ಒಳಗಡೆ ತುಂಬಿದೆ ಬರೀ ಹಗರಣ
ಮೇವು ಹಗರಣ,ಶೇರು ಹಗರಣ ತೆಹಲ್ಕದಂತ ಶವಪೆಟ್ಟಿಗೆ ಹಗರಣ
ಹಗರಣಗಳಿಂದ ಗೊತ್ತಾಗುವುದು
ಎಲ್ಲರು ಕರ್ಣನ ವಂಶಸ್ತರೆ
ಬೇಡಿದವರಿಗೆ ಬೇಡಿದ ಧಾನ
ನಗನಾಣ್ಯಗಳದೇ ಬಹುಮಾನ
ಮಾಡು ಸುರಾಪಾನದ ಉಡುಗೊರೆ ಕೊಡುಗೆ
ಉಡುಗೊರೆಯನ್ನು ಪಡೆದ ಜನತೆಯು
ಮಾರಿಕೊಲ್ಲುವರು ತಮ್ಮ ಮತವನ್ನು
ರಾಜಕಾರಣಿಗಳ ಎಂಜಲ ಕಾಸಿಗೆ
ಕೈವೊದ್ದಿ ದಾಸರಾಗುವರು ಕೊನೆಗೆ
ಹಗರಣಗಳಿಗೆ ಮೆತ್ತಿಲಾಗುವರು
ಜನರ ತುಳಿದು ಇವರು ಮೇಲಕೆ ಬರುವರು
ಮತ್ತೆ ಹಗರನಗಳದ್ದೆ ದರಬಾರು
ಮತ್ತೆ ರಾಜಕಾರನಿಗಳದ್ದೆ ಕಾರಬಾರು
ದುದ್ದಿನಾಷೆಗೆ ಸ್ವಾಭಿಮಾನವ ಮಾರಿ
ಬೆಳೆಸುತಲಿಹರು ಸಮಾಜದ ವೈರಿ
ಎಚ್ಚರವಾದರೆ ಜನತೆ ಒಂದು ಸಾರಿ
ತೊಡೆದು ಹಾಕ ಬಹುದು ನಮ್ಮನು ಕಾಡುವ ಮಾರಿ
No comments:
Post a Comment