್ತಿಯೇ ಅಶ್ಫಾಕುಲ್ಲಾಖಾನ್.
1900ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ಷಹಜಹನ್ಪುರದಲ್ಲಿ ಈ ಅಗ್ನಿಶಿಶುವಿನ ಜನನವಾಯಿತು. ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ್ದರೂ ಕೂಡ ಭಾರತದ ಸ್ವಾತಂತ್ರ್ಯ ಹೋರಾಟ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ತರುವಾಯ ಅಪ್ರತಿಮವಾದ ದೇಶಪ್ರೇಮವನ್ನು ಮನದಲ್ಲಿ ತುಂಬಿಕೊಂಡು ಭಾರತ ಮಾತೆಯ ಬಂಧನ ಮುಕ್ತಿಗಾಗಿ ಮುನ್ನುಗ್ಗಿದ್ದರು. ಬ್ರಿಟಿಷ್ ಸೈನ್ಯದಲ್ಲಿ ಪ್ರತಿಷ್ಠಿತ ಹುದ್ದೆ ದೊರಕುತ್ತಿತ್ತಾದರೂ ಅದನ್ನು ಕಾಲಿಂದ ಒದ್ದು ಸ್ವತಂತ್ರ್ಯ ಮಾತೆಯ ಚರಣಕ್ಕೆರಗಿದರು.
ಮೊದಲಿಗೆ ಶಾಂತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಬಹುದು ಎಂದುಕೊಂಡು ಗಾಂಧೀಜಿ ಬಳಿಗೆ ಹೋದ ಅಶ್ಪಕರವರಿಗೆ ನಿರಾಸೆಯಾಯಿತು. ಅಹಿಂಸಾ ಸಿದ್ಧಾಂತದಿಂದಾಗಲಿ, ಅದರ ವಕ್ತಾರರಿಂದಾಗಲಿ ಅವನಿಗೆ ತೃಪ್ತಿ ಸಿಗಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ರಾಮ್ ಪ್ರಸಾದ್ ಬಿಸ್ಮಿಲರ ಕಾರ್ಯಗಳು ಜನರ ಮನೆ ಮಾತಾಗಿದ್ದವು. ಮತ್ತು ಕನೈಲಾಲ್, ಛಾಪೇಕರ ಸಹೋದರರ ವೀರ ಮರಣ ಇವರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಹೀಗಾಗಿ ಕ್ರಾಂತಿಕಾರಕ ನಿಲುವಿನೊಂದಿಗೆ ಚಟುವಟಿಕೆಯಲ್ಲಿ ತೊಡಗಿದರು. ರಾಮಪ್ರಸಾದ್ ಬಿಸ್ಮಿಲ್ ಬಳಿಗೆ ಹೋದರು. ಆದರೆ ಅಶ್ಪಾಕುಲ್ಲಾರ ಎಳೆ ವಯಸ್ಸು ಬಿಸ್ಮಿಲ್ಲರನ್ನು ತಡೆಯಿತು. ಅವರನ್ನು ಅಲಕ್ಷಿಸಿದರು. ಆದರೆ ಛಲಬಿಡದ ಅಶ್ಫಕ ಪದೆ ಪದೇ ರಾಮ್ಪ್ರಸಾದ್ ಬಳಿಗೆ ತೆರಳಿ ಅವರ ವಿಶ್ವಾಸಗಳಿಸಿಕೊಂಡರು. ಮುಂದೆ ಇಬ್ಬರೂ ಆತ್ಮೀಯ ಮಿತ್ರರಾದರು.
ಇವರ ಸ್ನೇಹ ಧರ್ಮಗಳೆಂಬ ಗೋಡೆಯನ್ನೇ ಒಡೆದು ಹಾಕಿತು. ಅಪ್ರತಿಮ ದೇಶಭಕ್ತರಾಗಿದ್ದ ಅಶ್ಫಾಕುಲ್ಲಾರ ಮನಸ್ಸಿನಲ್ಲಿ ಒಬ್ಬ ಕವಿಯಿದ್ದ. ಅವನು ನುಡಿಸಿದ ಮಂತ್ರ ಎಂದರೆ `ಧೀರರು ಸಾವಿಗೆ ಹೆದರುವುದನ್ನು ತಾನೆಲ್ಲೂ ನೋಡಿಲ್ಲ ಎಂದು ಅದೇ ಮಾತಿನ ರೀತಿಯೇ ನಡೆದುಕೊಂಡರೂ ಕೂಡ. ಒಂದು ಬಾರಿ ಖಾನ್ ಜ್ವರದಿಂದ ನರಳುತ್ತಿದ್ದಾಗ ಅವರ ಬಾಯಿಂದ ರಾಮ್ ರಾಮ್ ಎಂಬ ನುಡಿಗಳು ಕೇಳಿ ಬರುತ್ತಿದ್ದವು. ಇದರಿಂದ ಅವರ ತಂದೆ-ತಾಯಿಗಳು ಇವನಿಗೆ ಸೈತಾನನ ಕಾಟವಿದೆ ಮೌಲ್ವಿಯನ್ನು ಕರೆದುಕೊಂಡು ಬಾ ಎಂದರು. ಗೆಳೆಯನಿಗೆ ರಾಮ್ ಪದದ ಮರ್ಮ ಗೊತ್ತಿತ್ತು. ಆದ್ದರಿಂದ ನೇರವಾಗಿ ರಾಮ್ಪ್ರಸಾದ್ ಬಿಸ್ಲಿಲ್ಲಾರನ್ನು ಕರೆದುಕೊಂಡು ಬಂದಾಗ ಜ್ವರದ ನಡುವೆಯೂ ಅಶ್ಫಾಕ ಎದ್ದು ಕುಳಿತರು. ಇದು ಅವರ ನಿರ್ಮಲ ಸ್ನೇಹದ ಬಗ್ಗೆ ತಿಳಿಸಿಕೊಡುತ್ತದೆ.
ಕ್ರಾಂತಿಕಾರಿ ಸಂಘಟನೆಯನ್ನು ವಿಸ್ತರಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದಕ್ಕೆ ಅಪಾರ ಹಣದ ಅವಶ್ಯಕತೆ ಇತ್ತು. ಇದರಿಂದ ಹಣ ಸಂಗ್ರಹಿಸಲು ಸಕರ್ಾರಿ ಖಜಾನೆ ಲೂಟಿ ಮಾಡುವುದಾಗಿ ಸಭೆ ನಿರ್ಣಯಿಸಿತ್ತು. ವೈಯಕ್ತಿಕವಾಗಿ ಇದನ್ನು ತಿರಸ್ಕರಿಸಿದ ಅಶ್ಫಾಕ್ ಸಂಘಟನೆಯ ನಿರ್ಣಯಕ್ಕೆ ಬದ್ಧರಾದರು. ಇಡೀ ಕಾರ್ಯಾಚರಣೆ ಅಲಂ ನಗರದ ಸ್ಟೇಷನ್ನಲ್ಲಿ ಜರುಗಬೇಕಿತ್ತಾದರೆ ಅಲ್ಲಿ ಸಾಮಾನ್ಯ ಜನರಿಗೆ ತೊಂದರೆ ಆಗುವುದನ್ನು ಕುರಿತು ಮನಗಂಡ ಅಶ್ಫಾಕರು ಕಾಕೋರಿ ಮತ್ತು ಅಲಂ ನಗರದ ಮದ್ಯ ಇದನ್ನು ಮಾಡಬೇಕೆಂದರು. ಇವರ ಮಾತಿಗೆ ಸಮ್ಮತಿಸಿದ ಸಂಘಟನೆ ಹಾಗೆಯೇ ಮಾಡಿ ಸಕರ್ಾರಿ ಖಜಾನೆಯನ್ನು ಲೂಟಿ ಮಾಡಿತು. ಈ ವಿಷಯ ಎಲ್ಲ ಕಡೆಯು ಪಸರಿಸಿತು. ಕ್ರಾಂತಿಕಾರಿಗಳೆಲ್ಲರು ತಲೆ ಮರೆಸಿಕೊಂಡರು. ಆದರೆ ಇವರಿಗೆ ಅಜರ್ುನ ಸೇಠಿಮತ್ತು ಅವರ ಸಹೋದರಿ ಸಹಾಯ ಮಾಡಿದರು. ಆದರೆ ದೇಶದ್ರೋಹಿಯೊಬ್ಬನು ನೀಡಿದ ಸುಳಿವಿನ ಮೇರೆ ಅಶ್ಫಾಕನನ್ನು ಬಂಧಿಸಿ ಕೋಟರ್ಿಗೆ ಹಾಜರು ಪಡಿಸಲಾಯಿತು. ಅಲ್ಲಿನ ಒಬ್ಬ ಮುಸ್ಲಿಂನು ನಾನು ಮುಸ್ಲಿಂ, ನೀನು ಮುಸ್ಲಿಂ. ಆದರೆ ನೀನು ಹೋಗಿ ಹೋಗಿ ಆರ್ಯ ಸಮಾಜಿಯಾದ ರಾಮ್ಪ್ರಸಾದ್ ಜೊತೆಗಿದ್ದದ್ದು ಸರಿಯಲ್ಲ. ಅವನು ಇಡೀ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಹೊರಟಿದ್ದಾನೆ. ಆದ್ದರಿಂದ ಅವನ ವಿರುದ್ಧ ಸಾಕ್ಷ್ಯ ನುಡಿ ಎಂದು ಹೇಳಿದಾಗ, ಕೆಂಡಾಮಂಡಲರಾದ ಅಶ್ಫಾಕರು ರಾಮ್ಪ್ರಸಾದ್ರ ಮೇಲಿದ್ದ ನಂಬಿಕೆಯನ್ನು ತಿಳಿಸಿ ಹೇಳಿದ. ಅವರು ಮೊದಲು ಬಾರಿಗೆ ಬಾರಿಗೆ ಬ್ರಿಟಿಷರ ಕುಟಿಲ ನೀತಿಯಾದ ಒಡೆದು ಆಳುವುದನ್ನು ಮೆಟ್ಟಿನಿಂತರು. ಕೊನೆಯವರೆಗೂ ರಾಮ್ಪ್ರಸಾದ್ರ ಸ್ನೇಹಿತನಾಗಿ ಬಂದ ಅಶ್ಫಾಕನು ಸಾಯುವಾಗಲೂ ಕೂಡ ಜೊತೆಯಲ್ಲಿಯೇ ಮಡಿದು ಹಿಂದೂ ಮುಸ್ಲಿ ಭಾಯಿ-ಭಾಯಿ ಎನ್ನುವುದನ್ನು ನಿರೂಪಿಸಿದರು. ಇಂಥ ಅದಮ್ಯ ಚೇತನ ಕುರಿತು ಇಂದು ಯಾರಿಗೂ ತಿಳಿಯದಂತಾಗಿರುವುದು ವಿಪಯರ್ಾಸವಲ್ಲದೇ ಮತ್ತೇನು?

No comments:
Post a Comment