Wednesday, April 6, 2011

"ಹೃದಯದಿಂದ ಯೋಚಿಸಿ ಮುಖ್ಯಮಂತ್ರಿಗಳೇ"




'ಕೇಡುಗಾಲಕ್ಕೆ ನಾಯಿ ಮೊಟ್ಟೆ ಹಾಕಿತು" ಅನ್ನೊ ಗಾದೆ ಮಾತನ್ನು ನಾವು ಸಾಮಾನ್ಯವಾಗಿಕೇಳುತ್ತೇವೆ. ಅದರ ಅರ್ಥ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಈ ಗಾದೆಗೆ ಉತ್ತಮ ಉದಾಹರಣೆ ಎಂದರೆ ನಮ್ಮ ಸಕರ್ಾರಗಳು ಮತ್ತು ಮಂತ್ರಿ ಮಹೋದಯರು. ಅದರಲ್ಲಿಯೂ ನಮ್ಮ ಮುಖ್ಯಮಂತ್ರಿ ಎಡೆಯೂರಪ್ಪ. ಹೆಸರಿಗೆ ತಕ್ಕಂತೆ ಸಕರ್ಾರದ ಹಣವನ್ನು 'ಎಡೆ'(ನೈವೆದ್ಯ) ಮಾಡಿ ಕಂಡ ಕಂಡ ಮಠಗಳಿಗೆ, ಕಂಡ ಕಂಡ ದೇವಸ್ಥಾನಗಳಿಗೆ,ಕಂಡ ಕಂಡ ಟ್ರಸ್ಟ್ ಗಳಿಗೆ,ಸಾಲದೆಂಬತೆ ಕ್ರಿಕೆಟ್ ಆಟಗಾರರಿಗೆ ಉಣ ಬಡಿಸುತ್ತಿರುವುದನ್ನು ನೋಡಿದರೆ ನಾಳೆ ನಮ್ಮ ರಾಜ್ಯದ ಸ್ಥತಿ ಏನಾಗಬಹುದು ಎನ್ನುವಂತ ಸಂಶಯದ ಕಾಮರ್ೂಡ ನಮ್ಮನ್ನು ಆವರಿಸುತ್ತದೆ. ಅಧಿಕಾರಕ್ಕೆ ಬಂದಾಗಿನಿಂದಲು ಬರಿ ತಮ್ಮ ಖುಚರ್ಿ ಉಳಿಸಿಕೊಳ್ಳಲು ಹಲವಾರು ಸರ್ಕಸ್ ಮಾಡುತ್ತಿರುವ ಯಡಿಯೂರಪ್ಪನವರಿಗೆ ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ. ಸಮಸ್ಯೆಗಳು ಬಾರದೆ ಇದ್ದರೆ ಸಮಸ್ಯೆಗಳ ಬೆನ್ನಟ್ಟಿ ಹೋಗುವುದು ಅವರಿಗೆ ರೋಡಿಯಾಗಿ ಬಿಟ್ಟಿದೆ. ಮೊನ್ನೆಯ ವರೆಗೂ ಭು ಹಗರಣಗಳ ಸರಧಾರನಗಿ ಮಿಂಚಿದ ಯಡಿಯೂರಪ್ಪನವರು ನಿನ್ನೆ ಪ್ರೇರಣಾ ಟ್ರಸ್ಟ್ಗೆ ನೀಡಿದ ದೇಣಿಗೆಯಿಂದ ಸುದ್ದಿಯಲ್ಲಿದ್ದರು.ಕೊಟ್ಯಂತರ ರೂ ಗಳನ್ನು ಸ್ವಾಹಾ ಮಾಡಿದ್ದಾರೆಂಬ ಆರೋಪವನ್ನು ಹೊತ್ತುಕೋನಡಿರುವ ಯಡಿಯೂರಪ್ಪನವರನ್ನು ನೋಡಿದರೆ ನಮ್ಮಲ್ಲಿ ಸಾಮಾನ್ಯವಾಗಿ ಉದ್ಬವವಾಗುವ ಪ್ರಶ್ನೆ ಎಂದರೆ,ಇದು ಇವರಿಗೆ ಬೇಕಿತ್ತಾ? ಇಂಥವರು ನಮ್ಮ ಮೂಖ್ಯ ಮಂತ್ರಿಗಳಾಗಬೇಕಾ? ಮೋದಲ ಬಾರಿಗೆ ಬಿಜೆಪಿ ನೇತೃತ್ವದ ಸಕರ್ಾರ ಅಸ್ಥಿತ್ವಕ್ಕೆ ಬಂದಾಗ ನಮ್ಮ ರಾಜ್ಯವು ಕೂಡಾ ಗುಜರಾತಿನ ಹಾಗೆ ಮಾದರಿ ರಾಜ್ಯವಾಗಿ ಬದಲಾಗುತ್ತದೆ. ಎಂಬ ಕನಸು ಕಂಡದ್ದು ತಪ್ಪಾಯಿತಾ? ನಮ್ಮ ಕನಸು ನನಸಾಗುವುದಾ? ಹೀಗೆ ಹಲಾವರು ಪ್ರಶ್ನೆಗಳು ಹುಟ್ಟಿಕೋಲ್ಲುತ್ತಿವೆ ಇಂಥ ಕ್ಷಣದಲ್ಲಿ ಇನ್ನೊಂದು ಪ್ರಶ್ನೆ ನಮ್ಮ ಮೂಖ್ಯ ಮಂತ್ರಿಗಳಿಗೆ ಮಾತರವಲ್ಲದೆ ಇನ್ನು ಹಾಲವಾರು ರಾಜ್ಯಗಳ ಮುಖ್ಯಮಂತ್ರಿಗಳಿಗು ಅನ್ವಯಿಸುತ್ತದೆ. ಉತ್ತರ ಕನರ್ಾಟಕದಲ್ಲಿ ಪ್ರವಾಹ ಬಂದು ಹೋಗಿ ಸುಮಾರು ಒಂದು ವರ್ಷ ಕಳೆದು ಃಓಯಿತು. ಅಂದು ಮನೆ ಮಠ ಕಳೆದುಕೊಂಡು ಬಿದಿಪಾಲಾದವರು ಇಂದಿಗೂ ಹಾಗೆ ಇದ್ದಾರೆ.ಅತಂತ್ರ ಸ್ಥತಿಯಲ್ಲಿರುವ ಅವರ ಬದುಕನ್ನು ಸ್ವಚ್ಚಂದ ಗೊಳಿಸಲು ಯಡಿಯೂರಪ್ಪನವರು ಒಮ್ಮೆಯಾದರು ಯೋಚಿಸಿದ್ದಾರಾ? ಇವರ ಬದುಕನ್ನು ಪುನರ್ ನಿಮರ್ಾಣ ಮಾಡಬೇಕಾದ ಇವರು ಮಾಡುದ್ದಾರು ಏನು? ಸಂತ್ರಸ್ಥರ ಪರಿಹಾರ ನಿಧಿಯನ್ನು ಸ್ವಂಥಕ್ಕೆ ಬಳಸಿಕೊಂಡ ಕಾಂಗ್ರೆಸ್ಸಿನ ಮುಖಂಡರು ಇಂದು ಮಹಾನ್ ಪತಿವೃತೆ ಸೋಗಿನಲ್ಲಿ ತಿರುಗಾಡುತ್ತಿದ್ದರು ಅದನ್ನು ಕೇಳೂವ ಗೋಜಿಗೆ ಯಾರು ಹೋಗಲಿಲ್ಲ ಯಾಕೆ? ಕಾಶವನ್ನು ತೋರಿಸಿ ಅಂಗೈಲಿರುವುದನ್ನು ಕಿತ್ತುಕೊಂಡರೆ ವಿನಃ ಕೈಲಾಗದವರಿಗೆ ಕೈ ನೀಡಿಕಾಪಾಡುವ ಕೆಲಸ ಯಾರು ಮಾಡದಿರುವುದು ವಿಪಯರ್ಾಸವಲ್ಲವೆ? ಸದ್ಯಕ್ಕೆ ಇವರು ಮಾಡಿರುವ ಅಲ್ಟಿಮೇಟ್ ಸಾಧನೆಗೆ ಬರೋಣ, ಆರು ಕೋಟಿ ಕನ್ನಡಿಗರಿರುವ ಕನರ್ಾಟಕದಲ್ಲಿ ಎಷ್ಟೋ ಜನರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಸತಿ ಸೌಕರ್ಯವಿಲ್ಲ. ಸೂರಿಲ್ಲ ಏಷ್ಟೋಜನ ಆಕಾಶವೇ ಸೂರೆಂದು ಕೋಂಡು ಭವಿಷ್ಯದ ಬಗ್ಗೆ ವಿಚಾರ ಮಾಡುವುದನ್ನೆ ಬಿಟ್ಟು ಬದುಕುತ್ತಿದ್ದಾರೆ. ಕನ್ನಡಿಗರಿಲ್ಲದ ಕನರ್ಾಟಕದ ರಾಜಧಾನಿ ಬೆಂಗಳೂರು ಒಂದರಲ್ಲೆ ಸಾವಿರಾರು ಜನ ನಿರ್ಗತಿಕರು ಮನೆ ಮಠ ವಿಲ್ಲದೆ ಸ್ಮಶಾನಗಳಲ್ಲಿ,ಪಾಳು ಮಂಟಪಗಳಲ್ಲಿ,ಪ್ಲೈಓವರ್ ಅಡಿಯಲ್ಲಿ,ಕೊಳಚೆ ಪ್ರದೇಶಗಳಲ್ಲಿ, ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಇವರ ಬಗೆಗೆ ಎಂದಾದರು ಒಂದು ದಿನಾ ನಮ್ಮ ಮಂತ್ರಿಗಳು ವಿಚಾರ ಮಾಡಿದ್ದಾರ? ಅವರಿಗು ನೆಲೆ ಕಲ್ಪಿಸುವಮಟ್ಟದಲ್ಲಿ ಆಲೋಚಿಸಿದ್ದಾರಾ? ಊಹೂಂ.... ಯಾಕೆಂದರೆ ಹಸಿದವನಿಗೆ ಅನ್ನದ ಬೆಲೆ ಗೊತ್ತಾಗುವುದು.ಎಸಿ ರೂಂನಲ್ಲಿ ಕುಳಿತುಕೋಡು ಕಾನೂನು ಗೀಚುವವರಿಗೆ ಕಷ್ಟದಲ್ಲಿರುವವರ ಸ್ಥಿತಿ ಎಲ್ಲಿ ತಿಳಿಯಬೇಕು ಹೇಳಿ?. ನಿರ್ಗತಿಕರಿಗೆ ಒಂದು ನೆಲೆ ಕಲ್ಪೊಇಸಿಕೋಡುವ ಕನಿಷ್ಟ ಪರಿವೆಯು ಇಲ್ಲದ ಅಯೊಗ್ಯ ಮಂತ್ರಿಗಳಿಗೆ ನಮ್ಮ ದಿಕ್ಕಾರವಿರಲಿ. ಎರಡನೇ ತಾರಿಖಿನಂದು ಭಾರತ ಜನತೆ ಸಂಬ್ರಮದಲ್ಲಿದ್ದರು. ಕಾರಣ ಭಾರತ ಕ್ರಿಕೆಟ ತಂಡ ವಿಶ್ವಕಪ್ ಗೆದ್ದುಕೋಡಿದ್ದು, ಇದು ನಮಗೂ ಕೂಡ ಖುಷಿ ತಂದಿದೆ. ಅದು ಕೇವಲ ಕ್ರೀಡೆ ಅದಕ್ಕೆ ಎಷ್ಟರಮಟ್ಟಿಗೆ ಪ್ರೋತ್ಸಾಹಿಸಬೇಕೊ ಅಷ್ಟರಮಟ್ಟಿಗೆ ಪ್ರೋತ್ಸಾಹಿಸಬೇಕು ಅದನ್ನು ಬಿಟ್ಟು ದೇಶವನ್ನೆ ಅವರಿಗೆ ಬರೆದು ಕೋಡುವವರಂತೆ ಅಮಲೇರಿದವರಂತೆ ಆಡುತ್ತಿರುವ ನಮ್ಮ ಮಂತ್ರಿಗಳನ್ನು ಕಂಡರೆ ನಾಚಿಕೆಯಾಗುತ್ತದೆ. ವಿಶ್ವಕಪ್ ಗೆದ್ದು ತಂದಿದ್ದಕ್ಕಾಗಿ ಅವರಿಗೆ ಸಲ್ಲಬೇಕಾದ ಬಹುಮಾನ,ಸಂಭಾವನೆ ಆಗಲೆ ತಲುಪಿದ್ದಾಗಿದೆ.ಸಧ್ಯಕ್ಕಂತು ಉದ್ಯಮಿಗಳನ್ನು ಬಿಟ್ಟರೆ ಕೋಟ್ಯಾಧಿಪತಿಗಳ ಸಾಲಿನಲ್ಲಿ ನಿಲ್ಲುವರೆಂದರೆ,ಚಿತ್ರ ನಟರು ಮತ್ತು ಕ್ರಿಕೆಟ್ ಆಟಗಾರರು. ಹೌದು ಹಿಗಿರುವಾಗ ಕೇವಲ ವಿಶ್ವಕಪ್ ಗೆದ್ದ ಮಾತ್ರಕ್ಕೆ ನಮ್ಮ ಮುಖ್ಯಮಂತ್ರಿ ಯಡೆಯೂರಪ್ಪ ಪ್ರತಿ ಆಟಗಾರನಿಗೂ 50*80 ನಿವೇಶನ ನೀಡುವುದಾಗಿ ಘೋಷಿಸಿರುವುದು ಮತ್ತು ಇತರ ರಾಜ್ಯಗಳು ಆಟಗಾರರಿಗೆ ಕೋಟಿ ಕೋಟಿ ಬಹುಮಾನಾ ನೀಡುತ್ತಿರುದನ್ನು ನೀಡಿದರೆ ಭಾರತ ವಿಶ್ವಕಪ್ ಸೋತಿದ್ದರೆ ಚನ್ನಾಗಿತ್ತು ಎನ್ನಿಸುತ್ತಿದೆ. ಕನರ್ಾಟಕದಲ್ಲಿ ಇವರಿಗೆ ನಿವೇಶನ ನೀಡಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಆದರೆ ಇವರಿಗೆ ನೀವೇಶನ ನೀಡಲು ಕನರ್ಾಟಕವೇನು ಇವರ ತಾತನ ಆಸ್ಥಿಯಾ?ಅಷ್ಟಕ್ಕೂ ಆ ಆಟಗಾರರು ಮನೆ ಇಲ್ಲದೆ ಬಿದಿ ಪಾಲಾಗಿದ್ದಾರಾ? ಸರಿ ಇವರು ನಿವೇಶನ ನೀಡಿದರೆ ಅವರು ಬಂದು ಬೆಂಗಳೂರಲ್ಲೆ ಇತರ್ಾರಾ? ಇದ್ಯಾವುದನ್ನು ಯೋಚಿಸದೆ ಭರವಸೆ ನೀಎಉವ ಮಂತ್ರಗಳಿಗೇನು ಮಾಡಬೇಕು? ಯಡಿಯೂರಪ್ಪ ಬಂದಾಗಿನಿಂದ ಬರಿ ಅವರ ಖುಚರ್ಿಯ ಮೇಲೆ ಕಣ್ಣಿಟ್ಟು ಅವರ ಪ್ರತಿಯೋಂದು ಕಾರ್ಯವನ್ನು ಯಶಸ್ವಿಯಾಗಿ ಪ್ರತಿಭಟಿಸುತ್ತಬಂದಿರುವ ವಿರೋಧ ಪಕ್ಷದ ನಾಯಕರು ಇಂತಹ ಅರ್ಥಹೀನ ಕೆಲಸಕ್ಕೆ ಯಾಕೆ ವಿರೋಧಿಸುತ್ತಿಲ್ಲ. ಇದರಿಂದ ನಿಮ್ಮ ಪಕ್ಷಕ್ಕೆನು ಲಾಭವಿಲ್ಲವೇ? ಲಾಭವಿದ್ದರೆ ಮಾತ್ರ ಪ್ರತಿಭಟ್ನೆಯೆ? ಅತವಾ ನಾಳೆ ನೀವು ಅಧಿಕಾರಕ್ಕೆ ಬಂದರೆ ಇಂತಹ ಚಿಲ್ಲರೆ ಗಿಮಿಕ್ಕಿನ ಪ್ರಚಾರ ಕೈಗಿಳ್ಳುವ ಯೋಜನೆ ಏನಾದರೂ ಇದೆಯಾ ಎಂಬುದೇ ತಿ:ಳಿಯುತ್ತಿಲ್ಲ. ಎಲ್ಲ ಮಂತ್ರಿಗಳು ಬಂದು ನಡೆಸುತ್ತಿರುವ ಸಕರ್ಾರವನ್ನು ನೋಡಿದರೆ "ಗರತಿಯ ಮನೆ ಎಂದು ನಾಮಕರಣ ಮಾಡಿ, ವೆಶ್ಯಾವಾಟಿಕೆ" ಮಾಡುತ್ತಿರುವ ಹಾಗಾಗಿದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುತ್ತ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುವಂತಹ ಈ ವ್ಯವಸ್ಥೆಯೆ ನಮ್ಮಂತ ಯುವಕರು ಕೈಯಲ್ಲಿ ಬಂದುಕು ಹಿಡಿದು ನಕ್ಸಲಿಸಂ ನಂತ ಸಿದ್ದಾಂತದ ಬೆನ್ನತುವುದು. ಇನ್ನಾದರು ನೆಲೆ ಇಲ್ಲದವರಿಗೆ ನೆಲೆ ನೀಡುವಂಥ ಯೋಜನೆಗಳು ಜಾರಿಯಾಗಲಿ,ಯುದ್ಧದಲ್ಲಿ ಅಂಗವಿಕಲರಾದ ಮತ್ತು ಹುತಾತ್ಮರಾದ ಯೋಧರ ಮನೆಯವರ ಸಮಸ್ಯೆಗೆ ಸ್ಪಂದನೆ ಸಿಗಲಿ, ದುಡಿಯು ಕಾಮರ್ಿಕನಿಗೆ ಕೆಲಸ ಸಿಗುವ ಹಾಗಾಗಲಿ, ರೈತನ ಸಾವಿಗೆ ಕೊನೆಯಾಗಲಿ. ಆವಾಗ ನಮ್ಮ ನಾಡಿನ ಬಗ್ಗೆ ನಮ್ಮ ಸಕರ್ಾರಮಂತ್ರಿಗಳ ಬಗ್ಗೆ ಅಭಿಮಾನ ಮೂಡುತ್ತದೆ. ಕೊಟ್ಟವರಿಗೆ ಕೋಟಿ ಕೊಡುವುದರಲ್ಲಿ ಅರ್ಥವಿಲ್ಲ ಯಾಕಂದರೆ ಸಕರ್ಾರ ಕೊಡುವ ಒಂದು ಕೋಟಿ ಒಂದು ಹಳ್ಳಿಯನ್ನು ಸಂಪೂರ್ಣವಾಗಿ ಅಭಿವೃದ್ಙಧಿ ಪಡಿಸಬಹುದು. ಹದಿನೈದು ಜನ ಕ್ರಿಕೆಟ್ ಆಟಗಾರರಿಗೆ ಕೊಡುವ ಹಣದಲ್ಲಿ ಹದಿನೈದು ಲಕ್ಷ ಜನರಿಗೆ, ಹದಿನೈದು ಸಾವಿರ ಕಲುಟುಂಬಗಳಿಗೆ ನೆಮ್ಮದಿಶಾಂತಿ ಕೊಡಬಹುದು. "ಮುಖ್ಯ ಮಂತ್ರಿಗಳೆ ಕೇವಲ ಲೆಕ್ಕಾಚಾರದ ಉದ್ಧೇಶದಿಂದ ತಲೆಯಿಂದ ಯೋಚಿಸಬೇಡಿ,ಸಾಮಾನ್ಯ ಪ್ರಜೆಯಾಗಿ ಮನದಿಂದ ಯೋಚಿಸಿ ಆಗ ಸತ್ಯದ ಅರಿವಾಗುತ್ತದೆ." ಇನ್ನು ಸಮಯವಿದೆ ಬದಲಾಗಿ ಬದಲಾವಣೆ ತನ್ನಿ

ಕ್ರಾಂತಿಕಾರಿಗಳೆನು ದೇಶಭಾಕ್ತರಲ್ಲವೇ ?



ಕೆಲವೊಮ್ಮೆ ಬೇಡವೆಂದರು ಮನದಲ್ಲಿ ಹುಟ್ಟಿದ ಎಷ್ಟೋ ಭಾವನೆಗಳು ಹೊರಬರಲಾರದೆ ಅಲ್ಲಿಯೇ ಸತ್ತು ಮನಸೆಂಬುದು ಸೂತಕದ ಮನೆಯಾಗಿಬಿಡುತ್ತದೆ.ಅಲ್ಲಿ ನೀರವ ಮೌನ ಆವರಿಸಿ ವಿಚಿತ್ರ ಪ್ರಶ್ನೆಗಳು ತಲೆ ಎತ್ತುತ್ತವೆ.ಹಾಗೆ ತಲೆ ಎತ್ತಿದ ಪ್ರಶ್ನೆಗಳಲ್ಲಿ ಇದು ಕೂಡ ಒಂದು. ಹೌದು ಕ್ರಾಂತಿಕಾರಿಗಳೇನು ದೇಶಭಕ್ತರಲ್ಲವೆ?.ಸ್ವತಂತ್ರ ಹೋರಾಟದಲ್ಲಿ ಅವರ ಪಾತ್ರವೇ ಇಲ್ಲವೇ?ಶಾಂತಿ ದೂತತರು ಮಾತ್ರ ದೇಶಪ್ರೇಮಿಗಳೇ? ಹೀಗೆ ವಿಚಾರ ಮಾಡುತ್ತ ಹೋದಂತೆ ಪ್ರಶ್ನೆಗಳ ಸರಮಾಲೆ ಬೆಳೆಯುತ್ತ ಹೋಗುತ್ತದೆ. ಮೊದಲಿನಿಂದಲೂ ತಾರತಮ್ಯ ತುಂಬಿದ ಭಾರತೀಯ ಸಮಾಜದಲ್ಲಿ ದೇಶಭಕ್ತರಿಗೆ ಗೌರವ ನೀಡುವಲ್ಲಿಯು ಇದು ಮುಂದುವರೆದಿದ್ದು ನಮ್ಮ ಜನರ ವಿಕೃತ ಮನಸ್ತಿತಿಯ ಕುರಿತು ದರ್ಶನ ಮಾಡಿಸುತ್ತದೆ.
ಹದಿ ಹರೆಯದವರಿಂದ ಹಿಡಿದು ಮುದಿ ವಯಸಸಿನವರ ತನಕ ಯಾರನ್ನು ಕೇಳಿದರು ಅವರ ಬಾಯಲ್ಲಿ ಬರುವುದು ನಮ್ಮ ದೇಶಕ್ಕೆ ಸ್ವತಂತ್ರ ತಂದು ಕೊಟ್ಟವರು ಬಾಪೂಜಿ ಮತ್ತು ನೆಹರೂಜಿ. ಅದರ ಹೊರತು ಅನ್ಯ ಪದವೆಂಬುದೆ ಇಲ್ಲ. ಇದು ನಮ್ಮ ದೌಭರ್ಾಗ್ಯವೇ ತನೇ?.ಬ್ರೀಟಿಷರ ಕದಂಬ ಭಾಹುವಿನಿಂದ ಭಾರತಮಾತೆಯನ್ನು ಬಿಡಿಸಲು ಆತ್ಮಾರ್ಪಣೆ ಮಾಡಿದ ಮಹನೀಯರಿಗೆ ನಾವು ಗೌರವ ಕಂಡರೆ ಮನಸೆಂಬುದು ಮಂಜುಗಡ್ಡೆಯಾಗಿ ಬಿಡುತ್ತದೆ. ಅಲ್ಲಿ ಮತ್ತೆ ನಾವು ಮಾಡುತ್ತಿರುವುದು ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ. ನಿಜ ಹೇಳಬೇಕೆಂದರೆ ಸ್ವಾತಂತ್ರ ಹೋರಾಟದಲ್ಲಿ ಆತ್ಮಾರ್ಪಣೇ ಗೈದವರು ಕ್ರಾಂತಿಕಾರಿಕಾರಿಗಳೇ ವಿನಃ ಶಾಂತಿಪ್ರೀಯರಲ್ಲ.
ಸ್ವಾತಂತ್ರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಜೀವನನ್ನು ಮುಡುಪಾಗಿಟ್ಟ ಬಾಪೂಜಿ ನಿಜವಾದ ದೇಶಭಕ್ತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೆ ದೇಶಭಕ್ತನ ಸೋಗು ಹಾಕಿಕೊಂಡು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತದ್ದ ನೆಹರುನನ್ನು ಯಾವ ಬಾಯಿಂದ ದೇಶ ಭಕ್ತರೆಂದು ಕರೆಯಲಿ. ದೇಶಕ್ಕಾಗಿ ನೆಹರು ಮಾಡಿದ್ದಾದರೂ ಏನು?. ಪಂಚಶಿಲ ತತ್ವ ಎನ್ನುತ್ತ ಚೈನಾ-ಭಾರತ ಯುದ್ಧದಲ್ಲಿ ಭಾರತ ಹೀನಾಯವಾಗಿ ಸೋಲುವುದಕ್ಕೆ ಕಾರಣವಾದ ನೆಹರು ದೇಶಭಕ್ತನೆ?.ತಾನು ಮಾತ್ರ ಭೊಗವಿಲಾಸಿ ಜೀವನ ನಡೆಸುತ್ತ ಭಾರತಿಯ ಸೈನಿಕರಿಗೆ ಪೂರೈಸಬೇಕಾದ ಕನಿಷ್ಠ ಸೌಲಭ್ಯಗಳನ್ನು ನೀಡದೆ ಸಾವಿರಾರು ಸೈನಿಕರ ಸಾವಿಗೆ ಕಾರಣನಾದ ನೆಹರು ಮಹಾತ್ಮನೆ?
ಬ್ರಿಟಿಷ್ ಸಕರ್ಾರ ನಮ್ಮನ್ನು ನಾಯಿಗಳಂತೆನಡೆಸಿಕೊಳ್ಳುತ್ತದ್ದರು ಅವರ ವಿರುದ್ಧ ಒಂದು ಪ್ರತಿಭಟನೆಯ ಚಿತ್ಕಾರವೆತ್ತದ ಇವರು ನಮ್ಮ ದೇಶದ ಹೆಮ್ಮೇಯ ಪುತ್ರ ಸುಭಾಶಚಂದ್ರ ಭೋಸರ ಆಜಾದ್ ಹಿಂದ್ ಪೌಜ್ ವಿರುದ್ಧ ಕತ್ತಿ ಹಿಡಿಯುತ್ತೇನೆ ಎಂದು ಹೇಳಿದ ನೆಹರು ದೇಶ ಭಕ್ತರೆ?ಕೇವಲ ಲೇಡಿ ಮೌಂಟ್ ಬ್ಯಾಟನ್ ಜೊತೆಗಿನ ಸಾಂಗತ್ಯ ಬೇಳೆಸಲು ಇಂದು ಭಾರತ ಪಾಕಿಸ್ತಾನ ಎಂದು ಭಾರತ ಹಡೆದ ಒಡಲಿಗೆ ಚೂರಿ ಹಾಕಿದ ನೆಹರು ದೇಶಭಕ್ತರೆ? ಇವರನ್ನು ನಾವು ಹೇಗೆ ದೇಶಭಕ್ತರು ಎಂದು ಕರೆಯಬೇಕು.
ಕಾರಣವಿಷ್ಟೇಮೊದಲಿನಿಂದಲು ನಮ್ಮಜನರಮನಸಲ್ಲಿ ಕೇವಲ ಕೆಲವರಿಂದಲೆ ದೇಶಕ್ಕೆ ಸ್ವತಂತ್ರ ಸಿಕ್ಕಿತು ಎಂದು ಬೆರಳುಮಾಡಿ ತೋರಿಸುವ ಕೆಲಸವನ್ನು ಕಾಂಗ್ರೆಸ್ಸಕರ್ಾರ ಅಚ್ಚುಕಟ್ಟಾಗಿ ಮಾಡಿ ಮುಗಿಸಿ ಬಿಟ್ಟಿದೆ. ಇದರಿಂದಾಗಿ ಎಷ್ಟೋ ಕ್ರಾಂತಿಕಾರಿ ದೇಶಭಕ್ತರೆಲ್ಲರ ಇತಿಹಾಸ ತೆರೆಮರೆಯಾಗಿದ್ದು ಮುಚ್ಚಿಹೋದ ಸತ್ಯಗಳಾಗಿವೆ. ಕ್ರಾಂತಿಕಾರಿಗಳನ್ನು ಒಂದು ಕಡೆಗಿಡಿ ಶಾಂತಿ ಪ್ರಿಯರನ್ನೆ ನಮ್ಮವರು ಎಷ್ಟು ನಿರ್ಲಕ್ಷಿಸಿದ್ದಾರೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ನೋಡಿ. ಅಕ್ಷೊಬರ್ ಎರಡರೆಂದು ಮಹಾತ್ಮಾಜಿಯವರ ಹುಟ್ಟಿದ ದಿನ ನಿಜ ದೇಶಾದ್ಯಂತ ಅದನ್ನು ನಾವು ಆಚರಿಸುತ್ತೆವೆ. ಆದರೆ ಅದೆದಿನ ಹುಟ್ಟಿದ ನಾಡುಕಂಡ ಮಹಾನ್ ನಾಯಕರಲ್ಲಿ ಒಬ್ಬರಾದ ಲಾಲ್ಬಹಾದ್ದೂರಶಾಸ್ತ್ರಿ ನೆನಪಾಗುವುದೆ ಇಲ್ಲ ಅಲ್ವಾ?. ನವೆಂಬರ್ 14 ಮಕ್ಕಳ ದಿನಾಚರಣೆ ಹೆಸರಲ್ಲಿ ನೆಹರು ಹುಟ್ಟಿದ ಹಬ್ಬವನ್ನು ಆಚರಿಸುವ ನಮಗೆ ಗಾಂಧಿ ತೆಗೆದುಕೊಂಡ ನಿಧರ್ಾರವನ್ನೆ ಪ್ರಶ್ನಿಸುವ ಮನೋಭಾವ ಹೊದಿದ್ದ ಉಕ್ಕಿನ ಮನುಷ್ಯ ಸದರ್ಾರ ವಲ್ಲಭ ಬಾಯಿ ಪಟೇಲರು ಹುಟ್ಟಿದ್ದು ಅಕ್ಟೋಬರ್ 31ರಂದು ಎಂದು ಯಾರಿಗೂ ಗೊತ್ತಲ್ಲ ಇದು ನಮ್ಮ ದೇಶದ ಇತಿಹಾಸ. ಗಾಂದಿ ಬಾಲಬಡುಕರಿಗೆ ಉಪ್ಪರಿಗೆಯ ಸ್ಥಾನ ಆದರೆ ವಿರೋಧಿಸಿದವರಿಗೆ ಮಾತ್ರ ಇಂಥ ಬಹುಮಾನ ಇದೇ ನಮ್ಮ ದೌಭರ್ಾಗ್ಯವಲ್ಲವೇ?
ಮೊದಲಿನಿಂದಲು ನಮ್ಮ ಪಠ್ಯಪುಸ್ತಕಗಳಲ್ಲಿ ಮತ್ತು ಇತಿಹಾಸದಲ್ಲಿ ಶಾಂತಿಪ್ರೀಯರು ಮಾತ್ರಾ ದೇಶಭಕ್ತರು ಕ್ರಾಂತಿಕಾರಿಗಳೆಲ್ಲ ದಾರಿ ತಪ್ಪಿದ ದೇಶ ಭಕ್ತರು ಎಂದು ಬಿಂಬಿಸುವ ಕಾರ್ಯ ವ್ಯವಸ್ತಿತವಾಗಿ ಮಡಲಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ನೆಹರು ತಂದೆ ಮೋತಿಲಾಲ್ ಅಲಿಯಾಸ್ ಶೊಕಿಲಾಲ್ ನೆಹರು ಬರಿ ಬ್ರಿಟಿಷರ ಪಾದದ ಧುಳನ್ನು ಹಣೆಗೆ ವಿಭೂತಿಯಾಗಿಸಿಕೊಳ್ಳತ್ತಿದ್ದರು ಅಂತವರ ಕುರಿತು ಪಠ್ಯ ಅಳವಡಿಸುತ್ತದ್ದರು ವಿನಃ ಸ್ವಾತಂತ್ರ ಹೋರಾಟಕ್ಕೆ ಧುಮುಕಿ ನೇಣಿಗೆ ಶರಣಾದ ಕರಿನೀರಿನ ಶಿಕ್ಷೆಗೆ ಗುರಿಯಾದವರ ಕುರಿತು ತಿಳಿಸುವ ಕಾರ್ಯ ಎಲ್ಲಿಯೂ ನಡೆದಿಲ್ಲವೇಕೆ? ಜನರ ಮನದಲ್ಲಿ ಸುಳ್ಲಿನ ಬೀಜ ಬಿತ್ತಿ ತಪ್ಪು ಭಾವನೆಯ ಬೆಳೆ ಬೆಳೆದಿದ್ದು ಸರಿಯೆ?.
ಸ್ವತಂತ್ರ ಹೋರಾಟ ಚಳುವಳಿ ಎಂಬುದು ನಾಲ್ಕು ಜನರಿಂದ ನಡೆದ ಕಾಲೇಜು ಮುಷ್ಕರವಲ್ಲ ಹಲವಾರು ಜನ ದೇಶಭಕ್ತರಿಂದ ನಡೆದ ಮಹಾಭಾರತವಾದೆ.ಅಲ್ಲಿ ರಾಜ್ಯಬಾರ ಮಾಡಿದವರು ಬ್ರಿಟಿಷರಾದರೆ,ಆಥಿತ್ಯವಹಿಸಿದವರು ಮಂದಗಾಮಿಗಳು, ವನವಾಸ ಮಾಡಿದವರು ಮಾತ್ರ ಕ್ರಾಂತಿಕಾರಿಗಳಾಗಿದ್ದಾರೆ.ಇದರಲ್ಲಿ ವೀರ್ ಸಾವರ್ಕರ್,ಭಗತ್ ಸಿಂಗ್,ಕತರ್ಾರ್ ಸಿಂಗ್,ಸುಭಾಶ್ಚಂದ್ರ ಭೋಸ್, ಹಲವು ಮಹನೀಯರ ದಂಡೆ ಇದೆ. ಲಂಡನ್ನಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದು ಬರಬೇಕಿದ್ದ ಸಾವರ್ಕರ್ ಸ್ವತಂತ್ರ ಗಂಗೆಯ ಒಡಲಿಗೆ ದುಮುಕಿ ಕರಿನೀರಿನ ಶಿಕ್ಷೆಗೆ ಗುರಿಯಾದರು.ವಯಸ್ಸಿಗೆ ಮೀರಿದ ಸಾಧನೆ ಮಾಡುವ ಮೂಲಕ ತನ್ನ ಇಪತ್ಮೂರನೆ ವಯಸ್ಸಿಗೆ ಇಡಿಬ್ರಿಟಿಷ್ ಸಕರ್ಾರಕ್ಕೆ ಸಿಂಹಸ್ವಪನವಾಗಿ ಕಾಡಿದ ನಡು ಕಂಡ ಅಪ್ರತಿಮ ಹೋರಾಟಗಾರ ಭಗತ್ಸಿಂಗ ಕುರಿತದ ಒನದು ಪರಿಚಯದ ಪಾಠವು ಕೂಡ ನಮ್ಮ ಪಠ್ಯದಲ್ಲಿ ಇಲ್ಲಾ.ಯಾಕೆ ಇವರೇನು ದೇಶಭಕ್ತರಲ್ಲವೇ? ದೇಶಕ್ಕಾಗಿ ತಮ್ಮ ಪ್ರಾಣ ಅಪರ್ಿಸಲಿಲ್ಲವೆ? ನೇವೆ ಹೇಳಿ............
ಇನ್ನು ಸ್ವಾತಂತ್ರ ಹೋರಾಟಕ್ಕೆ ಶಾಂತಿ ಮಾರ್ಗಕ್ಕಿಂತ ಕ್ರಾಂತಿಯ ದಾರಿಯೆ ಸರಿಯಾದದ್ದು ಎಂದು ನಂಬಿ ಯುದ್ಧ ಕೈದಿಗಳನ್ನೆಲ್ಲ ಒಂದು ಮಾಡಿ 'ಆಜಾದ್ ಹಿಂದ್ ಫೌಜ್'ನ್ನು ಸ್ಥಪಿಸಿ ಪರಂಗಿಯವರ ಹುಟ್ಟಡಗಿಸಿದ ಸುಭಾಷ್ಚಂದ್ರ ಭೋಸ್ ದೇಶ ಭಕ್ತರಂತೆ ಕಾಣುವುದಿಲ್ಲವೆ? ಬ್ರಿಟಿಷರ ಶೋಷಣೆಯ ವಿರುದ್ಧ ಒಂದು ಹುಲ್ಲು ಕಡ್ಡಿಯನ್ನು ಎತ್ತದ ಹೆಣ್ಣುಬಾಕ ನೆಹರು 'ಇಂಡಿಯನ್ ನ್ಯಾಶಿನಲ್ ಆಮರ್ಿ' ವಿರುದ್ಧವಾಗಿ ನಾನೆ ಕತ್ತಿ ಹಿಡಿದು ಹೋರಾಡುತ್ತೇನೆ ಎಂದು ಬ್ರಿಟಿಷರಿಂದ ಶಹಬಾಷ್ಗಿರಿ ಪಡೆದುಕೊಳ್ಳಲು ಯತ್ನಿಸಿದ ನರಿ ಬುದ್ದಿ ನೆಹರುನನ್ನೇ ದೇಶಭಕ್ತನೆಂದು ಕರೆವಾಗ ಇನ್ನು ದೇಶಕ್ಕಾಗಿ ಪ್ರಾಣ ನೀಡಿದ ಕ್ರೆಆಂತಿಕಾರಿಗಳನ್ನು ಎನೆನ್ನಬೇಕು?
ಕ್ರಾಂತಿಕಾರಿಗಳನ್ನು ಮತ್ತು ಶಾಂತಿಪ್ರಿಯರನ್ನು ತುಲನೆ ಮಾಡಿ ನೋಡಿದರೆ ಇಬ್ಬರಲ್ಲಿ ಯಾವ ವ್ಯತ್ಯಾಸ ಕಾಣಿಸುವುದಿಲ್ಲ. ಇರ್ವರ ಹೋರಾಟದ ದಾರಿಗಳು ಬೇರೆ ಬೇರೆ ಆಗಿದ್ದವು ನಿಜಾ,ಆದರೆಗುರಿ ಮಾತ್ರ ಒಂದೆ ಆಗಿತ್ತಲ್ಲವೆ. ಸಮಾನ ಗುರಿ ಹೋದಿರುವ ಇರ್ವರಲ್ಲಿ ನಾವುಗಳು ಶಾಂತಿ ಪ್ರಿಯರಿಗೆ ಒಂದು ಸ್ಥಾನ ಕ್ರಾಂತಿಕಾಶರಿಗಳಿ ಒಂದು ಸ್ಥಾನ ನೀಡಿರುವುದು ಎಷ್ಟರ ಮಟ್ಟಿಗೆ ಸರಿಎನಿಸುತ್ತದೆ? ನೀವೆ ಯೋಚಿಸಿ. ಪೂವರ್ಾಗ್ರಹ ಪೀಡಿತರಾದ ಎಷ್ಟೋ ಇತಿಹಾಸ ಕಾರರು ಮಾಡಿದ ಪ್ರಮಾದವನ್ನು ನಾವುಗಳು ಕಣ್ಮುಚ್ಚಿ ಸ್ವೀಕರಿಸುತ್ತಿರುವುದು ನಮ್ಮಲ್ಲಿರುವು ದೌರ್ಭಲ್ಯವನ್ನು ಎತ್ತಿ ತೋರಿಸುತ್ತದೆ.
ಶಾಂತಿ ಪ್ರಿಯ ಹೋರಾಟಗಾರರೆಲ್ಲ ಸತ್ತ ನಂತರ ಮಹಾತ್ಮರೆನಿಸಿಕೊಂಡರೆ ಸಾವರ್ಕರ್,ಭಗತ್ಸಿಂಗ್,ಚಂದ್ರಶೆಕರ್ ಆಜಾದ್ ಜನಮಾನಸದಲ್ಲಿ ಮಹಾತ್ಮರಾಗಿ ಅಚ್ಚಳಿಯದಚಿತ್ರಗಳಾಗಿ ಉಳಿದಿದ್ದಾರೆ. ಆದರೆ ನಮ್ಮ ವ್ಯವಸ್ಥೆ ಅದನ್ನು ಬಲವಂತವಾಗಿ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿರುವು ವಿಶಾಧನೀಯವಾಗಿದೆ.
ಕ್ರಾಂತಿಕಾರಿಗಳ ಮೇಲಿನ ಸಂಕುಚಿತವಾದ ಭಾವನೆಯನ್ನು ತೊಡೆದು ಹಾಕಿ ವಿಶಾಲವಾದ ನೋಟದಿಂದ ನೋಡಿದರೆ ನಮ್ಮ ದೇಶಕ್ಕಾಗಿ ಆತ್ಮಾರ್ಪಣೆ ಮಾಡಿದ ಅವರು ದೇಶ ಭಕ್ತರಲ್ಲವೇ? ಎನ್ನುವಂತ ಪ್ರಶ್ನೆ ನಿಮಗು ಕೋಡಮೂಡುತ್ತದೆ. ಕೇವಲ ಮಹಾತ್ಮರ ಮದ್ಯದಲ್ಲಿ ಮಹನೀಯರನ್ನು ಮೂಲೆಗುಂಪು ಮಾಡುತ್ತಿರುವುದು ತಪ್ಪು ಎನ್ನುವದರ ಅರಿವಾಗುತ್ತದೆ.ದೇಶಕ್ಕಾಗಿ ಹೋರಾಡಿದ ಮಹಾನ್ ಚೇತನಗಳಲ್ಲಿ ಭೇದಭಾವತೋರದೆ ಸರ್ವರನ್ನು ಸಮಾನರಾಗಿ ಕಾಣಬೇಕು. ನಮ್ಮ ಪಠ್ಯಪುಸ್ತಕದಲ್ಲಿ ಅಡಕವಾಗಿರುವ ಪೂವರ್ಾಗ್ರಹ ಪೀಡೆ ಮತ್ತು ಏಕಮುಖಿ ಭಾವನೆ ದೂರವಾಗಿ ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮರಾದ ಎಲ್ಲ ದೇಶಪ್ರೇಮಿಗಳ ಕುರಿತು ತಿಳಿಸಿ ಕೊಡುವಕೆಲಸ ನಡೆಯಬೇಕು.ಇದರಿಂದಜನರ ಮನಸಲ್ಲಿ ಏಳುವಂತ ಪ್ರಶೆಗಳ ಸುನಾಮಿ ಶಾಂತವಾಗಭಹುದಾಗಿದೆ.
ನಮ್ಮ ದೇಶಕ್ಕೆ ಸ್ವಾತಂತ್ರ ದೊರಕುವುದಕ್ಕೆ ಒಬ್ಬರ ಪಾತ್ರವಿಲ್ಲ ಶಂತಿ-ಕ್ರಾಂತಿಗಳ ಸಮ್ಮಿಶ್ರಣದಿಂದ ಸ್ವಾತಂತ್ರ ದೊರಿಕಿದೆ ಎಂಬುದಂತು ಸತ್ಯವಾದುದು. ಅದಕ್ಕೆ ಹೇಳುವುದು ಸ್ವತಂತ್ರಗಮಗೆಗೆ ಸಾವಿರ ತೊರೆಗಳು. ಕೇವಲ ಒಂದೆ ಮೂಲದಿಂದ ಸ್ವಾತಂತ್ರ ಬರದೆ ಸಕಲರಿಂದ ದೊರಕಿದ ಸಿಹಿ ಸಜ್ಜಿಗೆಯಾಗಿದೆ. ಇನ್ನು ಮುಂದಾದರು ಮಹಾತ್ಮರ ನಡುವೆ ಹುತಾತ್ಮರಾದ ಕ್ರಾಂತಿಕಾರಿಗಳಿಗು ನ್ಯಾಯ ದೊರೆತರೆ ಭಾರತ ನಾತೆಗೆ ತನ್ನೆರಡು ಮಕ್ಕಳಿಗೆ ಸಮಾನತೆ ಸಿಕ್ಕಿತು ಎಂಬ ಸಂತಸಕ್ಕೆ ಭಾಜನಳಾಗಬಹುದು.

Tuesday, April 5, 2011

ಹಗರಣ

ತಗಡಿನ ವಸ್ತುವಿಗೆ ಚಿನ್ನದ ಲೇಪನ ಇದುವೇ ಭಾರತದ ರಾಜಕಾರಣ ಹೊಳೆಯುವುದು ಇದರ ಹೊರ ಮೈಬಣ್ಣ

ಒಳಗಡೆ ತುಂಬಿದೆ ಬರೀ ಹಗರಣ
ಮೇವು ಹಗರಣ,ಶೇರು ಹಗರಣ
ತೆಹಲ್ಕದಂತ ಶವಪೆಟ್ಟಿಗೆ ಹಗರಣ

ಹಗರಣಗಳಿಂದ ಗೊತ್ತಾಗುವುದು

ರಾಜಕಾರಣದ ಒಳಗಿನ ಹೂರಣ


ಚುನಾವಣೆಯು ಬಂದಿತೆಂದರೆ

ಎಲ್ಲರು ಕರ್ಣನ ವಂಶಸ್ತರೆ

ಬೇಡಿದವರಿಗೆ ಬೇಡಿದ ಧಾನ

ನಗನಾಣ್ಯಗಳದೇ ಬಹುಮಾನ

ರಂಬೆ ಉರ್ವಶಿಯರ ನೃತ್ಯದ ಜೊತೆಗೆ

ಮಾಡು ಸುರಾಪಾನದ ಉಡುಗೊರೆ ಕೊಡುಗೆ

ಉಡುಗೊರೆಯನ್ನು ಪಡೆದ ಜನತೆಯು

ಮಾರಿಕೊಲ್ಲುವರು ತಮ್ಮ ಮತವನ್ನು


ರಾಜಕಾರಣಿಗಳ ಎಂಜಲ ಕಾಸಿಗೆ

ಕೈವೊದ್ದಿ ದಾಸರಾಗುವರು ಕೊನೆಗೆ

ಹಗರಣಗಳಿಗೆ ಮೆತ್ತಿಲಾಗುವರು

ಜನರ ತುಳಿದು ಇವರು ಮೇಲಕೆ ಬರುವರು

ಮತ್ತೆ ಹಗರನಗಳದ್ದೆ ದರಬಾರು

ಮತ್ತೆ ರಾಜಕಾರನಿಗಳದ್ದೆ ಕಾರಬಾರು

ದುದ್ದಿನಾಷೆಗೆ ಸ್ವಾಭಿಮಾನವ ಮಾರಿ

ಬೆಳೆಸುತಲಿಹರು ಸಮಾಜದ ವೈರಿ

ಎಚ್ಚರವಾದರೆ ಜನತೆ ಒಂದು ಸಾರಿ

ತೊಡೆದು ಹಾಕ ಬಹುದು ನಮ್ಮನು ಕಾಡುವ ಮಾರಿ

Friday, April 1, 2011

ನಾಡು ಮರೆತ ನಾಯಕರು -3





ಬ್ರಿಟಿಷರಿಂದ ಸ್ವಾತಂತ್ರ್ಯದ ಭಿಕ್ಷೆ ಬೇಡುತ್ತಿದ್ದ ಶಾಂತಿಪ್ರಿಯರಿಗೆ ಯಾವುದೇ ಒಂದು ಸಣ್ಣದಾದ ಹಿಂಸೆಯನ್ನು ಬ್ರಿಟಿಷರು ನೀಡುತ್ತಿರಲಿಲ್ಲ. ಒಂದು ಕಿರು ಬೆರಳಿನಿಂದಲೂ ಹಿಡಿಯುತ್ತಿರಲಿಲ್ಲ. ಆದರೆ ನನ್ನ ದೇಶದ ಸ್ವಾತಂತ್ರ್ಯ ಪ್ರಾಣ ತೆಗೆದಾದರೂ ಇಲ್ಲೇ, ಪ್ರಾಣ ಕೊಟ್ಟಾದರೂ ನಾನು ಪಡೆದೆ ತೀರುತ್ತೆನೆಂಬ ಕೆಚ್ಚಿಟ್ಟುಕೊಂಡು ಸಶಸ್ತ ಹೋರಾಟಕ್ಕೆ ಅಣಿಯಾಗಿ ಬ್ರಿಟಿಷರ ಗುಂಪಿಗೆ ಗುಂಡಿಯನ್ನೊಡ್ಡಿ ಕೊರಳ ಉರುಳನ್ನೇ, ಕೊರಳ ಮಾಲೆಯಾಗಿಸಿಕೊಂಡ ಕ್ರಾಂತಿಕಾರಿಗಳು ಪಡೆದುಕೊಂಡಿದ್ದು ವೀರ ಮರಣವನ್ನೇ. ಅಂಥವರು ಮಾಡಿದ ಬಲಿದಾನದ ಫಲವೇ ದೇಶದ ಸ್ವಾತಂತ್ರ್ಯ.
ಸಾವು ಎದುರಿಗೆ ನಿಂತಾಗಲೂ ಅದನ್ನು ಸಂತೋಷದಿಂದ ಸ್ವೀಕರಿಸಿ ನಗುನಗುತ್ತಲೇ ಅವಕಾಶವಿದ್ದರೆ ಮತ್ತೊಮ್ಮೆ ಹುಟ್ಟಿ ಬಂದು ಭಾರತ ಮಾತೆಯ ಬಂಧನ ಮುಕ್ತಿಗಾಗಿ ಹೋರಾಡುತ್ತೇನೆ. ನನ್ನ ದೇಶವನ್ನು ಕಟ್ಟುತ್ತೇನೆ ಎಂದು ಭಾರತ ಮಾತೆಯ ಋಣ ತೀರಿಸಿ ಮರೆಯಾದ ಕ್ರಾಂತಿಯ ಕಿಡಿಗಳು ಇಂದಿಗೂ ಭಾರತೀಯರಿಗೆ ಆದರ್ಶವಾಗಬೇಕಿತ್ತು. ಆದರೆ ಕೆಲವು ಬಾಲಬಡುಕ ಸಮುದಾಯಗಳ ಪರಿಣಾಮವಾಗಿ ಇಂದು ಇತಿಹಾಸದಲ್ಲಿ ಮರೆಯಾಗಿದ್ದಾರೆ. ಮರೆಯಾದ ಮತ್ತಷ್ಟು ಮಹಾಚೇತನಗಳ ಕುರಿತ ವಿವರ ಕೆಳಗಿನಂತಿದೆ:
* ಅವಕಾಶ ಬಂದರೆ ಮತ್ತೆ ಸಿಡಿಯುತ್ತೇನೆಂದ ಕನೈಲಾಲ್ ದತ್ತ
ಬ್ರಿಟಿಷರ ಶೋಷಣೆಯಿಂದ ರೋಸಿ ಹೋಗಿದ್ದ ಭಾರತೀಯರಲ್ಲಿ ಹೋರಾಟದ ಕೆಚ್ಚು ಭುಗಿಲೆದ್ದು ಬಿಟ್ಟಿತ್ತು. ಸಶಸ್ತ್ರ ಹೋರಾಟಕ್ಕೂ ಸಹ ಸನ್ನದ್ಧರಾಗುವ ಮಟ್ಟಕ್ಕೆ ಜನ ಬಂದು ತಲುಪಿತು. ಪರಿಣಾಮವಾಗಿಯೇ ಹಲವಾರು ಕ್ರಾಂತಿಕಾರಿ ಸಂಘಟನೆಳು ಉದಯಿಸಿದವರು. ಸಂಘಟನೆಗಳ ಮೂಲಕ ಸ್ವತಂತ್ರ್ ಗಂಗೆಯ ಒಡಲಿಗೆ ಧುಮಿಕಿ ಈಜಿ ಬಂದವರಿಗಿಂತ, ಅದರಲ್ಲಿ ದೇಶದ್ರೋಹಿ ಮೊಸಳೆಗಳ ಬಾಯಿಗೆ ಆಹಾರವಾದವರೇ ಹೆಚ್ಚು. ಇಂಥ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ ಇತಿಹಾಸದ ಪುಟದಲ್ಲಿ ಮಿಂಚಿ ಮರೆಯಾದ ಮಹಾನ್ ಕ್ರಾಂತಿಕಾರಿ ಚೇತನವೇ ಕನೈಲಾಲ್ ದತ್ತ.
1887 ಸೆಪ್ಟೆಂಬರ್ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಜನಿಸಿದ ಕನೈಲಾಲ್ ಚಿಕ್ಕ ವಯಸ್ಸಿನಲ್ಲಿಯೇ ಸ್ವತಂತ್ರ್ಯ ಹೋರಾಟದ ಹುಚ್ಚು ಹಿಡಿಸಿಕೊಂಡವರು.ಮನೆಯಲ್ಲಿನ ಬಡತನವನ್ನು ಲೆಕ್ಕಿಸದೆ ಅವರು ದಾಸ್ಯ ಸಂಕೋಲೆ ಮುರಿಯಲು ಮುಂದಾದರು. ಓದಿಗಾಗಿ ತಾಯಿಯಿಂದ ಅನುಮತಿ ಪಡೆದು ಕಲ್ಕತ್ತಾಗೆ ಬಂದ ಕನೈಲಾಲ್ ಸಂಪೂರ್ಣವಾಗಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿದರು. ಬ್ರಿಟಿಷ್ ಸಾಮ್ರಾಜ್ಯವನ್ನು ನಿನರ್ಾಮ ಮಾಡಬೇಕು ಎನ್ನುವ ದೇಶಪ್ರೇಮ ಅವರಲ್ಲಿ ಸ್ಪೋಟಗೊಳ್ಳುತ್ತಿತ್ತು.
*ಅಚಾತುರ್ಯ ನಡೆಯಿತ
ಆಲಿಪಪುರ ಎಂಬಲ್ಲಿ ಕ್ರಾಂತಿಕಾರಕ ಚಟುವಟಿಕೆಯಲ್ಲಿ ತೊಡಗಿದ್ದ ದಿನಗಳವು. ಇಂಥ ಸಂದರ್ಭದಲ್ಲಿ 1908 ಏಪ್ರಿಲ್ 30 ರಂದು ಒಂದು ಆಚಾತುರ್ಯ ಸಂಭವಿಸಿತು ಕ್ರಾಂತಿಕಾರ್ಯಕ್ಕಾಗಿ ಮದ್ದುಗುಂಡುಗಳನ್ನು ತಯಾರಿಸುವ ಸಮಯದಲ್ಲಿ ಯಾವುದೋ ಕಾರಣಕ್ಕೆ ರಾಸಾಯನಿಕಗಳು ಸ್ಫೋಟಗೊಂಡ ಇಬ್ಬರು ಕ್ರಾಂತಿಕಾರಿಗಳು ಅಸುನೀಗಿದರು. ಇದರಿಂದ ಎಚ್ಚೆತ್ತುಕೊಂಡ ಬ್ರಿಟಿಷ್ ಸಕರ್ಾರ ಕ್ರಾಂತಿಕಾರಿಗಳನ್ನು
ಬಂಧಿಸಿ ಸೆರೆಮನೆಗೆ ಕಳುಹಿಸಿದರು. ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳ ಸಂಗಡಿಗರಲ್ಲಿ ಒಬ್ಬನಾಗಿದ್ದ ನರೆನ್ ಗೋಸಾಯ್ ಎಂಬುವನು ಕ್ರಾಂತಿಕಾರಿಗಳ ವಿರುದ್ಧ ಸಾಕ್ಷಿ ಹೇಳಲು ಸನ್ನದ್ಧನಾದನು.ಇದು ಇಡೀ ಕ್ರಾಂತಿಕಾರಿ ಸಂಘಟನೆಗಳನ್ನು ಬುಡಮೇಲು ಮಾಡುವ ಆತಂಕ ಸೃಷ್ಟಿಸಿತು. ಇಡೀ ದೇಶವನ್ನೇ ನಡುಗಿಸಿತು.
ಇತ್ತ ಬ್ರಿಟಿಷರ ಪರವಾಗಿ ಸಾಕ್ಷ್ಯ ನುಡಿಯಲು ಒಪ್ಪಿಕೊಂಡ ನರೆನ್ ೋಸಾಯ್ನನ್ನು ಅನಾರೋಗ್ಯದ ನೆಪವೋಡ್ಡಿ ಆಸ್ಪತ್ರೆಗೆ ಸೇರಿಕೊಂಡು ಬ್ರಿತಿಷರ ಎಂಜಲು ಆತಿತ್ಯವನ್ನು ಪಡೆಯತೊಡಗಿದನು. ದೇಶದ್ರೋಹಿಯನ್ನು ಹೇಗಾದರು ಕೊಂದು ಕ್ರಾಂತಿಕಾರಿಗಳ ಸಂಘಟನೆಯನ್ನು ಉಳಿಸಲೇಬೇಕು ಎನ್ನುವ ನಿಧರ್ಾರಕ್ಕೆ ಕ್ರಾಂತಿಕಾರಿಗಳು ಬದ್ದರಾದರು. ಇನನ್ನು ಕೊಲ್ಲುವ ಕಾರ್ಯವನ್ನು ಕನೈಲಾಲ್ ಮತ್ತು ಸತ್ಯೇನ್ಗೆ ವಹಿಸಿಕೊಡಲಾಯಿತು. ಕ್ರಾಂತಿಕಾರಿಗಳ ಆದೇಶದನ್ವಯ ಇವರಿರ್ವರು ದೇಶದ್ರೋಹಿಯನ್ನು ಕೊಲ್ಲುವ ಉದ್ದೇಶದಿಂದ ಆನಾರೋಗ್ಯದ ನೆಪವೊಡ್ಡಿ ಆಸ್ಪತ್ರೆ ಸೇರಿಕೊಂಡರು.
*ಕೊನೆಗೂ ಕಾರ್ಯ ಪೂರೈಸಿದ ಶೂರರು
ಆಸ್ಪತ್ರಯಲ್ಲಿ ನಾಟಕವಾಡಿದ ಇವರು ನಾವುಕೋಡ ಕ್ರಾಂತಿಕಾರಿಗಳ ವಿರುದ್ಧ ಸಾಕ್ಷ್ಯನುಡಿಯುತ್ತೇವೆ ನಮ್ಮನ್ನು ನರೆನ್ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು. ನಂಬಿದ ಬ್ರಿಟಿಷರು 1908 ಆಗಷ್ಟ 31 ರಂದು ಅವಕಾಶ ಕಲ್ಪಿಸಿದರು. ಅವನಜೊತೆ ಮಾತನಾಡುತ್ತಲೆ ಸಿಕ್ಕ ಅವಾಕಾಶವನ್ನು ಸದುಪಯೋಗ ಪಡಿಸಿಕೊಂಡ ಕನೈಲಾಲ್ ದ್ರೋಹಿಯನ್ನು ಹೊಡೆದುರುಳಿಸಿದನು. ನಂತರ ತಪ್ಪಿಸಿಕೊಳ್ಳದೆ ಬಂಧನಕ್ಕೊಳಗಾದರು.ಆದರೆ ಚಿರಯೌವನದ ಚೇತನ ಚಿಲುಮೆಯಾಗಿದ್ದ ಕನೈಲಾಲ್ ನಗುತ್ತಲೇ ನೇಣುಗಂಬವೇರಿದನು. 1908ನವೆಂಬರ್10ನೇ ತಾರಿಖಿನಂದು ಇಡೀ ದೇಶವೇ ಕನೈಲಾಲ್ಗಾಗಿ ಕಣ್ಣಿರಿಟ್ಟಿತು.
*ಲೇಖನಿಯಿಂದ ಬೆಂಕಿ ಉಗುಳಿದ ರಾಮ್ ಪ್ರಸಾದ್ ಬಿಸ್ಮಿಲ್
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ,ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ ಎಂದರೆ ಶಿರವನಪರ್ಿಸುವ ಬಯಕೆ ಎನ್ನ ಮನದೊಳಿಹುದಿಂದು,ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು.
ಮೇಲಿನ ಸಾಲುಗಳು ಬರೀ ಸಾಲುಗಳಲ್ಲ ಕ್ರಾಂತಿಯ ಮಂತ್ರಗಳು. ಕವಿತೆಯೂ ಭಗತ್ಸಿಂಗ್ರಿಗೆ ಬಹಳ ಇಷ್ಟವಾದ ನುಡಿಗಳಾಗಿದ್ದವು. ಜಯಲಿನಲ್ಲಿ ಕುಳಿತಾಗಲು ಅವರು ನುಡಿದ ಏಕೈಕ ಗೀತೆಯಿದು.ಇಂಥ ಬೆಂಕಿಯಂಥ ಸಾಲುಗಳನ್ನು ರಚಿಸಿ ್ರಿಟಿಷರ ಎದೆ ನಡುಗಿಸಿದ ಅಗ್ನಿಶಿಶುವೇ ರಾಮ್ಪ್ರಸಾದ್ ಬಿಸ್ಮಿಲ್.
1897 ರಲ್ಲಿ ಉತ್ತರ ಪ್ರದೇಶದ ಷಹಜಾನಪುರ ದಲ್ಲಿ ಜನಿಸಿದ ಬಿಸ್ಮಿಲ್ರು ಶಂತಿಯಿಂದ ಮಾಡುತ್ತಿರುವ ಸ್ವಾತಂತ್ರ ಹೋರಾಟವನ್ನು ಬ್ರಿಟಿಷರು ಹೇಗೆ ಕಾಲಿನಿಂದ ಹೊಸಕಿ ಹಾಕುತ್ತಿದ್ದರು ಎಂಬುದನ್ನು ಮನಗಂಡ ಅವರು ಕ್ರಾಂತಿಕಾರಿಯಾಗಿ ಸಶಸ್ತ್ರ ಹೋರಾಟದ ಕಡೆಗೆ ಒಲವು ತೋರಿದರು.ಆರ್ಯ ಸಮಾಜದ ಚಿಂತನೆಗೊಳತ್ತ ಒಲವಿಟ್ಟುಕೊಂಡಿದ್ದರೂ ಸಹ ನನ್ನಧರ್ಮ ಎಂದು ಅಂಟಿಕೊಂಡವರಲ್ಲ. ಎಲ್ಲರಲ್ಲಿಯೂ ಸಮಾನತೆ ತರಬೇಕು ಎಂಬುದೆ ಅವರ ಉದ್ದೇಶವಾಗಿತ್ತು.
*ಭಾವೈಕ್ಯತೆ ಮೆರೆದ ಬಿಸ್ಮಿಲ್
ರಾಮ್ ಪ್ರಸಾದರು ಹಿಂದೂ ಆಗಿದ್ದರು ಕೂಡ ಬಿಸ್ಮಿಲ್ ಎಂಬುದು ಅವರಿಗೆ ಸಿಕ್ಕ ಬಿರುದು. ಭಾವೈಕ್ಯತೆಯ ಪ್ರತೀಕವಾಗಿದ್ದ ಬಿಸ್ಮಿಲ್ರು ಅಶ್ಫಾಕುಲ್ಲಾರನ್ನು ದೇಶಸೇವೆಗೆ ಕರೆತಂದ ಮಹಾನ್ ನೇತಾರರಾಗಿದ್ದಾರೆ. ಬ್ರಿಟಿಷರು ಅಶ್ಫಾಕುಲ್ಲಾನನ್ನು ರಾಮ್ಪ್ರಸಾದರ ಬಲಗೈ ಎಂದು ಕರೆಯುತ್ತಿರುವಾಗ ಕ್ಷುಲ್ಲಕ ಕಾರಣಕ್ಕಾಗಿ ಧರ್ಮ ಧರ್ಮ ಎಂದು ಹೊಡೆದಾಡುವುದಕ್ಕಿಂತ ಮುಸ್ಲಿಂಮರೆಲ್ಲರ ಕೈ ಒಂದಾದರೆ ಇಡೀ ಬಿಟಿಷ್ ಸಕರ್ಾರದ ವಿನಾಶ ಶತಸಿದ್ಧ ಎಮದು ಹೇಳುತ್ತಿದ್ದರು.
ಹೀಗೆ ವಿವರ್ಿಧ ಜಾತಿ ಧರ್ಮ ಎನ್ನದೆ ಎಲ್ಲರನ್ನು ಒಂದು ಗೂಡಿಸಿ ಸ್ವತಂತ್ರ ಭಾರತವನ್ನು ನಿಮರ್ಾಣ ಮಾಡಲು ಫಣತೊಟ್ಟ ಮಹಾನ್ ನೇತಾರನಾಗಿದ್ದರು. ಲೇಖನಿಯನ್ನು ಹಿಡಿಯುವ ಕೈಯಲ್ಲಿಯೇ ಬಂದುಕನ್ನು ಹಿಡಿದು ಸಶಸ್ತ್ರ ಹೋರಾಟಕ್ಕೆ ಅಣಿಯಾದರು. ತಾವೇ ಬರೆದ ಕವನದಮತೆ ಒಂದು ಬಾರಿ ಬ್ರಿಟಿಷರ ತೋಳ್ಬಲವನ್ನು ಪರೀಕ್ಷಿಸಿಒಬಿಟ್ಟರು.
ಕಾಕೊರಿ ರೈಲು ದರೋಡೆ ಎಂಬ ಐತಿಹಾಸಿಕ ಘಟನೆಯ ರೂವಾರಿಯೇ ರಾಮ್ ಪ್ರಸಾದ ಬಿಸ್ಮಿಲ್ ರವರು. ಹಲವಾರು ರೀತಿಯ ವೇಷ ತೊಟ್ಟುಕೊಂಡುಹಲವಾರು ಹೆಸರು ಹೇಳಿಕೊಂಡು ಬಿಜ್ಪುರ್ ಡಕಾಯತಿ, ದ್ವಾರಕಪುರ್ ದರೋಡೆ ಮಾಡಿ ಬ್ರಿಟಿಷರಿಗೆ ತಲೆನೋವಾಗಿದ್ದರು.
*ನಗುನಗುತ್ತ ಸ್ವರ್ಗಕ್ಕೆ ನೆಗೆ ಸಿಂಹ
1925 ಆಗಷ್ಟ 9 ಸಂಜೆ ನಡೆದ ಕಾಕೊರಿ ರೈಲು ಧರೋಡೆ ಪ್ರಕರಣದಲ್ಲಿ ಬಂಧಿತರಾಗಿದ್ದ 25 ಮಂದಿ ಕ್ರಾಂತಿಕಾರಿಗಳಲ್ಲಿ ರಾಜೇಂದ್ರ ಲಾಹೀರಿ,ರೋಷನ್ಸಿಂಗ್, ರಾಮ್ಪ್ರಸಾದ್ ಬಿಸ್ಮಿಲ್, ಮತ್ತು ಅಶ್ಫಾಕುಲ್ಲಾರವರಿಗೆ ಗಲ್ಲುಶಿಕ್ಷೆಯಾಯಿತು.ಗಲ್ಲಿಗೇರುವ ದಿನ ಎಂದಿನಂತೆ ವ್ಯಾಯಾಮ ಅಂಗಸಾಧನೆ ಮಾಡಿ ಹಬ್ಬಕ್ಕೆ ಹೊರಟವರಂತೆತ ತಯಾರಾಗಿ ತಿರುಗಾಡುತ್ತಿದ್ದ ಕ್ರಾಂತಿಕಾರಿಗಳನ್ನು ನೋಡಿದಮ್ಯಾಜಿಸ್ಟ್ರೇಟರ್ ಧಿಗ್ಭ್ರಾಂತರಾಗಿ ಬಿಟ್ಟಿದ್ದರು.ನೊಂದ ಸಂಬಧಿಕರಿಗೆ ಸಮಾಧಾನ ಹೇಳಿ ಇದು ನೇಣು ಕುಣಿಕೆಯಲ್ಲಾ ನನ್ನ ಹೊರಾಟಕ್ಕೆ ಬ್ರಿಟಿಷ ಅಧಿಕಾರಿಗಳು ಮಾಡುತ್ತಿರುವ ಸನ್ಮಾನದ ಪ್ರತೀಕವಾದ ಹೂಮಾಲೆ ಎಂದು ಕುಣಿಕೆಯನ್ನು ುಂಬಿಸಿ ಕೊನೆಯಬಾರಿಗೆ ಬ್ರಿಟಿಷ ಸಾಮ್ರಾಜ್ಯದ ಗುಂಡಿಗೆ ನಡುಗುವಂತೆ ಒಂದೇ ಮಾತರಂ ಎಂದು ಕೂಗಿ ಕೊನೆ ಉಸಿರು ಎಳೆಯುತ್ತಿದ್ದರು.
1927 ಡಿಸೆಂಬರ್ 19 ರಂದು ರಾಮ್ಪ್ರಸಾದರನ್ನು
ಪಯಜಾಬಾದಿನಲ್ಲಿ ಗಲ್ಲುಗಂಬಕ್ಕೇರಿಸಲಾಯಿತು. ಭಾರತಾಂಬೆಯ ಬಿಡುಗಡೆಗಾಗಿ ಹೋರಾಡಿದ ಮತ್ತೊಂದು ಅಗ್ನಿಶಿಶು ಸ್ವತಂತ್ರ್ಯದ ಸಿಹಿ ತಿನ್ನುವ ಮೊದಲೆ ವೀರಮರಣವನ್ನಪ್ಪಿಕೊಂಡಿದ್ದು ನಮ್ಮ ದೌಭರ್ಾಗ್ಯವೇ ಸರಿ. ಆದರೆ ಇಂಥ ಭಾವೈಕ್ಯತೆಯ ಮೂತರ್ಿ ಬರೆದ ಕವಿತೆ ಚಲನಚಿತ್ರಗಿತೆಯಾಗಿ ಬಳಸಿಕೊಂಡಿದ್ದಾರೆ.ಆದರೆ ಅದನ್ನು ಬರೆದ ಮಹಾನ್ ವ್ಯಕ್ತಿಯ ಹೆಸರು ಮಾತ್ರಾ ಯಾರಿಗು ಗೊತ್ತಿಲ್ಲ ಇದು ಎಂತ ವಿಪಯರ್ಾಸವಲ್ಲವೆ.
*ಹೋರಾಟ ಮಾಡಿ ಹುಲಿ ಎನಿಸಿಕೊಂಡ ಜತಿಂದ್ರನಾಥ
ಒಂದು ಾರಿ ರಯಲಿನಲ್ಲಿ ಪ್ರಯಾಣಿಸುತ್ತಿರುವಾಗ ಕೆಲವು ಜನ ಆಂಗ್ಲ ಸೈನಿಕರು ಭಾರತೀಯ ಯುವತಿಯೋರ್ವಳೊಂದಿಗೆ ಅಸಭ್ಯವಾಗಿ ವತಿಸುತ್ತಿದ್ದರು.ಹುಡುಗಿಯ ತಮದೆ ಕೈ ಮುಗಿದು ಕೇಳಿಕೊಂಡರು ಅವರ ಉಪಟಳ ನಿಲ್ಲಲಿಲ್ಲ. ಘಟನೆಯನ್ನು ನೋಡುತ್ತಿದ್ದ ಹುಡುಗನೊಬ್ಬ ಎದ್ದು ಬಮದು ತಮ್ಮ ಮತ್ತು ಅವರ ಮಧ್ಯದಲ್ಲಿ ಇದ್ದ ಸರಳನ್ನು ಕಿತ್ತಿ ಬ್ರಿಟಿಷ್ ಸೈನಿಕರಿಗೆ ಮನಸೋ ಇಚ್ಚೆ ಥಳಿಸಿದನು. ಬ್ರಿಟಿಷ್ ಸೈನಿಕರಿಗೆ ಭಾರತಿಯನು ಹೊಡೆದನು ಎಂದು ಕೋಟರ್್ನಲ್ಲಿ ದಾವೆ ಹೂಡಲಾಯಿತು.ಆದರೆ ಒಬ್ಬ ಭಾರತಿಯ ಆರುಜನ ಬ್ರಿಟಿಷ್ ಸೈನಿಕರಿಗೆ ಥಳಿಸಿದನೆಂದು ಗೊತ್ತದರೆ ಬ್ರಿಟತಿಷ್ ಸಕರ್ಾರದ ಮಯರ್ಾದೆ ಹರಾಜಾಗುತ್ತದೆ ಎಣದು ಕೇಸನ್ನು ಕಯಬಿಡಲಾಯಿತು.
ಅದೇ ರೀತಿಯಲ್ಲಿ ಮತ್ತೋದು ಬಾರಿ ಸಾರೋಟನಲ್ಲಿದ್ದ ಭಾರತಿಯ ಮಹಿಳೆಯರ ಮೇಲೆ ಬ್ರಿಟಿಷ್ ಯುವಕರು ಅನುಚಿತವಾಗಿ ವತರ್ಿಸುತ್ತದ್ದರು. ಕೇಳಿದರೆ ಮೋಜಿಗಾಗಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಂತೆ ಒಬ್ಬ ಯುವಕ ಎದ್ದು ಬಂದು ನಾಲ್ಕು ಜನರನ್ನು ಕೇವಲ ಒಮದೆ ಕಯಯಿಂದಲೆ ಹೊಡೆದೋಡಿಸಿದನು. ಅಲ್ಲಿದ್ದ ಒಬ್ಬ ಹಿರಿಯ ನಲ್ಕು ಜನರನ್ನು ನೀನೊಬ್ಬ ಅದು ಒಂದೆ ಕೈಯಿಂದ ಹೊಡೆದೋಡಿಸಿದೆಯಲ್ಲ ಅದು ಹೇಗೆ ಸಾಧ್ಯ ಎಂದು ಕೇಳಿದನು.ಆಗ ಯುವಕ ನಾವೆಲ್ಲರು ಕಯ ಜೋಡಿಸಿದರೆ ಇಡಿ ಬ್ರಿಟಿಷ್ ಸಾಮ್ರಾಜ್ಯವೆ ನಿನರ್ಾಮವಾಗಿ ಹೊಗುತ್ತದೆ ಎಂದು ಹೇಳಿದನು. ಧಿರ ಯುಯವಕನೆ ಬಂಗಾಳದ ಹುಲಿ ಜತಿಂದ್ರನಾಥ ಮುಖಜರ್ಿ.
1879ರಲ್ಲಿ ಉಮೇಶಚಂದ್ರ ಮುಖಜರ್ಿಯವರ ಮಗನಾಗಿ ಜನಿಸಿದ ಜತಿಂದ್ರನಾಥ ಚಿಕ್ಕ ವಯಸ್ಸಿನಲ್ಲೆ ತಂದೆ ಕಳೆದು ಕೊಂಡು ತಾಯಿಯ ಆರೈಕೆಯಲ್ಲಿ ಬೆಳೆದನು. ತಾಯಿಯಿಂದ ಜೀವನದ ಪಾಠ ಕಲಿತನು. ಹದಿ ಹರೆಯದ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡನು. ಹೆತ್ತ ತಾಯಿಯನ್ನು ಕಳೆದುಕೊಂಡಮೇಲೆ ದೃತಿಗೆಡದ ಜತಿಂದ್ರನಾಥ ಹೊತ್ತ ತಾಯಿಯ ಬಂಧನ ಮುಕ್ತಿಗಾಗಿ ತಮ್ಮ ಪ್ರಾಣವನ್ನೆ ಫಣವಾಗಿಟ್ಟರು. ಮೆಟ್ರಿಕ್ಯಲೇಷನ್ ಮುಗಿಸಿ ತಮ್ಮ ಸಂಪೂರ್ಣ ಶಕ್ತಿ ಮತ್ತು ಸಮಯವನ್ನು ಕ್ರಾಂತಿಕಾರಕ ಚಟುವಟಿಕೆಗಳಿಗೆ ಮೀಸಲಿರಿಸುವ ಸಲುವಾಗಿ ತಮ್ಮ ವಿಧ್ಯಾಭ್ಯಾಸವನ್ನು ಕಯಬಿಟ್ಟು ಕ್ರಾಂತಿಕಾರಕ ಚಟುವಟಿಕೆಗಳಿಗೆ ಕಾಲಿಟ್ಟರು. ತದ ನಂತರ ಯುಗಾಂತರ ಎಂಬ ಭೂಗತ ಕ್ರಾಂತಿಕಾರಿ ಗುಂಪಿನೊಂದಿಗೆ ಸೇರಿಕೊಂಡು ವಿಲಿಞಂ ಪೋಟರ್್ ವಶಪಡಿಸಿಕೊಳ್ಳಲು ಞತ್ನಿಸಿ ವಿಫಲವಾದರು. ಆದರೆ 1910 ರಲ್ಲಿ ಅವರನ್ನು ಅಸ್ತಗಿರಿ ಮಾಡಲಾಞಿತು. ಅಲ್ಲಿಂದ ತಪ್ಪಿಸಿಕೊಂಡ ಜತಿಂದ್ರನಾಥರು ್ರಿಟಿಷರನ್ನು ಸಂಪೂರ್ಣವಾಗಿ ನಿಣರ್ಾಮ ಮಾಡುವ ಉದ್ದೇಶದಿಂದ ಸಶಸ್ತ್ರ ಹೋರಾಟದೆಡೆಗೆ ಧಾಪುಗಾಲು ಹಾಕಿದರು.
ಶಸ್ತ್ರಸಜ್ಜಿತ ಹೋರಾಟದ ಸಫಲತೆ ಮಾಡುವುದಕ್ಕಾಗಿ ಜಪಾನಿನಿಂದ ಶಸ್ತ್ರಾಸ್ತ್ರಗಳನದನು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡರು. ಅವರು ಮತ್ತು ಸಂಗಡಿಗರು ಸೇರಿಕೊಂಡು ಸುಮಾರು 50 ಮೌಸರ್ ಪಿಸ್ತೊಲ್ಗಳನ್ನು ಮತ್ತು 46 ಸಾವಿರ ಗುಂಡಿನ ಸರಗಳನ್ನು ಸಂಗ್ರಹಿಸಿದರು. ಇವೆಲ್ಲ ಕಾರ್ಞಗಳಿಂದಾಗಿ ಬ್ರಿಟಿಷರ ಪಾಲಿಗೆ ಹುಲಿಆಗಿ ಕಾಡುತ್ತಿದ್ದರು. ಹೀಗಾಗಿ ಜನ ಇವರನ್ನು ಬಂಗಾಳಿ ಭಾಷೆಞಲ್ಲಿ ಭಾಗ ಎಂದು ಕರೆಞುತ್ತಿದ್ದರು. ಬಾಘ ಎಂದರೆ ಬಂಗಾಳಿ ಭಾಷೆಯಲ್ಲಿ ಹುಲಿ ಎಂದೇ ಅರ್ಥ.
ಹೋರಾಡಿ ಮಡಿದ ಹುಲಿ
ಜಿತೇಂದ್ರನಾಥ್ `ಮೋವರಿಕ ಎಂಬ ಹಡಗಿನ ಮೂಲಕವಾಗಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುವಂತಹ ಹವಣಿಕೆಯಲ್ಲಿದ್ದನು. ಇದು ರಾಜದ್ರೋಹಿಯೊಬ್ಬನಿಂದ ಬಹಿರಂಗವಾಗಿ ಬ್ರಿಟಿಷರಿಗೆ ತಲುಪಿತು. ಶಸ್ತ್ರಾಸ್ತ್ರಗಳನ್ನು ಓರಿಸ್ಸಾದ ಬಾಲಸೋರಿನಲ್ಲಿ ಇಳಿಸಬೇಕಿತ್ತು. ಆದರೆ ಅಲ್ಲಿ ಬ್ರಿಟಿಷರಿಗೂ ಮತ್ತು ಕ್ರಾಂತಿಕಾರಿಗಳ ಮದ್ಯದಲ್ಲಿ ತೀವ್ರ ಕಾಳಗ ನಡೆಯಿತು. ಇದರಿಂದ ಗುಂಡಿನ ಹೊಡೆತಗಳಿಂದ ತೀವ್ರ ಗಾಯಗೊಂಡಿದ್ದ ಕಾರಣ 1914ನೆಯ ಸೆಪ್ಟೆಂಬರ್ 9 ರಂದು ಬಾಲಸೋರ ಆಸ್ಪತ್ರೆಯಲ್ಲಿ ಮರಣಹೊಂದಿದರು.
ಜತೀಂದ್ರನಾಥ ಮುಖಜರ್ಿ ತಮ್ಮ ಅಪ್ರತಿಮ ಹೋರಾಟದ ಫಲವಾಗಿ ಬಾಘಾ ಜತಿನ್ ಎಂದು ಗುರುತಿಸಿಕೊಂಡರಷ್ಟೇ ಅಲ್ಲದೆ ಭಗತ್ಸಿಂಗ್, ಚಂದ್ರಶೇಖರ ಆಜಾದ್ರಂತೆ ಜತೀಂದ್ರರು ಕೂಡ ಚರಿತ್ರೆಯಲ್ಲಿ ಪ್ರಸಿದ್ಧರಾದರು.
ಆದರೆ ಇಡೀ ಭಾರತ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿ ಮಡಿದ ಹುಲಿ ಭಾಷಾ ಜತಿನ್ ಹೆಸರು ಯಾರಿಗೂ ತಿಳಿದಿಲ್ಲದಿರುವುದು ನಾಚಿಕೆ ತರುತ್ತದೆ.
ಸಾವಿಗೆ ಹೆದರುವುದಿಲ್ಲವೆಂದ ಅಶ್ಫಾಕುಲ್ಲಾ ಖಾನ್
ಹಿಂದೂಸ್ತಾನದ ಸಹೋದರರೇ ನೀವು ಯಾವುದೇ ಧರ್ಮದವರಾಗಿರಿ ಯಾವುದೇ ಮತದವರಾಗಿರಿ ಆದರೆ ದೇಶ ಸೇವೆಗೆ ಮೊದಲಾಗಿರಿ. ವ್ಯರ್ಥವಾಗಿ ನಮ್ಮೊಳಗೆ ನಾವು ಜಗಳವಾಡಿಕೊಳ್ಳುತ್ತ ಬೇರೆಯವರಿಗೆ ಅನುಕೂಲ ಮಾಡಿಕೊಡುವುದು ಬೇಡ. ದೇಶದ ಸ್ವಾತಂತ್ರ್ಯಕ್ಕಾಗಿ ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ. ನೀವು ನಮ್ಮೊಂದಿಗೆ ಸಹಕರಿಸಿ. ದೇಶವನ್ನು ಬಂಧಮುಕ್ತಗೊಳಿಸಿ. ದೇಶದ ಏಳುಕೋಟಿ ಮುಸಲ್ಮಾನರಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಗಲ್ಲಿಗೇರುತ್ತಿರುವವರಲ್ಲಿ ನಾನೇ ಮೊದಲಿಗ ಎಂಬುದನ್ನು ನೆನಪಿಸಿಕೊಂಡರೆ ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಕುಣಿಕೆಗೆ ತಲೆ ಕೊಡುವ ಮೊದಲು ಸಂದೇಶವಿತ್ತ ಮಹಾನ್ವ್ಯಕ್ತಿಯೇ ಅಶ್ಫಾಕುಲ್ಲಾಖಾನ್.
1900ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ಷಹಜಹನ್ಪುರದಲ್ಲಿ ಅಗ್ನಿಶಿಶುವಿನ ಜನನವಾಯಿತು. ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ್ದರೂ ಕೂಡ ಭಾರತದ ಸ್ವಾತಂತ್ರ್ಯ ಹೋರಾಟ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ತರುವಾಯ ಅಪ್ರತಿಮವಾದ ದೇಶಪ್ರೇಮವನ್ನು ಮನದಲ್ಲಿ ತುಂಬಿಕೊಂಡು ಭಾರತ ಮಾತೆಯ ಬಂಧನ ಮುಕ್ತಿಗಾಗಿ ಮುನ್ನುಗ್ಗಿದ್ದರು. ಬ್ರಿಟಿಷ್ ಸೈನ್ಯದಲ್ಲಿ ಪ್ರತಿಷ್ಠಿತ ಹುದ್ದೆ ದೊರಕುತ್ತಿತ್ತಾದರೂ ಅದನ್ನು ಕಾಲಿಂದ ಒದ್ದು ಸ್ವತಂತ್ರ್ಯ ಮಾತೆಯ ಚರಣಕ್ಕೆರಗಿದರು.
ಮೊದಲಿಗೆ ಶಾಂತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಬಹುದು ಎಂದುಕೊಂಡು ಗಾಂಧೀಜಿ ಬಳಿಗೆ ಹೋದ ಅಶ್ಪಕರವರಿಗೆ ನಿರಾಸೆಯಾಯಿತು. ಅಹಿಂಸಾ ಸಿದ್ಧಾಂತದಿಂದಾಗಲಿ, ಅದರ ವಕ್ತಾರರಿಂದಾಗಲಿ ಅವನಿಗೆ ತೃಪ್ತಿ ಸಿಗಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ರಾಮ್ ಪ್ರಸಾದ್ ಬಿಸ್ಮಿಲರ ಕಾರ್ಯಗಳು ಜನರ ಮನೆ ಮಾತಾಗಿದ್ದವು. ಮತ್ತು ಕನೈಲಾಲ್, ಛಾಪೇಕರ ಸಹೋದರರ ವೀರ ಮರಣ ಇವರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಹೀಗಾಗಿ ಕ್ರಾಂತಿಕಾರಕ ನಿಲುವಿನೊಂದಿಗೆ ಚಟುವಟಿಕೆಯಲ್ಲಿ ತೊಡಗಿದರು. ರಾಮಪ್ರಸಾದ್ ಬಿಸ್ಮಿಲ್ ಬಳಿಗೆ ಹೋದರು. ಆದರೆ ಅಶ್ಪಾಕುಲ್ಲಾರ ಎಳೆ ವಯಸ್ಸು ಬಿಸ್ಮಿಲ್ಲರನ್ನು ತಡೆಯಿತು. ಅವರನ್ನು ಅಲಕ್ಷಿಸಿದರು. ಆದರೆ ಛಲಬಿಡದ ಅಶ್ಫಕ ಪದೆ ಪದೇ ರಾಮ್ಪ್ರಸಾದ್ ಬಳಿಗೆ ತೆರಳಿ ಅವರ ವಿಶ್ವಾಸಗಳಿಸಿಕೊಂಡರು. ಮುಂದೆ ಇಬ್ಬರೂ ಆತ್ಮೀಯ ಮಿತ್ರರಾದರು.
ಇವರ ಸ್ನೇಹ ಧರ್ಮಗಳೆಂಬ ಗೋಡೆಯನ್ನೇ ಒಡೆದು ಹಾಕಿತು. ಅಪ್ರತಿಮ ದೇಶಭಕ್ತರಾಗಿದ್ದ ಅಶ್ಫಾಕುಲ್ಲಾರ ಮನಸ್ಸಿನಲ್ಲಿ ಒಬ್ಬ ಕವಿಯಿದ್ದ. ಅವನು ನುಡಿಸಿದ ಮಂತ್ರ ಎಂದರೆ `ಧೀರರು ಸಾವಿಗೆ ಹೆದರುವುದನ್ನು ತಾನೆಲ್ಲೂ ನೋಡಿಲ್ಲ ಎಂದು ಅದೇ ಮಾತಿನ ರೀತಿಯೇ ನಡೆದುಕೊಂಡರೂ ಕೂಡ. ಒಂದು ಬಾರಿ ಖಾನ್ ಜ್ವರದಿಂದ ನರಳುತ್ತಿದ್ದಾಗ ಅವರ ಬಾಯಿಂದ ರಾಮ್ ರಾಮ್ ಎಂಬ ನುಡಿಗಳು ಕೇಳಿ ಬರುತ್ತಿದ್ದವು. ಇದರಿಂದ ಅವರ ತಂದೆ-ತಾಯಿಗಳು ಇವನಿಗೆ ಸೈತಾನನ ಕಾಟವಿದೆ ಮೌಲ್ವಿಯನ್ನು ಕರೆದುಕೊಂಡು ಬಾ ಎಂದರು. ಗೆಳೆಯನಿಗೆ ರಾಮ್ ಪದದ ಮರ್ಮ ಗೊತ್ತಿತ್ತು. ಆದ್ದರಿಂದ ನೇರವಾಗಿ ರಾಮ್ಪ್ರಸಾದ್ ಬಿಸ್ಲಿಲ್ಲಾರನ್ನು ಕರೆದುಕೊಂಡು ಬಂದಾಗ ಜ್ವರದ ನಡುವೆಯೂ ಅಶ್ಫಾಕ ಎದ್ದು ಕುಳಿತರು. ಇದು ಅವರ ನಿರ್ಮಲ ಸ್ನೇಹದ ಬಗ್ಗೆ ತಿಳಿಸಿಕೊಡುತ್ತದೆ.
ಕ್ರಾಂತಿಕಾರಿ ಸಂಘಟನೆಯನ್ನು ವಿಸ್ತರಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದಕ್ಕೆ ಅಪಾರ ಹಣದ ಅವಶ್ಯಕತೆ ಇತ್ತು. ಇದರಿಂದ ಹಣ ಸಂಗ್ರಹಿಸಲು ಸಕರ್ಾರಿ ಖಜಾನೆ ಲೂಟಿ ಮಾಡುವುದಾಗಿ ಸಭೆ ನಿರ್ಣಯಿಸಿತ್ತು. ವೈಯಕ್ತಿಕವಾಗಿ ಇದನ್ನು ತಿರಸ್ಕರಿಸಿದ ಅಶ್ಫಾಕ್ ಸಂಘಟನೆಯ ನಿರ್ಣಯಕ್ಕೆ ಬದ್ಧರಾದರು. ಇಡೀ ಕಾರ್ಯಾಚರಣೆ ಅಲಂ ನಗರದ ಸ್ಟೇಷನ್ನಲ್ಲಿ ಜರುಗಬೇಕಿತ್ತಾದರೆ ಅಲ್ಲಿ ಸಾಮಾನ್ಯ ಜನರಿಗೆ ತೊಂದರೆ ಆಗುವುದನ್ನು ಕುರಿತು ಮನಗಂಡ ಅಶ್ಫಾಕರು ಕಾಕೋರಿ ಮತ್ತು ಅಲಂ ನಗರದ ಮದ್ಯ ಇದನ್ನು ಮಾಡಬೇಕೆಂದರು. ಇವರ ಮಾತಿಗೆ ಸಮ್ಮತಿಸಿದ ಸಂಘಟನೆ ಹಾಗೆಯೇ ಮಾಡಿ ಸಕರ್ಾರಿ ಖಜಾನೆಯನ್ನು ಲೂಟಿ ಮಾಡಿತು. ವಿಷಯ ಎಲ್ಲ ಕಡೆಯು ಪಸರಿಸಿತು. ಕ್ರಾಂತಿಕಾರಿಗಳೆಲ್ಲರು ತಲೆ ಮರೆಸಿಕೊಂಡರು. ಆದರೆ ಇವರಿಗೆ ಅಜರ್ುನ ಸೇಠಿಮತ್ತು ಅವರ ಸಹೋದರಿ ಸಹಾಯ ಮಾಡಿದರು. ಆದರೆ ದೇಶದ್ರೋಹಿಯೊಬ್ಬನು ನೀಡಿದ ಸುಳಿವಿನ ಮೇರೆ ಅಶ್ಫಾಕನನ್ನು ಬಂಧಿಸಿ ಕೋಟರ್ಿಗೆ ಹಾಜರು ಪಡಿಸಲಾಯಿತು. ಅಲ್ಲಿನ ಒಬ್ಬ ಮುಸ್ಲಿಂನು ನಾನು ಮುಸ್ಲಿಂ, ನೀನು ಮುಸ್ಲಿಂ. ಆದರೆ ನೀನು ಹೋಗಿ ಹೋಗಿ ಆರ್ಯ ಸಮಾಜಿಯಾದ ರಾಮ್ಪ್ರಸಾದ್ ಜೊತೆಗಿದ್ದದ್ದು ಸರಿಯಲ್ಲ. ಅವನು ಇಡೀ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಹೊರಟಿದ್ದಾನೆ. ಆದ್ದರಿಂದ ಅವನ ವಿರುದ್ಧ ಸಾಕ್ಷ್ಯ ನುಡಿ ಎಂದು ಹೇಳಿದಾಗ, ಕೆಂಡಾಮಂಡಲರಾದ ಅಶ್ಫಾಕರು ರಾಮ್ಪ್ರಸಾದ್ರ ಮೇಲಿದ್ದ ನಂಬಿಕೆಯನ್ನು ತಿಳಿಸಿ ಹೇಳಿದ. ಅವರು ಮೊದಲು ಬಾರಿಗೆ ಬಾರಿಗೆ ಬ್ರಿಟಿಷರ ಕುಟಿಲ ನೀತಿಯಾದ ಒಡೆದು ಆಳುವುದನ್ನು ಮೆಟ್ಟಿನಿಂತರು. ಕೊನೆಯವರೆಗೂ ರಾಮ್ಪ್ರಸಾದ್ರ ಸ್ನೇಹಿತನಾಗಿ ಬಂದ ಅಶ್ಫಾಕನು ಸಾಯುವಾಗಲೂ ಕೂಡ ಜೊತೆಯಲ್ಲಿಯೇ ಮಡಿದು ಹಿಂದೂ ಮುಸ್ಲಿ ಭಾಯಿ-ಭಾಯಿ ಎನ್ನುವುದನ್ನು ನಿರೂಪಿಸಿದರು. ಇಂಥ ಅದಮ್ಯ ಚೇತನ ಕುರಿತು ಇಂದು ಯಾರಿಗೂ ತಿಳಿಯದಂತಾಗಿರುವುದು ವಿಪಯರ್ಾಸವಲ್ಲದೇ ಮತ್ತೇನು?

ಬದಲಾಗುವರೇ ಭಾರತೀಯರು?

ಜಗತ್ತಿನ ಶಕ್ತಿಯುತ ರಾಷ್ಟ್ರ ಎಂದರೆ ನಾವು ಜಪಾನ್ ಎಂದು ಒಪ್ಪಿಕೊಳ್ಳಲೇ ಬೇಕು. ಯಾಕೆ? ಅಂತಿರಾ ಆಗೊಂದು ಬರಿ ಜಗತ್ತಿನ ಹಿರಿಯಣ್ಣ ಎನಿಸಿಕೊಂಡಿರುವ ಅಮೇರಿಕ ಸಿಕ್ಕ ರಾಷ್ಟ್ರವಾದ್ ಜಪಾನ್ ಮೇಲೆ ಅಣುಬಾಂಬ ದಾಳಿ ಮಾಡಿತು.ಇದರಿಂದ ಇಡಿ ಜಪಾನ್ ತತ್ತರಿಸಿ ಹೋಗಿತ್ತು.ಆಗ್ ಇಡಿ ವಿಶ್ವ ಸಮುದಯವೆಲ್ಲ ಇನ್ನು ಮುಂದೆ ಜಪಾನ್ ಕಥೆ ಮುಗಿದೇ ಹೋಯಿತು ಎಂದುಕೊಂಡಿದ್ದರು. ಜಪಾನ್ ಮೇಲಿನ ದಾಳಿ ಅಲ್ಲಿನ ದೊಡ್ಡ ನಗರಗಳಾದ ಹಿರೋಶಿಮಾ ಮತ್ತು ನಾಗಾಸಾಕಿಗಳು ಸಂಪೂರ್ಣ ಬೂಡಿಯದವು ಆದ್ರೆ ಜಪಾನ್ ಇದರಿಂದಾ ಧ್ರುತಿಗೆಡಲಿಲ್ಲ ಕೆಲವೇ ಕೆಲವು ದಿನಗಳಲ್ಲಿ ಬೂದಿಯಿಂದಲೇ ಎದ್ದು ಬರುವ ಫಿನಿಕ್ಸ ಹಕ್ಕಿಯಂತೆ ಮೈಕೊಡವಿ ಎದ್ದು ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿರಿಯನ್ನನಾಗಿ ಬೆಳೆದು ನಿಂತಿತು.ಇದು ಜಪಾನಿಗರ ನಿಶ್ಚಲವಾದ ಮನಸ್ತಿತಿ ಕುರಿತು ತಿಳಿಸಿಕೊಡುತ್ತದೆ. ಮಾನವ ಸ್ವಾರ್ಥದ ದುರಂತದಿಂದಲೇ ಪುಟಿದೆದ್ದು ಬಂದ ಜಪಾನಿಗೆ ಪ್ರಕೃತಿ ಮಾಡಿದ ದುರಂತ ಏನು ಅಲ್ಲ ಎನ್ನುವಂತೆ ಮತ್ತೆ ಚೆತರಿಸಿಕೊಂಡುಬಿತ್ತಿದೆ.ಮೊನ್ನೆ ಮೊನ್ನೆಯಷ್ಟೇ ನೈಸರ್ಗಿಕ್ ವಿಕೋಪಕ್ಕೆ ತುತ್ತಾಗಿದ್ದ ಜಪಾನ ಕೇವಲ ಸುನಾಮಿ ಹಾವಳಿ ಮಾತ್ರವಲ್ಲದೆ ಅನುವಿಕಿರ್ಣ ಸೋರಿಕೆಯಿಂದ ಅಪಾರ ಸಾವು ನೋವು ಅನುಭವಿಸಿತು. ಆದರು ಎದೆಗುಂದಲಿಲ್ಲ ಡಾರ್ವಿನ್ ಸಿದ್ದಂತವಾದ "strugle for exsistence" ನಿಯಮವನ್ನು ಸ್ವಲ್ಪ ಬದಲಿಸಿ "strugle for achivements" ಎನ್ನುವುದನ್ನು ಸಾಬೀತು ಪಡಿಸಲು ಹೊರಟಿರುವ ಜಪಾನಿಗರ ಸಾಮರ್ತ್ಯವನ್ನು ನಾವು ಮೆಚ್ಚಲೇ ಬೇಕು. ಸುನಾಮಿ ಅಪ್ಪಳಿಸಿದ ಮರುದಿನವೇ ಅನೇಕ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವುದು ಇಡೀ ಜಗತ್ತೇ ನಿಬ್ಬೆರಗಾಗಿ ನೋವುವಂತಾಗಿದೆ. ಹದಗೆಟ್ಟ ಹೆದ್ದಾರಿಗಳು,ಭಾಗ್ನವಾದ್ ನಿವೇಶನಗಳು,ಕೊಚ್ಚಿಹೋದ ಕಾರುಗಳು ,ಮುಚ್ಚಿಹೊದ್ ಸಮುಚ್ಚ್ಯಗಳಿಂದ ತುಂಬಿಹೋಗಿತ್ತು ಜಪಾನ್ . ಆದರೆ ಕೇವಲ್ ಒಂದುವರ ಕಳೆಯುವುದರೊಳಗೆ ಅಲ್ಲಿ ಇಂಥ ದುರ್ಗಟನೆ ಸಂಭವಿಸಿದ್ದು ನಿಜವೇ ಎನ್ನುವ ಮಟ್ಟದಲ್ಲಿ ಮತ್ತೆ ಪುನರ್ ನಿರ್ಮಾಣಗೊಂಡಿದೆ. ಇದನ್ನು ನೋಡುತ್ತಿದ್ದರೆ ಅವರ ಕಾರ್ಯದ ವೇಗ,ಅವರಲ್ಲಿನ ಶಿಸ್ತು ಸಂಯಮ, ಹೋರಾಟದ ಮನೋಭಾವ ಜಗತ್ತಿಗೆ ಮದರಿಯಗುಬೇಕು ಎನಿಸುತ್ತದೆ. ಅದಕ್ಕೆ ಒಂದು ಚಿಕ್ಕ ಪೆನ್ನಿನಿಂದ ಹಿಡಿದು ದೈತ್ಯಗಾತ್ರದ ಯಂತ್ರಗಳ ವರೆಗೂ ಜಾಗತಿಕ ಮಾರುಕಟ್ಟೆಯನ್ನು ಜಪಾನ್ ಆಕ್ರಮಿಸಿಕೊಂಡಿದೆ. ಇಲ್ಲಿಯವರೆಗೂ "made in japan"ಎನ್ನುವಾ ಹೆಗ್ಗಳಿಕೆ ಹಾಗೆ ಉಳಿಸಿಕೊಂಡು ಬಂದಿದೆ. ಭಾರತದ ಒಂದು ರಾಜ್ಯದ ವಿಸ್ತಿರ್ನದಷ್ಟಿರುವ ಜಪಾನ್ ಇಂದು ಜಗತೀನ ಯಾವ ರಾಷ್ಟ್ರಕ್ಕೂ ಸವಾಲು ಹಾಕುವ ಮಟ್ಟದಲ್ಲಿದೆ .
ಇದೆಲ್ಲವನ್ನು ನೋಡುತ್ತಾ ಮನಸ್ಸು ಕೊಂಚ ವಿಚಲಿತವಗುತ್ತದೆ. ನಮ್ಮ ದೇಶದ ಕುರಿತು ಹಲವಾರು ಪ್ರಶ್ನೆಗಳು ಜೊತೆಯಲ್ಲಿಯೇ ಬೇಸರ ಹುಟ್ಟಿಕೊಳ್ಳುತ್ತದೆ.ವಿಶ್ವದ ದೊಡ್ದರಾಷ್ಟ್ರಗಳ ಪಟ್ಟಿಯಲ್ಲಿ ಏಳನೇ ಸ್ತನವನ್ನು ಹೊಂದಿರುವ ಭಾರತ ಮಾನವ ಸಂಪನ್ಮೂಲದಲ್ಲಿ ಎರಡನೇ ಸ್ತಾನವನ್ನು ಹೊಂದಿದೆ.ಇಷ್ಟೆಲ್ಲಾ ಹೊಂದಿರುವ ಭಾರತದೆಶವೆಕೆ ಇನ್ನು ಶಕ್ತಿಯುತ ರಾಷ್ಟ್ರ ಎನಿಸಿಕೊಳ್ಳುತ್ತಿಲ್ಲ ?ಜಪಾನಿಗರ ಹಾಗೆ ನಮ್ಮವರು ಏಕೆ ವಿಚಾರ ಮಾಡುತ್ತಿಲ್ಲ? ಎನ್ನುವ ಪ್ರಶ್ನೆಗಳು ನಮ್ಮಲ್ಲಿ ಕಾಡದೆ ಇರವು. ಉತ್ತರಕರ್ನಾಟಕದಲ್ಲಿ ಪ್ರವಾಹ ಬಂದು ಹೋಗಿ ಸುಮಾರು ಒಂದು ವರ್ಷ ಗತಿಸಿತು. ಆದರೆ ಅಂದು ಪ್ರವಾಹದಲ್ಲಿ ಸಂತ್ರಸ್ತರಾಗಿ ಉಳಿದವರು ಇಂದಿಗೂ ಕೂಡ ಅತಂತ್ರ ಸ್ತಿತಿಯಲ್ಲಿಯೇ ಜೀವನಸಾಗಿಸುತ್ತಿದ್ದರೆ. ಇದನ್ನು ಗಮನಿಸಿದರೆ ನಮ್ಮಲ್ಲಿನ ಬೇಜವಾಬ್ದಾರಿತನ ಮತ್ತು ಹದಗೆಟ್ಟ ವ್ಯವಸ್ತೆಯ್ ದರ್ಶನವಾಗುತ್ತದೆ. ನಮ್ಮಲ್ಲಿ ಏನಾದರು ದುರಂತ ಆದರೆ ಸಾಕು ಕೇಂದ್ರ ಮಂತ್ರಿಯಿಂದ ಹಿಡಿದು ಚಿಲ್ಲರೆ ರಾಜಕಾರಣಿವರೆಗೂ ಬೀದಿಗಿಳಿದು ಪರಿಹಾರ ನಿಧಿ ಸಂಗ್ರಹ,ಚಂದಾ ಸಂಗ್ರಹಿಸೋಕೆ ಶುರುವಿಟ್ಟುಕೊಳ್ಳುತ್ತಾರೆ. ಬದಲಿಗೆ ನೊಂದವರಿಗೆ ನೇರವಾಗಿ ಸಹಾಯ ಮಾಡುವ ಮಟ್ಟದ್ದಲ್ಲಿ ಯಾರು ಪ್ರಯತ್ನಿಸುವುದಿಲ್ಲ ನೊಂದವರು ಮತ್ತೆ ಬದುಕು ಕಟ್ಟಿಕೊಳ್ಳುವ ಯೋಚನೆ ಕೂಡಾ ಮಾಡುವುದಿಲ್ಲ. ಇ ರೀತಿಯಾಗಿ ಬಂದ ಹಣದಿಂದ ತಮ್ಮ ಖಜಾನೆ ತುಂಬಿಸಿಕೊಳ್ಳುವ ಜನನಾಯಕರಿರುವಾಗ ಎಲ್ಲಿಂದ ಉದ್ದಾರ ಅಭಿವೃದ್ದಿ ನೀವೇ ಹೇಳಿ. ಅಂದು ಸಂತ್ರಸ್ತರ ಪರಿಹಾರ ನಿಧಿ ಲಪಟಾಯಿಸಿದ್ದಾರೆ ಎನ್ನುವ ಆರೋಪ ಹೊತ್ತಿರುವಾ ಮುಖಂಡರು ಇಂದು ಪರಮ ಪತಿವ್ರತೆಯ ಗೆಟಪ್ಪಿನಲ್ಲಿ ತಿರುಗಾದುತ್ತಿರುವುದು ಕಂಡರೆ ನಮ್ಮ ದೇಶದ ಬ್ರಷ್ಟತೆ ಎಷ್ಟರಮಟ್ಟಿಗಿದೆ ಎಂಬುದು ಮನದಟ್ಟಾಗುತ್ತದೆ.
ಜಪಾನಿನಲ್ಲಿ ಒಂದು ದಿನದ ಮುಷ್ಕರ ಎಂದರೆ ಕಾರ್ಮಿಕರೆಲ್ಲರೂ ಕಪ್ಪುಪಟ್ಟಿ ಧರಿಸಿಕೊಂಡು ದಿನಕ್ಕಿಂತ ಎರಡು ಘಂಟೆ ಹೆಚ್ಚು ಕೆಲಸ ಮಾಡುತ್ತಾರೆ. ಇದರಿಂದ ಪ್ರತಿಭಟನೆಯ ಜೊತೆಗೆ ಪ್ರಗತಿಯು ಆಗುತ್ತದೆ. ಆದರೆ ನಮ್ಮಲ್ಲಿ ಮುಷ್ಕರ ಎಂದರೆ ಇರೋ ಕೆಲಸವನ್ನು ಬಿಟ್ಟು ಭಾರತ ಬಂದ ,ಕರ್ನಾಟಕ ಬಂದ,ಬಸ್ಸಿಗೆ ಬೆಂಕಿ, ಕಚೇರಿಗೆ ಕಲ್ಲು ಮುಂತಾದ ದುಸ್ಕ್ರುತ್ಯಗಳೇ ನಡೆಸಿದರೆ ಅಭಿವೃದ್ದಿಯ ಮಾತೆಲ್ಲಿಂದ ಬರಬೇಕು ನೀವೇ ಹೇಳಿ? ನಮ್ಮ ಇಂಥ ಕೊಳಕು ಮನಸ್ತಿತಿ ನೋಡಿದ ಬ್ರಿಟಿಷರು "ಭಾರತ ಎಂಬುದು ಅತ್ಯಂತ ದಡ್ಡ ಜನರಿರುವ ಅತಿ ದೊಡ್ಡ ದೇಶ ಭಾರತ "ಎಂದು ಕರೆದಿದ್ದು. ನಮ್ಮವರು ಜಪಾನಿಗರ ಹಗೆ ಆಗೋದು ಯಾವಾಗ?

Sunday, March 20, 2011

ನಾಡು ಮರೆತ ನಾಯಕರು-ಭಾಗ 2


ಆ ದಿನಗಳೇ ಹಾಗಿದ್ದವು. ಅವರ ತಲೆಯಲ್ಲಿದ್ದ ವಿಚಾರಗಳೆಂದರೆ ಕೇವಲ ಭಾರತ ಮಾತೆಯ ಬಂಧನ ಮುಕ್ತಿ. ಅದಕ್ಕಾಗಿ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ಬ್ರಿಟಿಷರ ಗುಂಡಿಗೆ ಗುಂಡಿಗೆಯನ್ನೊಡ್ಡಿ ಹುತಾತ್ಮರಾದರು. ಕೇವಲ ಶಾಂತಿಯ ಮಂತ್ರವನ್ನು ಜಪಿಸುತ್ತ, ಬ್ರಿಟಿಷರ ಬೂಟಿನೇಟು ಸಹಿಸುತ್ತ ಬದುಕದೆ, ಸಿಡಿದೆದ್ದರು. ಪರಿಣಾಮ ಬೆತ್ತಲೆ ಸಮಾಜದಲ್ಲಿ ಬಟ್ಟೆ ಹಾಕಿಕೊಳ್ಳುವವನನ್ನು ಮೂರ್ಖ ಎನಿಸಿಕೊಳ್ಳುತ್ತಾನೆ. ಅಂತೆಯೇ ಬ್ರಿಟಿಷರಲ್ಲಿ ಶಾಂತಿಯಿಂದ ತಲೆತಗ್ಗಿಸಿ ಸ್ವಾತಂತ್ರ್ಯದ ಭಿಕ್ಷೆ ಕೇಳುತ್ತಿದ್ದವರು ಇತಿಹಾಸದಲ್ಲಿ ಹಿರೋಗಳಾಗಿ ಮಿಂಚಿದರೆ, ಇದ್ಯಾವುದಕ್ಕೂ ಜಗ್ಗದ ಕ್ರಾಂತಿಕಾರಿಗಳು ಅದೇ ಇತಿಹಾಸದ ಪುಟದಲ್ಲಿಂದು ಖಳನಾಯಕರೆಂದು ಬಿಂಬಿತರಾಗಿ ಕಳೆದು ಹೋಗಿದ್ದಾರೆ. ಕಳೆದು ಹೋದ ಕ್ರಾಂತಿಯ ಕಿಡಿಗಳನ್ನು ಮರಳಿತೋರಿಸುವ ಪ್ರಯತ್ನ ಈ ಲೇಖನದ್ದಾಗಿದೆ.
ಸ್ವತಂತ್ರ್ಯ ಬಾನಿನಲ್ಲಿ ಮಿನುಗಬೇಕಾಗಿದ್ದ ಧೃವತಾರೆಗಳು ಇಂದು ಇತಿಹಾಸದ ಯಾವುದೋ ಮೂಲೆಯಲ್ಲಿ ಮಂಕಾಗಿ ಬಿಟ್ಟಿವೆ. ಅಂತಹ ಪ್ರಜ್ವಲ ತಾರೆಗಳ ಪರಿಚಯ ಈ ಕೆಳಗಿನಂತಿದೆ.
ಸರ್ದಾರ್ ಅಜೀತ್ ಸಿಂಗ್
ಅಪ್ರತಿಮ ದೇಶಭಕ್ತನಾಗಿ ಅತಿ ಚಿಕ್ಕ ವಯಸ್ಸಿನಲ್ಲಿ ನಗುನಗುತ ನೇಣುಗಂಬ ಏರಿದ ಕ್ರಾಂತಿಕಾರಿ ಭಗತ್ಸಿಂಗನ ಚಿಕ್ಕಪ್ಪನೇ ಈ ಸರದಾರ ಅಜಿತ್ಸಿಂಗ್. ಬ್ರಿಟಿಷ್ ಗುಲಾಮಗಿರಿ ವಿರುದ್ಧ ತಿರುಗಿ ಬಿದ್ದ ಧೈರ್ಯವಂತ ವ್ಯಕ್ತಿ. ಲಾಲಾ ಲಜಪತರಾಯರ ನಿಕಟವತರ್ಿಯಾಗಿದ್ದ ಇವರು ಪಂಜಾಬಿನ ಮುಂಚೂಣಿಯ ರೈತ ಹೋರಾಟಗಾರರ ಚಳುವಳಿಗೆ ಮಾರ್ಗದರ್ಶಕರಾಗಿದ್ದರು.
ಪಂಜಾಬಿನ ರೈತರನ್ನು ಬ್ರಿಟಿಷ್ ಸಕರ್ಾರವು ಅತ್ಯಂತ ಹೀನಾಯವಾಗಿ ನಡೆಸಿ ಕೊಳ್ಳುತ್ತಿತ್ತು. ಅದರಲ್ಲೂ ರಾವಿ ಮತ್ತು ಚಿನಾಬ್ ನದಿಗಳ ಮಧ್ಯಪ್ರದೇಶದಲ್ಲಿದ್ದ ನಾಲೆಗಳ ವಲಸೆ ನಗರಗಳಲ್ಲಿ ಮತ್ತು ಲೈಲ್ಪುರದಲ್ಲಿ ನೆಲೆಸಿರುವ ರೈತರಿಗೆ ವಿಧಿಸಿದ್ದ ಅಸಹ್ಯಕರ ಕಾನೂನುಗಳು ಮತ್ತು ಅಧಿಕವಾದ ಕಂದಾಯದಿಂದಾಗಿ ರೋಸಿ ಹೋಗಿದ್ದರು. ಇದರಿಂದ ಲಾಲಾಲಜಪತರಾಯರ ಜೊತೆ ಸೇರಿ ಸದರ್ಾರ ಅಜಿತ್ಸಿಂಗ್ ರೈತ ಚಳುವಳಿ ಆರಂಭಿಸಿದರು.
`ಪಗಡೀ ಸಂಭಾಲ ಜತ್ತ (ಹೇ ಜತ ರೈತನೇ ಎಚ್ಚೆತ್ತು ನಿನ್ನ ರುಮಾಲು ಸಂಬಾಳಿಸಿಕೊ) ಅಂದರೆ ಸಿಖ್ಖರ ನಾಡು. ಸಿಖ್ರಿಗೆ ಪಗಡಿ ಎಂಬುದು ಗೌರವ ತರುವ ಕುರುಹು. ಹೀಗಾಗಿ ಬ್ರಿಟಿಷರಿಗೆ ತಲೆ ಬಾಗಬೇಡಿ ಎನ್ನುವ ಸಂದೇಶ ಗೀತೆಯನ್ನು ರಚಿಸಿ ಹಾಡಿ ರೈತರಲ್ಲಿದ್ದ ರೋಷವನ್ನು ಬಡಿದೆಬ್ಬಿಸಿದರು. ಇವರ ಮಾತಿಗೆ ಪ್ರತಿಕ್ರಿಯಿಸಿದ ರೈತರು ತಕ್ಷಣ ಬ್ರಿಟಿಷರಿಗೆ ತಿರುಗಿ ಬಿದ್ದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಲಾಲಾ ಲಜಪತರಾಯ ಮತ್ತು ಅಜಿತ್ಸಿಂಗ್ರನ್ನು ಬಂಧಿಸಿ ಮ್ಯಾಂಡ್ಲೆ ಜೈಲಿಗೆ ತಳ್ಳಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು. ಅನಿವಾರ್ಯವಾಗಿ ಬ್ರಿಟಿಷರು ಬಿಡುಗಡೆ ಮಾಡಿ ಇವರನ್ನು ಗಡಿಪಾರು ಮಾಡಿದರು.
ನಂತರ ಅಜಿತ್ಸಿಂಗ್ ಅಪಘಾನಿಸ್ತಾನ ಮತ್ತು ಇರಾನಿನಲ್ಲಿ ವಾಸವಿದ್ದ ಭಾರತೀಯರಿಗೆ ದೇಶಭಕ್ತಿಯ ಕಿಚ್ಚು ಹಚ್ಚಿ ಭಾರತ ಸ್ವಾತಂತ್ರ್ಯದ ಹುಚ್ಚು ಹಿಡಿಸುವ ಕಾರ್ಯ ಮಾಡತೊಡಗಿದರು. ಅಷ್ಟೇ ಅಲ್ಲದೆ ದೇಶದಲ್ಲಿ ಹೋರಾಟ ಮಾಡುತ್ತಿರುವ ಹೋರಾಟಗಾರರಿಗೆಲ್ಲ ಸಹಕಾರ ಪ್ರೋತ್ಸಾಹ ನೀಡಬೇಕಾದವರು ನೀವೇ ಅಲ್ಲವೇ ಎಂದು ಹೇಳಿ ಸಹಾಯ ಮಾಡಲು ಪ್ರೇರಣೆ ನೀಡಿದರು. ಎರಡನೆಯ ಮಹಾಯುದ್ಧ ಮುಗಿದ ನಂತರ ಭಾರತಕ್ಕೆ ಹಿಂದಿರುಗಿದ ಅವರು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವೇ ಡಾಲ್ಹೌಸಿಯಲ್ಲಿ ನಿಧನ ಹೊಂದಿದರು. ನಂತರ ಕ್ರಾಂತಿಕಾರಿ ಎಂಬ ಕಾರಣಕ್ಕೆ ಇತಿಹಾಸದಲ್ಲಿಯೂ ಮರೆತು ಹೋದರು.
ಅಗ್ನಿಶಖೆಯ ಹರಿಕಾರ ಖುದಿರಾಂ ಬೋಸ್ ಮತ್ತು ಪ್ರಫುಲ್ಲಾ ಚಾಕಿ
1889ನೇಯ ಡಿಸೆಂಬರ್ನಲ್ಲಿ ಜನ್ಮತಾಳಿದ ಖುದಿರಾಂ ಬೋಸ್ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡನು. ಅವನ ಅಕ್ಕ ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸನು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡು ಬಿಟ್ಟನು. ಬಕೀಂಚಂದ್ರ ಚಟಜರ್ಿ ಬರೆದ ಆನಂದ ಮಠ ಮತ್ತು ಆನಂದದಾತ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದವು. `ವಂದೇ ಮಾತರಂ ಅಂತೂ ಇವರಲ್ಲಿ ದೇಶಭಕ್ತಿಯೇ ಮನತುಂಬಿ ಹರಿದಾಡುವಂತೆ ಮಾಡಿತು. ಹೀಗಾಗಿ ಸುಮಾರು ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡ. ಅಲ್ಲದೇ ಅರ ಕಾರ್ಯವಾಗಿ ಕರಪತ್ರಗಳನ್ನು ಹಂಚಿ ಸಿಕ್ಕಿಬಿದ್ದು ಬಿಡುಗಡೆಯಾದನು.
ಆಗ ತಾನೇ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆದ್ದಿತು. ಇದಕ್ಕೆ ಹಲವಾರು ಪತ್ರಿಕೆಗಳು ಕೂಡ ಸಹಕಾರ ನೀಡುತ್ತಿದ್ದರು. ಹೀಗಾಗಿ ಬ್ರಿಟಿಷರಿಗೆ ವಿರುದ್ಧವಾಗಿ ಬರೆದ ಪತ್ರಿಕೆಗಳ ಮೇಲೆ ಮೊಕದ್ದಮೆ ಹೂಡಲಾಗುತ್ತಿತ್ತು. ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ವಂದೇ ಮಾತರಂ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದನು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿಮೆರೆದನು.
ಸುಶೀಲ್ ಕುಮಾರನೇನೋ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದ. ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದನು. ಇದನ್ನು ಸಹಿಸದ ಕೆಲವು ಕ್ರಾಂತಿಕಾರಿಗಳು ಕಿಂಗ್ಸ್ಪೋಡರ್್ನನ್ನು ಕೊಲ್ಲಲು ತೀಮರ್ಾನಿಸಿದರು. ಇದು ಹೇಗೋ ಸಕರ್ಾರಕ್ಕೆ ತಿಳಿದು ಅವನನ್ನು ಮುಜಾಪರಪುರಕ್ಕೆ ವರ್ಗ ಮಾಡಿದರು.
ಹೇಗಾದರಾಗಲಿ ಕಿಂಗ್ಸ್ಫೋಡರ್್ನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿಧರ್ಾರದಿಂದ ಈ ಕಾರ್ಯವನ್ನು `ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್ರು ಖುದಿರಾಂ ಮತ್ತುಆತನ ಸಹ ಕ್ರಾಂತಿಕಾರಿ ಪ್ರಫುಲ್ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ಫೋಡರ್್ನ ಚಲನವಲನಗಳನ್ನು ಗಮನಿಸತೊಡಗಿದರು.
ತಪ್ಪಿದ ಬೇಟೆ
ಕಿಂಗ್ಸ್ಫೋಡರ್್ನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲು ನಿರ್ಧರಿಸಲಾಗಿತ್ತು. ಎಂದಿನಂತೆ ಕಾರು ಹೊರಟು ಬಂದಿತು. ಅದರೊಳಗೆ ಯಾರಿದ್ದಾರೆಂದು ಗಮನಿಸದೆ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ಫೋಡರ್್ ಬದಲಾಗಿ ಅದರಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು. ಇತ್ತ ಕಿಂಗ್ಸ್ಫೋಡರ್್ನನ್ನು ಕೊಂದೆವೆಂದುಕೊಂಡ ಇವರು ಒಂದೊಂದು ದಿಕ್ಕಿಗೊಬ್ಬರು ಓಡಿದರು. ಈ ಘಟನೆ ನಡೆದದ್ದು 1908ನೆ ಏಪ್ರಿಲ್ 30ರಂದು.
ಆರಂಭವಾದ ಅಗ್ನಿಶಖೆ
ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ಫೋಡರ್್ನನ್ನು ಕೊಲ್ಲಲಿಲ್ಲ ನಿಜ. ಆದರೆ ಇಡಿ ಬ್ರಿಟಿಷ್ ಸಾಮ್ರಾಜ್ಯದಲ್ಲಿಯೇ ಮೊದಲ ನಡುಕ ಹುಟ್ಟಿಸಿತು. ತಣ್ಣಗಿದ್ದ ಬ್ರಿಟಿಷರ ನೆಮ್ಮದಿಗೆ ಬೆಂಕಿ ಇಟ್ಟು ಅಗ್ನಿಶಖೆಯನ್ನು ಆರಂಭಿಸಿ ಬಿಟ್ಟಿತು. ಇವರೆಸೆದ ಬಾಂಬು ಕೇವಲ ಕಿಂಗ್ಸ್ಫೋಡರ್್ನ ಗಾಡಿ ಚೂರು ಚೂರು ಮಾಡಿತಲ್ಲದೆ ಬ್ರಿಟಿಷ್ ಸಾಮ್ರಾಜ್ಯವಾದದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿ ಹಾಕಿತು.
ಸಿಕ್ಕಿಬಿದ್ದಸಿಂಹ ಮತ್ತು ಅಮರವಾದ ಹುಲಿ:
ಮುಜಾಫುರದಿಂದ ಸುಮಾರು, 25 ಮೈಲುಗಳಾಚೆ ಖುದಿರಾಂ ಬೋಸ್ನನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. 1908ರ ಆಗಸ್ಟ್ 11ರಂದು ಗಲ್ಲಿಗೇರಿಸಲಾಯಿತು.
ಇತ್ತ ಪ್ರಫುಲ್ಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ರಿವಾಲ್ವರ್ನಿಂದ ತಾನೇ ಸುಟ್ಟುಕೊಂಡು ಅಮರನಾದನು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಗ್ನಿಯುಗಕ್ಕೆ ಮುನ್ನುಡಿ ಬರೆದಂತಹ ಇಂಥ ಮಹಾನ್ ಚೇತನಗಳು ಜನರಿಗೆ ಅಸ್ಪಷ್ಟವಾದ ಪ್ರತಿಬಿಂಬದಂತಾಗಿರುವುದು ಖೇದಕರವಾಗಿದೆ.
ರಾಶ್ ಬಿಹಾರಿ ಬೋಸ್
ಭಾರತ ಸ್ವತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿಗಳ ಪಾತ್ರ ಎಷ್ಟು ಮಹತ್ವದ್ದಾಗಿದೆಯೋ, ಕ್ರಾಂತಿಕಾರಿ ಹೋರಾಟದಲ್ಲಿ ರಾಶ್ ಬಿಹಾರಿ ಬೋಸ್ರ ಪಾತ್ರವು ಅಷ್ಟೇ ಮಹತ್ವದ್ದಾಗಿದೆ. ರಾಶ್ ಬಿಹಾರಿ ಬೋಸ್ರವರು ಕ್ರಾಂತಿಕಾರಿಗಳಲ್ಲಿನ ಅನಘ್ರ್ಯ ರತ್ನ ಎಂದು ಹೇಳಬಹುದು.
1910ರಿಂದ 1915ರವರೆಗಿನ ಭಾರತದೊಳಗಿನ ಕ್ರಾಂತಿಕಾರಿ ಚಟುವಟಿಕೆಯಲ್ಲಿನ ಅವರ ಪಾತ್ರ ಮತ್ತು ಅವರ ಆಗ್ನೇಯ ಏಷ್ಯಾದ ಎರಡು ದಶಲಕ್ಷ ಭಾರತೀಯರ ನಡುವೆ ನಡೆಸಿದ ಕ್ರಾಂತಿಕಾರ ಚಟುವಟಿಕೆಗಳು ಸುಭಾಷಚಂದ್ರ ಬೋಸ್ರು ಐ.ಎನ್.ಎ ಕಟ್ಟಲು ಬೇಕಾಗಿದ್ದ ಸೂಕ್ತವಾದಂತಹ ಆಧಾರವನ್ನು ಒದಗಿಸಿಕೊಟ್ಟವು. ಇದರಿಂದಾಗಿಯೇ ಅವರಹೆಸರು ಚಿರಸ್ಥಾಯಿಯಾಗಿ ಉಳಿಯಿತು.
1886ರಲ್ಲಿ ಬಂಗಾಳದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಾಶ್ ಬಿಹಾರಿ ಬೋಸರು ಪದವಿ ಪಡೆದಿದ್ದು ಫೋಟರ್್ ವಿಲಿಯಂ ಕಾಲೇಜಿನಿಂದ. 1912ರ ಹಾಡರ್ಿಂಗ್ ಬಾಂಬ್ಸ್ಫೋಟದಲ್ಲಿ ಭಾಗಿಯಾಗುವುದರೊಂದಿಗೆ ಕ್ರಾಂತಿಕಾರಕ ಚಟುವಟಿಕೆಗೆ ಪದಾರ್ಪಣೆ ಮಾಡಿದರು. ಲಾಡರ್್ ಹಾಡರ್ಿಂಗ್ ವೈಸರಾಯ ಆಗಿ ದೆಹಲಿಯಚಾಂದಿನಿ ಚೌಕ್ಗೆ ಬರುತ್ತಿದ್ದಾಗ ಬೋಸರು ಅವರ ಮೇಲೊಂದು ಬಾಂಬ್ ಎಸೆದರು. 1914ರ ಹಾಗೂ 1915ರ ಲಾಹೋರ್ ಮತ್ತು ಬನಾರಸ್ ಪಿತೂರಿಯಲ್ಲಿಯೂ ಅವರ ಪಾತ್ರ ಸಕ್ರಿಯವಾಗೇ ಇತ್ತು.
ಇದೆಲ್ಲವನ್ನು ಗಮನಿಸಿದ ಬ್ರಿಟಿಷರು ಅವರನ್ನು ಸೆರೆ ಹಿಡಿಯಲು ಬಹಳ ಪ್ರಯತ್ನಿಸಿದರು. 1915ರಲ್ಲಿ ತಲೆತಪ್ಪಿಸಿಕೊಂಡು ಜಪಾನ್ ಸೇರಿದರು. ಆಗ ಜಪಾನಿನ ಸಕರ್ಾರದ ಮನ ಒಲಿಸಿ ರಾಶ್ ಬಿಹಾರಿ ಬೋಸರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಬೇಕೆಂದು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಅವರನ್ನು ಜಪಾನಿನ ಬ್ರೆಡ್ ವ್ಯಾಪಾರಿ ದಂಪತಿಗಳು 7 ವರ್ಷಗಳ ಕಾಲ ಸಾಕಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ಜಪಾನಿನ ನಾಗರಿಕತೆ ದೊರಕಿಸಿಕೊಟ್ಟರು. ಒಬ್ಬ ಕ್ರಾಂತಿಕಾರಿಗೆ ಅವರು ಮಾಡಿದ ಸಹಾಯವನ್ನು ಇಡೀ ಭಾರತೀಯರು ನೆನಪಿಸಿಕೊಳ್ಳಲೇಬೇಕು.
ಜಪಾನಿ ಪೌರತ್ವ ಬಂದ ನಂತರ ಬಹಿರಂಗವಾಗಿ ಕಾರ್ಯಗತರಾದರು. ಭಾರತೀಯ ವಲಸಿಗರನ್ನು ಪ್ರೇರೆಪಿಸುತ್ತ ಅವರಲ್ಲಿ ಸ್ವತಂತ್ರ್ಯದ ಕಿಚ್ಚು ಹಚ್ಚತೊಡಗಿದರು. 1924ರಲ್ಲಿ ಅವರು ಟೋಕಿಯೋದಲ್ಲಿ `ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಪ್ರಾರಂಭಿಸಿದರು. ಅದೇ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡ ಅವರು ಬ್ರಿಟಿಷರಿಂದ ನರಳುತ್ತಿದ್ದ ಎಲ್ಲಾ ದೇಶದ ಜನರಲ್ಲಿ ಐಕ್ಯತಾ ಭಾವನೆ ಮೂಡಿಸಲು `ಪ್ಯಾನ್ ಏಷ್ಯನ್ ಲೀಗ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಲೀಗ್ನ ವಾಷರ್ಿಕ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ 20 ಕೋಟಿ ಭಾರತೀಯರನ್ನು ಬಡಿದೆಬ್ಬಿಸಿತು.
`ಒಂದು ಅವ್ಯಕ್ತ ರಾಷ್ಟ್ರ. ಇಂಡಿಯಾ, ಒಬ್ಬ ಶತೃ-ಇಂಗ್ಲೆಂಡ್. ಮತ್ತು ಒಂದು ಗುರಿ-ಪೂರ್ಣ ಸ್ವತಂತ್ರ್ಯ, ಈ ಮೂರೂ ಇವೆಯೆಂದು ನಾವೆಲ್ಲರೂ ಸದಾ ನೆನಪಿನಲ್ಲಿಟ್ಟುಕೊಂಡಿರಬೇಕುಎಂದು ಹೇಳುತ್ತಾ ದೇಶಭಕ್ತಿಯ ಜ್ಯೋತಿ ಬೆಳಗಿಸಿದರು.
`ಇಂಡಿಯನ್ ನ್ಯಾಷನಲ್ ಆಮರ್ಿಯಲ್ಲಿ ಸೇರಲು ಜಪಾನ್ನಲ್ಲಿ ಸೆರೆಹಿಡಿದವರನ್ನು, ಸೇನಾ ಸೇವೆಯನ್ನು ತೊರೆದ ಅಧಿಕಾರಿಗಳನ್ನು ಮತ್ತು ಯೋಧರನ್ನು ಪ್ರೇರೇಪಿಸಲು ಮುಖ್ಯ ಕಾರಣರಾದವರೆ ರಾಶ್ಬಿಹಾರಿ ಬೋಸರು.ಹೀಗೆ ಭಾರತ ಮಾತೆಯ ಬಂಧನ ಮುಕ್ತಿಗಾಗಿ ಅವಿರತವಾಗಿ ಶ್ರಮಿಸಿದ ರಾಶ ಬಿಹಾರಿ ಬೋಸರನ್ನು ಕುರಿತು ಸುಭಾಷಚಂದ್ರ ಬೋಸರು `ರಾಶ್ ಬಿಹಾರಿ ಅವರು ಗ್ರೇಟರ್ ಈಸ್ಟ್ ಏಷ್ಯಾ ವಾರ್ ಪ್ರಾರಂಭವಾದಾಗಿನಿಂದ ಪೂರ್ವ ಏಷ್ಯಾದ ಭಾರತೀಯ ಸ್ವರಾಜ್ಯದ ಚಳುವಳಿಗೆ ತಂದೆಯಂತಿದ್ದಾರೆ ಎಂದು ಹೇಳಿದರು.
ಬಿಡುವಿಲ್ಲದ ಪ್ರಯಾಣದಿಂದ ಮತ್ತು ಕ್ರಾಂತಿಕಾರಿಗಳ ಚಟುವಟಿಕೆಗಳಿಂದ ಅವರ ಆರೋಗ್ಯ ಹದಗೆಟ್ಟು 1945ರಲ್ಲಿ ಮೃತರಾದರು.
ಭಾರತದ ಕ್ರಾಂತಿಕಾರಿಗಳಿಗೆಲ್ಲ ಅನಘ್ರ್ಯ ರತ್ನದಂತಿರುವ ರಾಶ್ ಬಿಹಾರಿ ಬೋಸ್ ಸ್ವತಂತ್ರ ಗಂಗೆಯ ತೊರೆಗೆ ಧುಮುಕಿ ದಡ ಸೇರುವ ಮೊದಲೇ ಅಸುನೀಗಿದ್ದು ದುರದೃಷ್ಟವೇ ಸರಿ. ಇಂತಹ ಮಹಾನ್ ಚೇತನ ನಮಗೆ ತಿಳಿಯದಂತೆ ಹೋಗಿರುವುದು ನಮ್ಮಲ್ಲಿನ ಹಾಳು ವ್ಯವಸ್ಥೆಯ ಪ್ರತಿರೂಪವಾಗಿದೆ.
ಚೇತನ ಉದ್ಧಾಮ್ ಸಿಂಗ್
ಅದು 1919 ನೇ ಇಸ್ವಿ ಪಂಜಾಬಿನ ಒಂದು ತೋಟ. ಅದರ ಹೆಸರು ಜಲಿಯನ್ ವಾಲಾಭಾಗ್. ಅಲ್ಲಿ ಸಾವಿರಾರು ಜನರು ಸೇರಿ ಸ್ವತಂತ್ರ್ಯ ಸಂಗ್ರಾಮದ ರೂಪುರೇಷೆಗಳ ಬಗ್ಗೆ ಚಚರ್ಿಸುತಿದ್ದರು. ಆ ತೋಟದ ಸುತ್ತಲೂ ಅಳೆತ್ತರದ ಗೋಡೆ ಇದ್ದು ಒಂದೇ ಗೇಟಿನಿಂದ ಸಂಚಾರ ಕಲ್ಪಿಸಲಾಗಿತ್ತು. ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಯಾವುದೇ ಸುಳಿವನ್ನ ನೀಡ ದೆಯೇ ನಿಶ್ಯಸ್ತ್ರದಾರಿಯಾಗಿದ್ದ ಶಾಂತಿಪ್ರಿಯ ಸಭಿಕರ ಮೇಲೆ ಗುಂಡಿನ ಮಳೆಗರಿಸಿದ. ಇದರಿಂದ ಕ್ಷಣ ಮಾತ್ರದಲ್ಲಿ ರಾಶಿ ರಾಶಿ ಹೆಣಗಳು ಉರುಳಿ ದವು. ಇದನ್ನು ನೋಡುತ್ತಿದ್ದ ಯುವಕ ಇದಕ್ಕೆ ಕಾರಣನಾದ ಜನರಲ್ ಡಯರ್ನನ್ನು ಕೊಲ್ಲಲ್ಲೇ ಬೇಕು ಎನ್ನುವಂತ ಹಠಕ್ಕೆ ಬಿದ್ದ. ಆ ಧೀರ ಕ್ರಾಂತಿಕಾರಿಯೇ ಉದ್ಧಾಮ ಸಿಂಗ್.
ಈ ಗುರಿಯನ್ನು ಹೊತ್ತು ಕೊಂಡು ಮುನ್ನಡೆದ ಉದ್ಧಾಮ ಸಿಂಗ್ ಇಂಗ್ಲೆಂಡ್ಗೆ ತೆರಳಿ ಅಲ್ಲಿನ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡ. ಹೆಸರಿಗೆ ಮಾತ್ರ ಕಾಲೇಜು ಸೇರಿಕೊಂಡ. ಇವನ ಗುರಿ ಮತ್ರ ಜನರಲ್ ಡಯರ್ನ ಹತ್ಯೆ ಮಾಡುವುದಾಗಿತ್ತು. ಬೆಳಿಗ್ಗೆ ಕಾಲೇಜು ಸಂಜೆಯಾಗುತ್ತಲೇ ಜನರಲ್ ಡಯರ್ನ ಹುಡಕಾಟ ಮಾಡುತಿದ್ದನು. ಹೀಗೆಯೇ ಹಲವಾರು ದಿನಗಳು ನಡೆದು ಹೋದವು. ಯಾವಾಗಲೂ ಒಂದು ರಿವಾಲ್ವರ್ನನ್ನು ಜೊತೆಯಲ್ಲಿಟ್ಟುಕೊಂಡೇ ತಿರುಗಾಡುತ್ತಿದ್ದನು.
ಶಪಥ ಪೂರೈಸಿದ ಶೂರ
ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದು ಆಗಲೇ 21 ವರ್ಷಗಳ ಗತಿಸಿದ್ದವು. ಉದ್ಧಾಮಸಿಂಗ್ರವರು ಹುಡುಕಾಟಕ್ಕೂ ಒಂದು ದಿನ ಕಾಲ ಕೂಡಿ ಬಂದಿತು. 1940ರ ಮಾಚರ್್ 13ರಂದು ಲಂಡನ್ನ ಕಾಕ್ಸಟಲ್ ಹಾಲಿನಲ್ಲಿ ಡಯರ್ನನ್ನು ಗುಂಡಿಟ್ಟು ಕೊಂದನು. ನೂರಾರು ಜನ ಸಭಿಕರು ಸೇರಿದ್ದ ಹಾಲ್ನಲ್ಲಿ ನಡೆದು ಬಂದ ಉದ್ಧಾಮಸಿಂಗ್ ನೇರವಾಗಿ ಹಣೆಗೆ ಗುಂಡಿಟ್ಟು ಕೊಂದನು. ಅವನ ಮುಖದಲ್ಲಿ ಉಗ್ರಸ್ವರೂಪವನ್ನು ನೋಡಿದರೆ ಯಾವುದೇ ಪೊಲೀಸರು ಕೂಡ ಅವನನ್ನು ಬಂಧಿಸಲು ಹೆದರಿದರು. ಆದರೆ ಶಪಥ ಪೂರೈಸಿಕೊಂಡ ತೃಪ್ತಿಯಲ್ಲಿ ಉದ್ಧಾಮಸಿಂಗ್ ತಾವೇ ಶರಣಾಗತರಾದರು.
ನಂತರ ವಿಚಾರಣೆ ಎಂಬ ನಾಟಕವಾಡಿ ಮಹಾನ್ ಚೇತನ ಉದ್ಧಾಮಸಿಂಗ್ರನ್ನು ಮರಣದಂಡನೆಗೆ ಗುರಿಪಡಿಸಿದರು. 1919ರಲ್ಲಿ ಬ್ರಿಟಿಷ್ ಸಕರ್ಾರ ಬುದ್ಧಿಯಿಲ್ಲದೆ ನಡೆಸಿದ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಂಡ ಸಂತೃಪ್ತಿಯಿಂದ ಉದ್ಧಾಮಸಿಂಗ್ ಅಮರರಾದರು.
ಈ ರೀತಿಯಲ್ಲಿ ನಮ್ಮವರನ್ನುಕೊಂದ ವ್ಯಕ್ತಿಯನ್ನು ಕೊಲ್ಲಲು ಸತತ 21 ವರ್ಷಗಳವರೆಗೆ ಹಸಿದ ಸಿಂಹದಂತೆ ಕಾದು ಕುಳಿತು ಶಪಥ ಪೂರೈಸಿಕೊಂಡ ಪಂಜಾಬಿನ ಈ ಸಿಂಹ ಕೇವಲ ಬೆರಳೆಣಿಕೆಯವರಿಗೆ ಮಾತ್ರ ಗೊತ್ತು. ಇತಿಹಾಸದಲ್ಲಿ ಇವರು ಕೂಡ ಮರೆಯಾಗಿರುವುದು ನಮ್ಮ ದುರ್ಭಾಗ್ಯವೆ ತಾನೇ ?

Saturday, March 19, 2011

ನಾಡು ಮರೆತ ನಾಯಕರು

ಸ್ವತಂತ್ರ್ಯ ಗಂಗೆಗೆ ಸಾವಿರ ತೊರೆಗಳಿವೆ. ಕೇವಲ ಶಾಂತಿ ಮೂಲದಿಂದ ಮಾತ್ರ ಸ್ವ ತಂತ್ರ್ಯ ಲಭಿಸಿದೆ ಎಂಬ ಕಲ್ಪನೆಯಲ್ಲಿರುವ ನಾವುಗಳು ಅದರ ಜೊತೆಯಲ್ಲಿ ಸ್ವತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಕ್ರಾಂತಿಕಾರಿ ಚೇತನಗಳ ಬಗ್ಗೆ ತಿಳಿದು-ಕೊಳ್ಳುವುದು ಅಗತ್ಯವಾಗಿದೆ. ಶಾಂತಿದೂತರನೆಲ್ಲ ಪಠ್ಯಪುಸ್ತಕದಲ್ಲಿ ಅಳವಡಿಸಿ ಅವರೇ ಸ್ವತಂತ್ರ್ಯ ಹೋರಾಟದ ಸೇನಾನಿಗಳು ಆವರಿಂದಲೇ ಭಾರತಕ್ಕೆ ಸ್ವತಂತ್ರ್ಯ ಸಿಕ್ಕಿದ್ದು, ಎಂದು ಬಿಂಬಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿದ ಕರಿನೀರಿನ ಶಿಕ್ಷೆಗೆ ಗುರಿಯಾದ ಕ್ರಾಂತಿಕಾರಿಗಳನ್ನೆಲ್ಲ ಇತಿಹಾಸದ ಪುಟಗಳಿಂದ ಅಳಿಸಿ ಹಾಕುವ ಪ್ರಯತ್ನ ನಡೆದಿದೆ.
ಸ್ವಾತಂತ್ರ್ಯ ಹೋರಾಟ-ದಲ್ಲಿ ಪ್ರಮುಖವಾಗಿ ಎರಡು ಗುಂಪುಗಳಿದ್ದವು. ಒಂದು ಶಾಂತಿಪ್ರಿಯ ಹೋರಾಟ ಗಾರರು ಮತ್ತೊಂದು ಕ್ರಾಂತಿ ಕಾರಿಗಳ ಪಡೆ. ಎರಡು ಪಂಥಗಳ ದಾರಿ ಬೇರೆಯಾಗಿದ್ದೇನೋ ನಿಜ, ಆದರೆ ಅಂತಿಮ ಗುರಿ ಒಂದೇ ಆಗಿತ್ತು. ಅದು ಭಾರತ ಮಾತೆಯ ಬಂಧನ ಮುಕ್ತಿ. ಆದರೆ ಸ್ವತಂತ್ರ್ಯ ಸಿಕ್ಕಿದ್ದು ಕೇವಲ ಶಾಂತಿಪ್ರಿಯರಿಂದಲೇ ಎಂದು ಹೇಳುತ್ತಾ ಕ್ರಾಂತಿಕಾರಿ ಹೋರಾಟ ಗಾರರನ್ನು ಉಗ್ರಗಾಮಿ-ಗಳೆಂದು ಪರಿಗಣಿಸಿ ಅವರ ತ್ಯಾಗ ಬಲಿದಾನಗಳನ್ನು ಲೆಕ್ಕಿಸದೆ ಇತಿಹಾಸದಲ್ಲಿ ತೆರೆಮರೆಗೆ ಸರಿಸಲಾಗಿದೆ.
ಇತಿಹಾಸದಲ್ಲಿ ತೆರೆಮರೆಯಾಗಿರುವ ಕ್ರಾಂತಿಕಾರಿಗಳ ಕುರಿತಾದ ಸಂಕ್ಷಿಪ್ತ ವಿವರ ಈ ಕೆಳಗೆ ಕೊಡಲಾಗಿದೆ.
ಕ್ರಾಂತಿಗೆ ಮುನ್ನುಡಿ ಬರೆದ
ಛಾಪೇಕರ್ ಸಹೋದರರು
ನಮ್ಮ ಯುವಪೀಳಿಗೆಗೇನು ಗೊತ್ತು ಇತಿಹಾಸ ತೋರಿದ್ದನ್ನು ಸುಮ್ಮನೆ ನಂಬಿಕೊಂಡು ನಡೆದು ಬಿಡುತ್ತಾರೆ. ಆದರೆ ತೆರೆಮರೆಗೆ ಸರಿದ ಮಹತ್ಮರೆಷ್ಟೋ ಜನ ಗೊತ್ತೇ ಇಲ್ಲದೆ ಹೋಗಿದ್ದಾರೆ. ಅಂತಹವರಲ್ಲಿ ಈ ಛಾಪೇಕರ ಸಹೋರರು ಕೂಡ ಇದ್ಧಾರೆ.
ಶ್ರೀ ಹರಿ ಛಾಪೇಕರ ಅವರ ಮೂವರು ಮಕ್ಕಳಾದಂತಹ ಧಾಮೋದರ, ಬಾಲಕ್ರಿಷ್ಣನ್ ಮತ್ತು ವಾಸುದೇವ ಅವರು ಹುಟ್ಟಿದ್ದು ಮಹರಾಷ್ಟ್ರದ ಛರುಷ್ವಾರ್ ಎಂಬ ಹಳ್ಳಿಯಲ್ಲಿ ವಿದ್ಯಾವಂತರಾಗಿದ್ದ ಈ ಸಹೋದರರು ಕ್ರಾಂತಿಕಾರಿ ಮನೋಭಾವದವರಾಗಿದ್ದರು. ವ್ಯಾಯಾಮ ಯೋಗ ಮಾಡಿಕೊಂಡು ಕಟ್ಟು ಮಸ್ತಾಗಿದ್ಧವರು.
ಮರಾಠಿ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಬಾಲಗಂಗಾಧರ ತಿಲಕರ `ಕೇಸರಿ' ಪತ್ರಿಕೆಯನ್ನು ಓದುವುದರೊಂದಿಗೆ ಪ್ರಭಾವಿತರಾಗಿದ್ದರು. ಹೀಗಾಗಿ ಅವರನ್ನು ಸಹಜವಾಗಿಯೇ ಕ್ರಾಂತಿಕಾರಕ ಭಾವನೆ ಮೈಗೂಡಿ ಬಿಟ್ಟಿದ್ದವು. ಅದೇ ಸಮಯಕ್ಕೆ ಸರಿಯಾಗಿ ಅಂದರೆ 1897ರಲ್ಲಿ ಪುಣೆ ನಗರ ಸಂಪೂರ್ಣ ಪ್ಲೇಗಿನಿಂದ ನರಳುತ್ತಿತ್ತು. ಜನರ ಸಾವು, ಅಕ್ರಂದನ ಮುಗಿಲು ಮುಟ್ಟಿತ್ತು. ಆದರೆ ಬ್ರಿಟಿಷ್ ಸರ್ಕಾರ ಯಾವುದೇ ರೀತಿಯ ಕಾರ್ಯವನ್ನು ಮಾಡದೇ ಹೋಯಿತು. ಆದರೆ ಬ್ರಿಟನ್ ರಾಣಿ ವಿಕ್ಟೋರಿಯಾಳು ಸಿಂಹಾಸನ ಏರುವ ಕಾರ್ಯಕ್ರಮವನ್ನು ವಿಜೃಂಬಣೆಯಿಂದ ನಡೆಸುವು-ದಕ್ಕೆ ಬ್ರಿಟಿಷ್ ಸಕರ್ಾರ ತೀಮರ್ಾಣಿಸಿತು. ಪ್ಲೇಗ್ ಕಮೀಷನರ್ ಆಗಿ ನೇಮಕಗೊಂಡಿದ್ದ ಬ್ರಿಟಿಷ್ ಅಕಾರಿ ಮಿ.ರಾಂಡ್ ಪ್ಲೇಗ ನೀರ್ಮುಲನೆ ಬದಲು ರಾಣಿ ಪಟ್ಟಾಕಾರದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದು, ಮತ್ತು ಅವನ ದುರ್ನಡತೆ ಛಾಪೇಕರ್ ಸಹೋದರರನ್ನು ಕೆರಳಿಸಿದವು. ಹೀಗಾಗಿ ಛಾಪೇಕರ್ ಸಹೋದರರು ರಾಂಢನನ್ನು ಗುಂಡಿಟ್ಟು ಕೊಂದು ಕ್ರಾಂತಿಕಾರಕ ಹೋರಾಟಕ್ಕೆ ಭಾಷ್ಯ: ಬರೆದರು. 1905 ಭಂಗಾಳ ವಿಭಜನೆ-ಯಾದಾಗ ದೇಶದ ಇತರ ಭಾಗಗಳಲ್ಲಿಯೂ ಸಹ ಕ್ರಾಂತಿಯ ವಾತಾವರಣೆ ಸೃಷ್ಟಿಸಿದರು. ಅವರನ್ನು ಸೆರೆಹಿಡಿದ ಬ್ರಿಟಿಷ್ ಸಕರ್ಾರ ಮೂರು ಸಹೋದರರನ್ನು ಕ್ರಮವಾಗಿ 1898 ರ ಏಪ್ರೀಲ್ 8, 1899ರ ಮೇ 8, 1899 ಮೇ ಹತ್ತರಂದು ನೇಣುಗಂಬಕ್ಕೇರಿಸಿದರು. ಕ್ರಾಂತಿಗೆ ನಾಂದಿ ಹಾಡಿದ ಈ ವೀರ ಸಹೋದರರು ಇಂದು ಎಷ್ಟೋ ಜನರಿಗೆ ಗೊತ್ತೇ ಇಲ್ಲದ್ದು ನಮ್ಮ ದುರದೃಷ್ಟವಲ್ಲದೆ ಮತ್ತೇನು?
ಅಪ್ರತಿಮ ದೇಶಭಕ್ತ
ವಿನಾಯಕ ದಾಮೋದರ ಸಾವರ್ಕರ್
ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಸೆರೆಮನೆಗೆ ಸೇರಿದವರು ಲಕ್ಷೋಪಾದಿಯಲ್ಲಿದ್ದಾರೆ. ಆದರೆ ಸ್ವತಂತ್ರ್ಯ ಗಂಗೆಯ ಒಡಲಿಗೆ ಧುಮುಕಿ `ಕರಿನೀರಿನ' (ಕಾಲಾಪಾನಿ) ಶಿಕ್ಷೆ ಅನುಭವಿಸಿದ ಅಪ್ರತಿಮ ಹೋರಾಟಗರ ಎಂದರೆ ವಿನಾಯಕ ದಾಮೋದರ್ ಸಾವರಕರ್ (ವೀರ ಸಾವರ್ಕರ್)
ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲದೆ, ಕ್ರಾಂತಿಕಾರರು, ಕವಿ, ಚಿತ್ರಕಾರ, ಸಮಾಜ ಸುಧಾರಕರಾಗಿ ಜನರ ಮನಸ್ಸಿನಲ್ಲಿ ಅಳಿಸಲಗದ ಮುದ್ರೆ ಒತ್ತಿದ್ದಾರೆ.
1883 ರ ಮೇ 28 ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಾಗ್ರು ಎಂಬ ಹಳ್ಳಿಯಲ್ಲಿ ಸಾವರ್ಕರರು ಜನಿಸಿದರು. ಶಾಲಾ ದಿನಗಳಿಂದಲೆ ದೇಶಭಕ್ತಿಯನ್ನು ಮೈಗೂಡಿಸಿಕೊಂಡರು. ಪುಣೆಯ ಪಗ್ಯರ್ುಸನ್ ಕಾಲೇಜಿನಲ್ಲಿ ಪದವಿ ಮಗುಸಿದ ಇವರು ಮುಂಬೈ ಲಾ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿದರು. ಕಲಿಕೆಯ ಸಮಯದಲ್ಲಿಯೇ ಸ್ವಾತಂತ್ರ್ಯದ ಹುಚ್ಚು ಹಿಡಿಸಿಕೊಂಡ ಅವರು `ಅಭಿನವ ಭಾರತ' ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಕಟ್ಟಿದರು.
ಬ್ಯಾರಿಸ್ಟರ್ ಆಗಬೇಕಿದ್ದವರು ಬಂಧನವಾದರು
1906 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದ ಸಾವರ್ಕರ್ರವರು ಅಲ್ಲಿಯೂ ತಮ್ಮ ಕ್ರಾಂತಿಕಾರಕ ನಿಲುವುಗಳಿಂದ ಹಿಂದೆ ಸರಿಯಲಿಲ್ಲ.
ಇಟಲಿಯ ಒಬ್ಬ ಶ್ರೇಷ್ಠ ದೇಶಭಕ್ತನ ಕುರಿತಾಗಿ ಒಂದು ಪುಸ್ತಕವನ್ನು ರಚಿಸಿದರು. ಇದನ್ನು ಭಾರತಕ್ಕೆ ತಂದು ತಜರ್ುಮೆಮಾಡಿ ಪ್ರಕಟಿಸಿದ ತಪ್ಪಿಗೆ ಸಾವರ್ಕರ್ ಅಣ್ಣ ಗಣೇಶ್ರವರು ಜೈಲುಪಾಲಾದರು. 1857 ರ ಮಹಾದಂಗೆಯ ಕ್ರಾಂತಿಕಾರಿ ಹೋರಾಟಗಾರನೊಬ್ಬನ ಕುರಿತು ``ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್" ಎಂಬ ಪುಸ್ತಕ ರಚಿಸಿದರು. ಇದನ್ನು ಸಕರ್ಾರ ತಕ್ಷಣ ನಿಷೇಸಿತು.
ಹೀಗೆಯೇ ಕ್ರಾಂತಿಕಾರಿ ಮನೋಭಾವದೊಂದಿಗೆ ಅಭಿನವ ಭಾರತದ ಒಂದು ಶಾಖೆಯನ್ನು ಇಂಗ್ಲೆಂಡಿನಲ್ಲಿ ಆರಂಭಿಸಿ ಬ್ರಿಟೀಷರ ಕೆಂಗಣ್ಣಿಗೆ ಗುರಿಯಾದರು. ಕರ್ಜನ್ ವೈಟ್ನ ಮರಣದ ಕಾರಣದಿಂದ ದಸ್ತಗಿರಿಯಾದ ಸಾವರ್ಕರ್ ವಿಚಾರಣೆಗಾಗಿ ಭಾರತಕ್ಕೆ ಬಂದರು. ಬ್ಯಾರಿಸ್ಟರ್ ಆಗಿ ಸೂಟು ಬೂಟು ಧರಿಸಿಕೊಂಡ ಭಾರತಕ್ಕೆ ಬರಬೇಕಿದ್ದ ಮಹಾತ್ಮ ಬಂಯಾಗಿ ಬಂದಿದ್ದರು.
ಕನಿ ನೀರಿನ ಶಿಕ್ಷೆಗೆ ಗುರಿಯಾಗಿ ಅಂಡಮಾನಿನ ನರಕಸದೃಷವಾದ ಸೈಲ್ಯೂಲರ್ ಜೈಲು ಸೇರಿದರು. ಅಲ್ಲಿಯೂ ಪಟ್ಟು ಬಿಡದ ಅವರು ಸುಧಾರಣಾ ಕಾರ್ಯ ಮುಂದುವರೆಸಿದರು. ತಾವಿದ್ದ ಜೈಲಿನ ಕೊಠಡಿಗಳ ಗೋಡೆಗಳ ಮೇಲೆ ಹತ್ತುಸಾವಿರ ದೇಶ ಭಕ್ತಿಯ ಸಾಲುಗಳನ್ನು ಮಳೆಯಿಂದ ಕೆತ್ತಿ ಸ್ವತಂತ್ರ್ಯದ ಸಂದೇಶ ಸಾರುತ್ತಿದ್ದರು. ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರ ಕೃತ್ಯಗಳನ್ನು ಖಂಡಿಸಿದರು. 23 ವರ್ಷಗಳ ಸುರ್ಘ ಕಷ್ಟದ ಹಾದಿಯನ್ನು ಸವೆಸಿ ಬಂದ ಸಾವರ್ಕರಿಗೆ ಗಾಂಜಿ ನೇತೃತ್ವದ ಕಾಂಗ್ರೇಸ್ನ ಮೇಲೆ ನಂಬಿಕೆ ಇರಲಿಲ್ಲ. ಹೀಗಾಗಿ ಹಿಂದೂ ಮಹಾಸಭೆ ಸೇರಿ ಅವರ ಅಧ್ಯಕ್ಷರಾದರು. (ಒಂದು ವೇಳೆ ಕಾಂಗ್ರೇಸ್ಸೇರಿದ್ದರೆ ಆವರು ಉಚ್ಛ ಶ್ರೇಣಿ ನಾಯಕರಾಗಿರುತ್ತಿದ್ದರೇನೋ?)
1940 ರಲ್ಲಿ ಬ್ರಿಟಿಷರದಿಂದ ತಪ್ಪಿಸಿಕೊಂಡು ಭಾರತದಿಂದ ಹೋಗುವ ಮೊದಲು ಸುಭಾಷ ಚಂದ್ರ ಭೊಸರು ಸಾವರ್ಕರ್ರನ್ನು ಭೇಟಿ ಮಾಡಿದ್ದರು. ಅವರ (ಐ್ಞಛಜಿಚ್ಞ ಘೆಚಠಿಜಿಟ್ಞಚ್ಝ ಅ್ಟಞಢ)ಗೆ ಸಹಾಯಕವಾಗಲೆಂದು ಸೈನ್ಯಕ್ಕೆ ಸೇರಲು ಯುವಕರಿಗೆ ಕರೆನೀಡುತ್ತಿದ್ಧರು. ``ಇಂಡಿಯಾದ ರಾಜಕೀಯವನ್ನು ಭಾರತೀಯಗೊಳಿಸಿ, ಮತ್ತು, ಹಿಂದುತ್ವವನ್ನು ಮಿಲಿಟರಿಗೊಳಿಸಿ" ಎಂದು ಸಂದೇಶವಿತ್ತರು.
ಇಂತಹ ಅಪ್ರತಿಮ ದೇಶ ಪ್ರೇಮಿಯನ್ನು ಗಾಂಜಿ ಮರಣದ ನಂತರ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಈ ಮಹಾನ್ ಸೇನಾನಿ, ದೇಸಭಕ್ತನನ್ನು ಇತಿಹಾಸದ ಪುಟದಲ್ಲಿ ಖಳನಾಯಕನಂತೆ ಗುರುತಿಸಲು ಹೋರಟಿರುವುದು ದುರುದೃಷ್ಟವೇ ಸರಿ.
ನನ್ನ ದೇಹವನ್ನು ಛಿದ್ರಮಾಡಿ ಎಂದ ರ ಸುಶಿಲ್ ಸೇನ್
ಹದಿನೈದರ ಹರೆಯ ಎಂದರೆ ಸಧ್ಯ ನಾವು ಇನ್ನೂ ಚಿಕ್ಕವರು ಬುದ್ದಿ ಕಡಿಮೆ ಇರುವವರು ಎಂದು ಅಲಕ್ಷ್ಯ ತೋರುತ್ತೇವೆ. ಆದರೆ 15 ನೇ ವಯಸ್ಸಿನಲ್ಲಿಯೇ ಕ್ರಾಂತಿಕಾರಕ ನಿಲುವು ತೋರುವುದರೊಂದಿಗೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ ದೀಮಂತ ನಾಯಕ ಸುಶೀಲ್ ಸೇನ್.
1907 ರ ಅಗಸ್ಟ್ 26 ರಂದು ಕಲ್ಕತ್ತಾದ ಲಾಲ್ kOTಅನತ್ತ ಯುವಕರ ಗುಂಪೊಂದು ಘೋಷಣೆ ಕೂಗುತ್ತ ಹೊರಟಿತ್ತು. ಇದನ್ನು ಸಹಿಸದ ಬ್ರಿಟಿಷ ಸಕರ್ಾರದ ಗುಲಾಮಿ ಪೊಲೀಸರು ಇವರ ಮೇಲೆ ಲಾಠಿ ಪ್ರಹಾರ ಆರಂಭಿಸಿತು. ಹೊಡೆದಷ್ಟು ಜೋರಾಗಿ `ವಂದೇ ಮಾತರಂ' ಕೂಗೂ ಮಾರ್ಧನಿಸುತ್ತಿತ್ತು. ರೊಚ್ಚಿಗೆದ್ದ ಪೊಲೀಸರ ಲಾಠಿಚಾಜರ್್ ದಾರಿ ಹೋಕರ ಮೇಲೂ ಬಂದಿತು. ಆಗ ಅದನ್ನು ಸಹಿಸದ 15 ರ ಹರೆಯದ ಬಾಲಕ ಪೊಲೀಸರ ಕೈಲಿದ್ದ ಲಾಠಿ ಕಿತ್ತುಕೊಂಡು `ನಿನ್ನ ಲಾಠಿಯ ರುಚಿ ನೀನು ಸ್ವಲ್ಪ ನೋಡು' ಎಂದವನೇ ದಪ್ಪವಾದ ವ್ಯಕ್ತಿಯನ್ನು ಮನಸೋ ಇಚ್ಛೆ ಥಳಿಸಿದನು. ಇವನು ಹೊಡೆದ ವೇಗ ಎಷ್ಟಿತ್ತೆಂದರೆ ಇವನನ್ನು ಹಿಡಿಯಲು ಪೊಲೀಸರು ಹರಸಾಹಸ ಪಟ್ಟರು. ಆ ರ ಯುವಕ ಬೇರಾರು ಅಲ್ಲ. ಸುಶಿಲ್ ಸೇನ್.
ಕಲ್ಕತ್ತಾದ `ಒಂದೇ ಮಾತರಂ` ಪತ್ರಿಕೆಯ ಸಂಪಾದಕ ಅರವಿಂದರು, `ಭಯವನ್ನು ಬಿಟ್ಟು ಬಿಡು' ಎನ್ನುವ ಘೋಷಣೆ ಈ ಯುವಕನ ಎದೆಯಲ್ಲಿ ಹೊಕ್ಕು ಬಿಟ್ಟಿತ್ತು.
ಹುಡುಗನನ್ನು ಮ್ಯಾಜಿಸ್ಟ್ರೇಟರ್ ಮುಂದೆ ನಿಲ್ಲಿಸಲಾಯಿತು. ಆಗ ಹುಡುಗನಿಗೆ ಹದಿನೈದು ಛಡಿ ಏಟಿನ ಶಿಕ್ಷೆಯನ್ನು ನೀಡಿದರು. ಪ್ರತಿ ಹೊಡೆತಕ್ಕೂ ಅವನ ಬಾಯಿಯಿಂದ ಬರುತ್ತಿದ್ಧ ಒಂದೇ ಮಾತರಂ ಧ್ವನಿ ಅವನಲ್ಲಿದ್ದ ಅಪ್ರತೀಮ ದೇಶ ಪ್ರೇಮಕ್ಕೆ ಸಾಕ್ಷ್ಯ ನೀಡುತ್ತಿತ್ತು.
ಈ ಅಮಾನವೀಯ ಕೃತ್ಯವನ್ನು ಎಲ್ಲ ಪತ್ರಿಕೆಗಳು ಖಂಡಿಸಿದವು. ಸುಶಿಲ್ ಗೌರವಾರ್ಥ ಕಲ್ಕತ್ತಾದ ನ್ಯಾಷನಲ್ ಕಾಲೇಜನ್ನು ಒಂದು ದಿನ ಮುಚ್ಚಲಾ-ಯಿತು. 1907 ರ ಆಗಸ್ಟ್ 8 ರಂದು ಆ ಹುಡುಗನಿಗೆ ಸುರೇಂದ್ರನಾಥ ಬ್ಯಾನಜರ್ಿಯವರು ಕಳುಹಿಸಿದ ಸ್ವರ್ಣಪದಕ ನೀಡಿ ಸನ್ಮಾನಿಸಲಾಯಿತು.
ಸುಶೀಲ್ ಸೇನ್ ತನ್ನ ಯೌವ್ವನದಲ್ಲಿಯೇ ಭಾರತಾಂಬೆಯ ಮುಕ್ತಿಗೆ ಪಣತೊಟ್ಟು ಕ್ರಾಂತಿಕಾರಿ ಗುಂಪಿಗೆ ಸೇರಿಕೊಂಡು ಚಟುವಟಿಕೆ ಆರಂಭಿಸಿದನು. ನಂತರ ದಿನಗಳಲ್ಲಿ ಅಂದರೆ 15 ಮೇ 1908 ರಲ್ಲಿ ಅಲಿಪುರ ಕೇಸಿನಲ್ಲಿ ಅರವಿಂದರ ಜೊತೆಗೆ ಬಂಸಲಾಯಿತು. 7 ವರ್ಷಗಳ ಶಿಕ್ಷೆಯೂ ಆಯಿತು. ನಂತರದ ವಿಚಾರಣೆಯಲ್ಲಿ ಖುಲಾಸೆಯಾಗಿ ಹೊರಬಂದ ಸುಶೀಲ್ ಸೇನ್ ಮತ್ತೆ ತನ್ನ ಕ್ರಾಂತಿಕಾರಕ್ಕೆ ನಿಲುವುಗಳನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋರಾಟಕ್ಕೆ ಅಣಿಯಾದನು. ಇದು ಸ್ವತಂತ್ರ ಹೋರಾಟದ ಸಂದರ್ಭ, ಅದಕ್ಕಾಗಿ ಹಣಕಾಸಿನ ಅಗತ್ಯವಿದ್ದುದರಿಂದ ಕ್ರಾಂತಿಕಾರಿಗಳು ಶ್ರೀಮಂತರ ಮನೆಗಳನ್ನು ಮತ್ತು ಸಕರ್ಾರಿ ಇಲಾಖೆಗಳನ್ನು ಲೂಟಿ ಮಾಡುತ್ತಿದುದು ಸಾಮಾನ್ಯವಾಗಿತ್ತು. 1915 ರಲ್ಲಿ ನದಿಯಾ ಜಿಲ್ಲೆಯ ಪ್ರಾಗಪುರದಲ್ಲಿ ಡಕಾಯಿತಿ ಮಾಡಿಕೊಂಡು ದೋಣಿಯಲ್ಲಿ ತಪ್ಪಿಸಿಕೊಳ್ಳುತ್ತಿದ್ದವರನ್ನು ಪೊಲೀಸರ್ರು ಬೆನ್ನಟ್ಟಿದರು. ಆ ಪೊಲೀಸರಿಗೂ ದೋಣಿ ವಿಹಾರಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸುಶೀಲ್ ಸೇನ್ ಗಂಭೀರವಾಗಿ ಗಾಯಗೊಂಡರು. ಸಾಯುವ ಮೊದಲು ಇತರ ಕ್ರಾಂತಿಕಾರಿಗಳಿಗೆ ``ನನ್ನ ರುಂಡವನ್ನು ಮುಂಡದಿಂದ ಬೇರ್ಪಡಿಸಿ ಎಸೆಯಿರಿ ಎಂದು ಹೇಳಿದರು. ಇದರಿಂದ ಗುರುತಿಸಲಾಗದೆ ವಿಚಾರಣೆ ಬಂಧನ ನಿಲ್ಲುತ್ತವೆ. ಎಂಬುದು ಅವರ ನಿಲುವಾಗಿತ್ತು.
ಸಾಯುವಾಗಲೂ ಕೂಡ ತನ್ನ ಕ್ರಾಂತಿಕಾರಿ ನಿಲುವುಗಳಿಂದ ಹೊರಬರದ ಸುಶಿಲ್ ಸೇನ್ ಅಸಾಮಾನ್ಯವಾದ ಗುರಿ ಮುಟ್ಟುವುದಕ್ಕಾಗಿ ಎಡೆಬಿಡದೆ ಉತ್ಸಾಹ ಮತ್ತು ಹೋರಾಟದ ನಿಲುವನ್ನು ಹೊಂದಿದ್ದ. ಆದರೆ ನಾಡಿಗಾಗಿ ಪ್ರಾಣ ನೀಡಿದ ಈ ಮುಕುಟ ಮಣಿ ಇತಿಹಾಸದ ಎಲ್ಲೋ ಒಂದು ಮೂಲೆಯಲ್ಲಿ ಮರೆಯಾಗಿ ಬಿಟ್ಟಿದೆ.
ಸತ್ತು ಬದುಕುವೆನೆಂದು ಕಾತರ್ಾರ್ ಸಿಂಗ್ ಸೊರಬಾ
ಅವರಿಗೆ ಬರೀ ಹತ್ತೊಂಬತ್ತು ವರ್ಷ ವಯಸ್ಸು, ಕೋಟರ್ಿನ ಕಟಕಟೆಯಲ್ಲಿ ಎದೆ ಗುಂದದೆ ನಿಂತಿದ್ದರು. ನ್ಯಾಯಾಶರು ಮರಣದಂಡನೆಯ ತೀಪರ್ು ನೀಡಿದರು. ಆದರೆ ಒಂದು ಅವಕಾಶ ಎನ್ನುವಂತೆ `ಮರಣ ದಂಡನೆಗೆ ಬದಲಾಗಿ ಜೀವಾವ ಶಿಕ್ಷೆಗಾಗಿ ಬೇಡಿಕೊ" ಎಂದು ಉಪದೇಶ ನೀಡಿದರು. ಆದರೆ ಆ ಹುಡುಗನ ಮಾತು ಕೇಳಿದ ನ್ಯಾಯಾಶರೇ ಧಂಗಾಗಿ ಹೋದರು.
``ಜೈಲಿನಲ್ಲಿ ಕೊಳೆಯುವುದಕ್ಕೆ ಬದಲಾಗಿ, ಈಗ ಸತ್ತು ಪುನರ್ಜನ್ಮ ಪಡೆದು, ಮತ್ತೊಮ್ಮೆ ಮಾತೃ-ಭೂಮಿಯ ಸ್ವಾತಂತ್ರ್ಯಕ್ಕೆ ಹೋರಾ ಡುತ್ತೇನೆ." ಹೀಗೆ ಹೇಳಿದ ಆ ಯುವಕನೇ ಕತರ್ಾರ್ ಸಿಂಗ್ ಸೊರಬಾ.
ಪಂಜಾಬಿನ ಲೂಯಾನ ಪ್ರಾಂಥದ ಸೊರಬಾ ಎಂಬಲ್ಲಿ 1896 ರಲ್ಲಿ ಜನಿಸಿದ ಕತರ್ಾರ ಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಅಮೇರಿಕಾದಲ್ಲಿದ್ದ ಗದರ ಪಕ್ಷವನ್ನು ಸೇರಿದ್ಧರು. ಮೊದಲೇ ಕ್ರಾಂತಿಕಾರಿ ಮನೋಭಾವ ಹೊಂದಿದ್ದ ಅವರು 1913 ರಲ್ಲಿ ಭಾರತಕ್ಕೆ ಹಿಂತಿರುಗಿದ ಕೂಡಲೇ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತೊಡಗಿದರು.
ಮಿಲಿಟರಿ ಬಗ್ಗೆ ತಿಳಿದುಕೊಂಡಿದ್ದ ಕತರ್ಾರ್ ಸಿಂಗ್ ಸೈನಿಕರನ್ನು ಸ್ವತಂತ್ರ್ಯ ಹೋರಾಟಕ್ಕೆ ಸಿದ್ಧಗೊಳಿಸುತ್ತಿದ್ದನು. ಹೀಗೆಯೇ ಮುಂದುವರೆದ ಸಂದರ್ಭದಲ್ಲಿ 1918 ರಲ್ಲಿ ಲಾಹೋರ ಪಿತೂರಿಯೂ ನಡೆಯಿತು. ಇದರಲ್ಲಿ ಇವರ ಕೈವಾಡವಿದೆ ಎಂದು ಬಂಸಿದ ಬ್ರಿಟಿಷ್ ಸಕರ್ಾರ ಅವರ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತಲ್ಲದೇ ಮರಣ ದಂಡನೆಯನ್ನು ವಿಸಿತು.
ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳಲ್ಲಿ ಒಬ್ಬನಾಗಿ ಬಂದ ಕತರ್ಾರ್ ಸಿಂಗ ಸೊರಬಾ ಇಂದು ಯುವಕರಿಗೆ ಆದರ್ಶ ವ್ಯಕ್ತಿಯಾಗಬೇಕಿತ್ತು. ಆದರೆ ಇಂದು ಅವರ ಹೆಸರು ಎಷ್ಟೋ ಜನರಿಗೆ ಗೊತ್ತೆ ಇಲ್ಲದಿರುವುದು ನಮ್ಮ ದೌಭರ್ಾಗ್ಯ.
ಕ್ರಾಂತಿಕಾರಿಯಾಗಿದ್ದರು ಶಾಂತಿಗೆ ತಲೆಬಾಗಿದ ಬಾಬಾ ಪೃಥ್ವಿಸಿಂಗ್ ಅಜಾದ್
ಪಂಜಾಬಿನ ಒಂದು ಪುಟ ಹಳ್ಳಿಯಲ್ಲಿ ಹುಟ್ಟಿದ ಬಾಬಾ ಪೃಥ್ವಿಸಿಂಗ್ ಶಾಲೆಯ ವಿದ್ಯಾಭ್ಯಾಸವಾದ ಕೆಲವೇ ವರ್ಷಗಲ ನಂತರ ರಾಜಕೀಯಕ್ಕೆ ಧುಮುಕಿದರು ಮುಂದುವರೆದು 1911 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಗದ್ದರ್ ಪಕ್ಷದ ಕಾರ್ಯ ಕರ್ತರಾಗಿ ಸೇರಿಕೊಂಡರು. ಜೊತೆ ಜೊತೆಗೆ ಕ್ರಾಂತಿಕಾರಕ ಚಟುವಟಿಕೆಗೆ ಚಾಲನೆ ನೀಡಿದರು.
ತರುವಾಯ 1914 -15 ರಲ್ಲಿ ನಡೆದಂತಹ ಲಾಹೋರ ಪಿತೂರಿಯ ಮೊಕದ್ಧಮೆಯಲ್ಲಿ ಬಂಸಿ ಆರುವರ್ಷಗಳ ಅಂಡ ಮಾನಿನ ಜೈಲಿಗೆ ಕಳುಹಿಸಲಾ ಯಿತು. 1921 ರಲ್ಲಿ ಪೊಲೀಸರು ಬಾಬಾರನ್ನು ಬಂಸಿ ರೈಲಿನಲ್ಲಿ ಕರೆದೊಯ್ಯು ತ್ತಿರುವಾಗ ಓಡುತ್ತಿದ್ದ ರೈಲಿನಿಂದಲೇ ಜಿಗಿದು ತಪ್ಪಿಸಿಕೊಂಡ ಅವರ ಧೈರ್ಯ ಪರಾಕ್ರಮ ಮೆಚ್ಚಲೇಬೇಕು. ಅಂಡಮಾನಿನಿಂದ ಭಾರತಕ್ಕೆ ಬರುತ್ತಿದ್ದ ಇವರು ಸುಮಾರು ವರ್ಷಗಳ ಕಾಲ ಭೂಗತರಾಗಿವುಳಿದರು.
ಕ್ರಾಂತಿಕಾರಿ ಮನೋಭಾವವನ್ನು ಹೊಂದಿದ್ದರು ಕೂಡ ಗಾಂ ಜಿಯವರ ಮಾತುಗಳಿಂದ ಪ್ರಭಾವಿತರಾಗಿದ್ದರು. ಹೀಗಾಗಿ ಅಹಿಂಸಾ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲದಿದ್ಧರೂ ಕೂಡ ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಭಾಗವಹಿಸಿದ್ದರು.
ಮಹಾತ್ಮಾ ಗಾಂಜಿಯವರ ಮಾತುಗಳಿಂದ ಪ್ರಭಾವಿತರಾದ ಬಾಬಾರವರು ತಮ್ಮನ್ನು ತಾವು ಸಕರ್ಾರಕ್ಕೆ ಒಪ್ಪಿಸಿಕೊಂಡರು. ಸ್ವತಂತ್ರ್ಯದ ಸಿಹಿವುಂಡ ಅದೃಷ್ಟವಂತ ಕ್ರಾಂತಿಕಾರಿಯಾದ ಬಾಬಾ ಪೃಥ್ವಿಸಿಂಗ್ ಆಜಾದ್-ರವರು ನಂತರದ ದಿನಗಳಲ್ಲಿ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಹೀಗೆ ಸ್ವತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿ ಕೊಂಡಿದ್ದ ದೇಶಭಕ್ತ ಬಾಬಾ ಪೃಥ್ವಿಸಿಂಗ ಎಂದರೆ ಯಾರು ಎಂದು ಕೇಳುವ ಮಟ್ಟದಲ್ಲಿ ಇತಿಹಾಸದಲ್ಲಿ ಕಾಣೆಯಾಗಿರುವುದು ವಿಪರ್ಯಾಸ . ಇಂತಹ ಮಹಾನ್ ನಾಯಕರು ನಮ್ಮಿಂದ ಮರೆಯಾಗಿರುವುದು ನಾನು ಕಂಡ ನತದೃಷ್ಟೆ ಭಾರತದ ನೋವಿನ ಕತೆಯಾಗಿದೆ.